ಐಶ್ವರ್ಯಾ ರೈ-ಅಭಿಷೇಕ್​ ಬಚ್ಚನ್ ಜೊತೆ​ ಕಾಲ ಕಳೆದ ಮಾಣಿಕ್ಯ ಸಿನಿಮಾ ಖ್ಯಾತಿಯ ನಟಿ ವರಲಕ್ಷ್ಮಿ

Share and Enjoy !

Shares
Listen to this article

ವಿಜಯನಗರ ವಾಣಿ

ಕನ್ನಡದ ಮಾಣಿಕ್ಯ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಜೊತೆ ತೆರೆ ಹಂಚಿಕೊಂಡಿರುವ ನಟಿ ವರಲಕ್ಷ್ಮಿ ಶರತ್​ಕುಮಾರ್​ ಅವರು ನಟಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್​ ಹಾಗೂ ಆರಾಧ್ಯಾ ಜತೆ ಕಾಲ ಕಳೆದಿದ್ದಾರೆ. ಈ ಭೇಟಿ ಫೋಟೋಗಳನ್ನು ವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಹುಭಾಷಾ ನಟ ಶರತ್​ ಕುಮಾರ್​ ಅವರ ಮಗಳು ಹಾಗೂ ನಟಿ ವರಲಕ್ಷಿ ಅವರು ಬಾಲಿವುಡ್​ ನಟಿ ಐಶ್ವರ್ಯಾ ರೈ, ಅಭಿಷೇಕ್​ ಬಚ್ಚನ್​ ಹಾಗೂ ಅವರ ಮಗಳು ಆರಾಧ್ಯಾ ಜೊತೆ ಕೆಲ ಸಮಯ ಕಳೆದಿದ್ದಾರೆ. ಈ ಸೆಲೆಬ್ರಿಟಿಗಳ ಭೇಟಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮಣಿರತ್ನಂ ನಿರ್ದೇಶನದ ಸಿನಿಮಾ ಪೊನ್ನಿಯಿನ್​ ಸೆಲ್ವನ್​ ಚಿತ್ರೀಕರಣ ಪಾಂಡಿಚೆರಿಯಲ್ಲಿ ಆರಂಭವಾಗಿದೆ. ಈ ಚಿತ್ರೀಕರಣದಲ್ಲಿ ಐಶ್ವರ್ಯಾ ಭಾಗಿಯಾಗಿದ್ದಾರೆ. ಇದೇ ಸಿನಿಮಾದಲ್ಲಿ ವರಲಕ್ಷ್ಮಿ ಅವರ ತಂದೆ ಶರತ್ ಕುಮಾರ್ ಅವರೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ವರಲಕ್ಷ್ಮಿ ಹಾಗೂ ಅವರ ಸಹೋದರಗಿ ಪೂಜಾ ಬಚ್ಚನ್ ಕುಟುಂಬದ ಕುಡಿ ಹಾಗೂ ಐಶ್ವರ್ಯಾ-ಅಭಿಷೇಕ್​ ಜತೆ ಕಾಲ ಕಳೆದಿದ್ದಾರೆ. ಇನ್ನು ವರಲಕ್ಷ್ಮಿ ಅವರ ಸಹೋದರಿಗೆ ಇನ್ನೂ ಐಶ್ವರ್ಯಾ ರೈ ಅವರ ಜತೆ ಕಾಲ ಕಳೆದಿರುವ ಬಗ್ಗೆ ನಂಬಿಕೆಯೇ ಬರುತ್ತಿಲ್ಲವಂತೆ. ಹೀಗೆಂದು ವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Share and Enjoy !

Shares