ಸಿರುಗುಪ್ಪ: ನಗರದ ತಾಲೂಕು ಕಛೇರಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ ತಹಶೀಲ್ದಾರ್ ಎನ್.ಆರ್.ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆಯಿತು.
ತಹಶೀಲ್ದಾರರು ಮಾತನಾಡಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವವನ್ನು ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗು ವುದು, ಕೊರೊನಾ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕೆಂದು ಸರ್ಕಾರ ನೀಡಿರುವ ನಿರ್ದೇಶನವನ್ನು ಪಾಲಿಸಿ, ತಾ.ಪಂ.ಸಭಾಂಗಣದಲ್ಲಿ ಜು.24ರಂದು ಜಯಂತಿಯನ್ನು ಆಚರಿಸಲಾಗುವುದು. ಯಾವುದೇ ಆಡಂಬರ ವಿಲ್ಲದೆ ಸರಳವಾಗಿ ಜಯಂತಿಯನ್ನು ಆಚರಿಸಬೇಕೆಂದು ಹೇಳಿದರು.
ಬಿ.ಸಿ.ಎಂ.ಅಧಿಕಾರಿ ಗಾದಿಲಿಂಗಪ್ಪ, ಎ.ಎಸ್.ಐ. ಪಂಪಾಪತಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಹಡಪದ ಅಪ್ಪಣ್ಣ ಸಮಾಜದ ಮುಖಂಡ ರಾದ ಹೆಚ್.ಕೆ.ನಾಗರಾಜ, ಮೌನೇಶ, ಬಸವರಾಜ, ಹೆಚ್.ವೀರೇಶ, ಕರಿಯಪ್ಪ, ಆದಿಬಸಪ್ಪ, ಅಮರೇಶ, ಮಹೇಶ, ಮಲ್ಲಿಕಾರ್ಜುನ ಇದ್ದರು.