ವಿಜಯನಗರ ವಾಣಿ
ಯೂನಿಕ್ ಐಡಿಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI)ದಿಂದ 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಅಂದ ಹಾಗೆ ಪೋಷಕರು ತಮ್ಮ ನವಜಾತ ಶಿಶುವಿಗೆ 12 ಅಂಕಿಯ ಆಧಾರ್ ಸಂಖ್ಯೆಯನ್ನು ಪಡೆಯಬಹುದಾಗಿದೆ. ಬಾಲ್ ಆಧಾರ್ ಕಾರ್ಡ್ (Baal Aadhaar Card) ಅಪ್ಲೈ ಮಾಡುವುದಕ್ಕೆ ಪೋಷಕರು ಮಗುವಿನ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಹಾಗೂ ಜತೆಗೆ ತಂದೆ- ತಾಯಿಗಳ ಪೈಕಿ ಒಬ್ಬರ ಆಧಾರ್ ಕಾರ್ಡ್ ಮಾಹಿತಿ ನೀಡಬೇಕಾಗುತ್ತದೆ. ಇನ್ನು ನವಜಾತ ಶಿಶುವಿಗೇ ಆಧಾರ್ ಬೇಕು ಎಂದಾದಲ್ಲಿ ಜನನ ಪ್ರಮಾಣ ಪತ್ರಕ್ಕಾಗಿ ಕಾಯಬೇಕು ಎಂಬ ಅಗತ್ಯ ಸಹ ಇಲ್ಲ. ಆಸ್ಪತ್ರೆಯ ಡಿಸ್ಚಾರ್ಜ್ ಸರ್ಟಿಫಿಕೇಟ್ ಸಲ್ಲಿಸಿದರೆ ಸಾಕು, ಆಧಾರ್ ದೊರೆಯುತ್ತದೆ. UIDAIನ ಟ್ವಿಟ್ಟರ್ ಹ್ಯಾಂಡಲ್ನಿಂದ ಇದನ್ನೇ ಟ್ವೀಟ್ ಕೂಡ ಮಾಡಲಾಗಿದೆ.
ನಿಮ್ಮ ಮಗುವಿನ ಆಧಾರ್ ನೋಂದಣಿ ಮಾಡಬೇಕು ಅಂದರೆ ಜನನ ಪ್ರಮಾಣ ಪತ್ರ ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸ್ಲಿಪ್ ಮತ್ತು ತಂದೆ-ತಾಯಿಗಳ ಪೈಕಿ ಒಬ್ಬರ ಆಧಾರ್ ಕಾರ್ಡ್ ಸಾಕು ಎನ್ನಲಾಗಿದೆ. ಅಂದರೆ ಪೋಷಕರು ಜನನ ಪ್ರಮಾಣಪತ್ರಕ್ಕಾಗಿ ಕೂಡ ಕಾಯುವ ಅಗತ್ಯ ಇಲ್ಲ. ಆಸ್ಪತ್ರೆಯ ಡಿಸ್ಚಾರ್ಜ್ ಪ್ರಮಾಣಪತ್ರ ಜತೆಗೆ ತಂದೆ-ತಾಯಿ ಇಬ್ಬರ ಪೈಕಿ ಒಬ್ಬರ ಆಧಾರ್ ಕಾರ್ಡ್ ಸಾಕು. ಆ ಮೂಲಕ ತಮ್ಮ ನವಜಾತ ಶಿಶುವಿನ ಆಧಾರ್ ಕಾರ್ಡ್ಗೆ ಅಪ್ಲೈ ಮಾಡಬಹುದು.
UIDAI ಮಾಹಿತಿ ನೀಡಿರುವಂತೆ, ಮಗುವಿನ ಆಧಾರ್ ಕಾರ್ಡ್ ನೋಂದಣಿ ಮಾಡುವಾಗ ಬೆರಳಚ್ಚು, ಐರಿಸ್ ಸ್ಕ್ಯಾನ್ ಮಾಡುವುದಿಲ್ಲ. ಕೇವಲ ಫೋಟೋಗ್ರಾಫ್ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಅಂದಹಾಗೆ ಆ ಮಗುವಿಗೆ 5 ವರ್ಷ ತುಂಬಿದ ಮೇಲೆ ಬಯೋಮೆಟ್ರಿಕ್ಸ್ ಅಪ್ಡೇಟ್ ಮಾಡಬೇಕಾಗುತ್ತದೆ. ಪೋಷಕರು ತಮ್ಮ ಮಕ್ಕಳ ಆಧಾರ್ ಆನ್ಲೈನ್ ಹಾಗೂ ಆಫ್ಲೈನ್ ಎರಡೂ ಬಗೆಯಲ್ಲೂ ಮಾಡಬಹುದು. ಆಫ್ಲೈನ್ನನಲ್ಲಿ ಮಾಡಬೇಕಾದರೆ ಹತ್ತಿರಸ ಆಧಾರ್ ಎನ್ರೋಲ್ಮೆಂಟ್ ಕೇಂದ್ರಕ್ಕೆ ಭೇಟಿ ನೀಡಿ, ಅರ್ಜಿ ತುಂಬಿದ ಮೇಲೆ ಎಲ್ಲ ಮುಖ್ಯ ದಾಖಲಾತಿಗಳನ್ನು ನೀಡಬೇಕು.
ನವಜಾತ ಶಿಶುವಿನ ಆಧಾರ್ ಕಾರ್ಡ್ಗೆ ಆನ್ಲೈನ್ನಲ್ಲಿ ಅಪ್ಲೈ ಮಾಡುವುದು ಹೇಗೆ?
UIDAI ವೆಬ್ಸೈಟ್ಗೆ ಭೇಟಿ ನೀಡಬೇಕು. ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಬೇಕು ಹಾಗೂ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಹಂತಹಂತವಾದ ಮಾಹಿತಿ ಇಲ್ಲಿದೆ:
1. UIDAI ವೆಬ್ಸೈಟ್ ಆದ uidai.gov.inಗೆ ಲಾಗ್ ಇನ್ ಆಗಬೇಕು.
2. ಆಧಾರ್ ಕಾರ್ಡ್ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
3. ಮಗವಿನ ಹೆಸರು, ಪೋಷಕರ ಫೋನ್ ನಂಬರ್, ಇ-ಮೇಲ್ ಐಡಿ ಮತ್ತು ಇತರ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕು.
4. ನವಜಾತ ಶಿಶುವಿಗೆ ಸಂಬಂಧಿಸಿದ ವಿಳಾಸ, ಜಿಲ್ಲೆ, ರಾಜ್ಯ ಮತ್ತು ಇತರ ಮಾಹಿತಿಗಳನ್ನು ಭರ್ತಿ ಮಾಡಬೇಕು.
5. Fix Appointment ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
6. ಆಧಾರ್ ಕಾರ್ಡ್ ನೋಂದಣಿಗೆ ದಿನಾಂಕ ನಿಗದಿ ಮಾಡಿಕೊಳ್ಳಬೇಕು.
7. ಮುಂದಿನ ಹಂತಕ್ಕಾಗಿ ಹತ್ತಿರದ ಆಧಾರ್ ನೋಂದಣಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.
ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸುವ ಮುನ್ನ ಮತ್ತು ಭೇಟಿಗೆ ಸಮಯ ನಿಗದಿ ಮಾಡಿಕೊಳ್ಳುವ ಮುಂಚೆ ಮಗುವಿನ ಜನನ ದಿನಾಂಕವನ್ನು ಪೋಷಕರು ಸರಿಯಾಗಿ ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ, ಇದನ್ನು ತಿದ್ದುಪಡಿ ಅಥವಾ ಅಪ್ಡೇಟ್ ಮಾಡಲು ಸಾಧ್ಯವಿರುವುದು ಒಮ್ಮೆ ಮಾತ್ರ.