ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಸಮೀಪದ ನಾಗಲಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ ಉಳಿಮೇಶ್ವರ ಗ್ರಾಮದ ಸತ್ಯಂ ದೇವಿ ಹಾಗೂ ಆಂಜನೇಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ನಿಂತಿದ್ದು ಹಾಗೂ ರಸ್ತೆ ಚಿಕ್ಕದಾಗಿದ್ದು ಸಾರ್ವಜನಿಕರಿಗೆ ಸಂಚಾರ ಮಾಡಲು ತುಂಬಾ ತೊಂದರೆಯಾಗಿದೆ ಈ ಕೂಡಲೆ ರಸ್ತೆ ಅಗಲೀಕರಣ ಮಾಡಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಸತ್ಯಮ ದೇವಿ ಸಂಘದ ವತಿಯಿಂದ ನಾಗಲಾಪೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮೂಲಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ರಾಯಚೂರು ಇವರಿಗೆ ಮನವಿ ಪತ್ರ ಸಲ್ಲಿಸಿದರು,
ಇದೆ ಸಂದರ್ಭದಲ್ಲಿ ಸತ್ಯಮ ದೇವಿ ದೇವಸ್ಥಾನದ ಅಧ್ಯಕ್ಷ ಸತ್ಯಪ್ಪ ಬೋವಿ, ಈರಣ್ಣ ನೀರಾವರಿ, ರಾಜು ಲೆಕ್ಕಿಹಾಳ, ಸದಸ್ಯರಾದ ವಿರೇಶ ಚಿತ್ರನಾಳ, ಸಿದ್ದಪ್ಪ ನಾಯಕ ಹಾಗೂ ನಿರುಪಾಧಿ ಚಿತ್ರನಾಳ ಇದ್ದರು,