ವಿಜಯನಗರವಾಣಿ ಸುದ್ದಿ,
ಹಗರಿಬೊಮ್ಮನಹಳ್ಳಿ :
ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಗಂಗಾಮತ ಸಮಾಜದ ಇಬ್ಬರು ಶಾಸಕರಿಗೆ ಸಚಿವ ಸ್ಥಾನದ ಅವಕಾಶ ಕಲ್ಪಿಸಬೇಕು ಎಂದು ವಿಜಯನಗರ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ ಒತ್ತಾಯಿಸಿದರು.
ಪಟ್ಟಣದ ಗಂಗಾಮತಸ್ಥರ ಸಮುದಾಯ ಭವನದಲ್ಲಿ ತಾಲೂಕು ಗಂಗಾಮತ ಸಮಾಜದಿಂದ ರ‍್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು, ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಹಾಗೂ ಹಿಂದುಳಿದ ವರ್ಗದ ಎರಡನೇ ದೊಡ್ಡ ಸಮುದಾಯ ಗಂಗಾಮತಸ್ಥ ಸಮಾಜವಾಗಿದೆ. ಈಗಾಗಲೇ ಕೇಂದ್ರದಲ್ಲಿ ಸಮುದಾಯವನ್ನು ಗುರುತಿಸಿ 4ಜನಕ್ಕೆ ಸಚಿವ ಸ್ಥಾನವನ್ನು ನೀಡಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಇಬ್ಬರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿ ಸಮುದಾಯದ ಅಭಿವೃದ್ಧಿಗೆ ಬೆಂಬಲಿಸಬೇಕು. ಎಂಎಲ್‌ಸಿ ರವಿಕುಮಾರಜೀ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಜಿ ಮೆಂಡನ್‌ರವರು ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ. ಬಿಜೆಪಿ ಪಕ್ಷ ಓಬಿಸಿ ವರ್ಗದ ಗಂಗಾಮತ ಸಮಾಜದವರಿಗೆ ನೂತನ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿ ಸಮಾಜವನ್ನು ಮುಖ್ಯವಾಹಿನಿಗೆ ತರುವಂತೆ ಇಡೀ ಸಮುದಾಯದಿಂದ ಆಗ್ರಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಜಿಲ್ಲಾ ಗೌರವಾಧ್ಯಕ್ಷ ವೈ.ಯಮುನೇಶ್, ಕಾರ್ಯಾಧ್ಯಕ್ಷ ಬಿ.ಎಲ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ, ಕಾರ್ಯದರ್ಶಿ ತಲೇರಿ ಪ್ರಕಾಶ್ ಪ್ರಮುಖರಾದ ವಿನೋದ ಜಾಡರ, ಶರಣಗೌಡ, ಮುತ್ಕೂರು ನಿಂಗಪ್ಪ, ಬಾರಿಕರ ರವಿ ಇದ್ದರು.