ಕುಡುತಿನಿ ಪಪಂ ಉಪಾಧ್ಯಕ್ಷೆ ಸ್ಥಾನಕ್ಕೆ ಗೀತಾ ನಾಗರಾಜ್ ರಾಜೀನಾಮೆ

Share and Enjoy !

Shares
Listen to this article

ಬಳ್ಳಾರಿ ಜಿಲ್ಲೆ
ಕುರುಗೋಡು:ಸಮೀಪದ ಕುಡುತಿನಿ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷೆ ಗೀತಾ ನಾಗರಾಜ್ ಅವರು ಕೆಲ ಕಾರಣಾಂತರಗಳಿಂದ ಉಪಾಧ್ಯಕ್ಷೆ ಸ್ಥಾನಕ್ಕೆ ಪಟ್ಟಣ ಪಂಚಾಯ್ತಿಯ ಸಮುದಾಯ ಸಂಘಟನಾ ಅಧಿಕಾರಿ ವೇದಮೂರ್ತಿ ಅವರಿಗೆ ಬುದುವಾರ ರಾಜೀನಾಮೆ ಸಲ್ಲಿಸಿದರು.

ಇವರು ಕುಡುತಿನಿ ಪಟ್ಟಣದ 6ನೇ ವಾರ್ಡಿನ ಪರಿಶಿಷ್ಟ ಪಂಗಡ ಮಹಿಳೆ ಮೀಸಲಾತಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಗೆದ್ದಿದ್ದಾರೆ.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಾಧ್ಯಕ್ಷೆ ಯಾಗಿ ಕಾರ್ಯನಿರ್ವಾಹಿಸಿದ್ದು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿರುವುದು ನನಗೆ ಉತ್ತಮ ವಾಗಿದೆ. ಯಾವುದೇ ಕಾರಣದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡು ಇಷ್ಟು ದಿನ ಜವಾಬ್ದಾರಿ ಯಿಂದ ಕಾರ್ಯ ನಿರ್ವಹಿಸಿ, ಸಾರ್ವಜನಿಕರ ಸೇವೆ ಮಾಡಿರುವುದು ನನ್ನ ಭಾಗ್ಯ ವಾಗಿದೆ. ವಾರ್ಡಿನ ಜನರು ನನಗೆ ಮತ ನೀಡಿ ಗೆಲ್ಲಿಸಿ ಇಷ್ಟು ದಿನ ಜನ ಸೇವೆ ಮಾಡುವುದಕ್ಕೆ ಅನುಕೂಲ ಮಾಡಿ ಕೊಟ್ಟಿದ್ದಕ್ಕೆ ಅವರಿಗೆ ಚಿರಋಣಿ ಯಾಗಿರುವೆ. ಆದರೆ ನನ್ನ ವಯಕ್ತಿಕ ಕಾರಣಾಂತರಗಳಿಂದ ನನ್ನ ಉಪಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಕೆ. ಎಂ. ಹಾಲಪ್ಪ.ದೊಡ್ಡಬಸಪ್ಪ,ಎಲೆಗಾರ ಪಂಪಪಾತಿ,ಬಿಜೆಪಿ ತಾಲೂಕು ಉಪಾಧ್ಯಕ್ಷ ಗುರುಮೂರ್ತಿ,ಶಂಕ್ರಗೌಡ, ಕೋಟೆ ಪಂಪಪಾತಿ, ನಾಗರಾಜ್ ಸೇರಿದಂತೆ ಇತರರು ಇದ್ದರು.

Share and Enjoy !

Shares