15 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಚಾಲನೆ

Share and Enjoy !

Shares
Listen to this article

ಬಳ್ಳಾರಿ ಜಿಲ್ಲೆ
ಕುರುಗೋಡು:ಕಂದಾಯ ಇಲಾಖೆ ಹಾಗೂ ಜಿಲ್ಲಾ ಖನಿಜ ನಿಧಿ ಯೋಜನೆಯಡಿ ಸೇರಿದಂತೆ ಒಟ್ಟು 15 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಇಂದು ಅದ್ಧೂರಿ ಚಾಲನೆ ದೊರೆಯಿತು.

  • ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನ ಮುಂಬಾಗದಿಂದ ತಾಲೂಕು ಹೋರಾಟಗಾರರು, ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಶಾಸಕ ಜೆ.ಎನ್.ಗಣೇಶ್ ನೇತೃತ್ವದಲ್ಲಿ ಮೆರವಣಿಗೆ ಆರಂಭಿಸಿ, ಮುಖ್ಯ ವೃತ್ತಕ್ಕೆ ಸಮಾವೇಶಗೊಂಡು ನಂತರ ಮುಖ್ಯರಸ್ತೆಯ ಮೂಲಕ ಸಾಗಿ ತದನಂತರ ಬಳ್ಳಾರಿ ರಸ್ತೆಯ ಅಗ್ನಿ ಶಾಮಕ ದಳದ ಕಚೇರಿ ಹಿಂಭಾಗಕ್ಕೆ ತಲುಪಿ ಮಿನಿ ವಿಧಾನಸೌಧದ ಜಾಗದಲ್ಲಿ ಸಮಾವೇಶಗೊಂಡ ನಂತರ ಶಾಸಕ ಗಣೇಶ್ ಅವರು ಮಿನಿ ವಿಧಾನಸೌಧ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
    ನಂತರ ಶಾಸಕ ಮಾತನಾಡಿ, ಕುರುಗೋಡು ಹೋರಾಟಗಾರರು ಪರಿಶ್ರಮದ ಹೋರಾಟಕ್ಕೆ ಕುರುಗೋಡು ತಾಲೂಕಾಗಿದೆ. ಅದರಂತೆಯೇ ಜನರ ಸಹಕಾರದೊಂದಿಗೆ ಕುರುಗೋಡಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಬೇಕೆಂಬ ಹಂಬಲದೊಂದಿಗೆ ಪ್ರತಿ ಕ್ಷಣಕ್ಷಣದ ಶ್ರಮದಿಂದ ಕಂದಾಯ ಇಲಾಖೆಯ 10 ಕೋಟಿ ಹಾಗೂ ಜಿಲ್ಲಾ ಖನಿಜಾ ನಿಧಿಯಿಂದ 5 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದರಿಂದ ಇವತ್ತು ಮಿನಿ ವಿಧಾನಸೌಧ ನಿರ್ಮಾಣದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ತಾಲೂಕು ಕೇಂದ್ರ ಆರಂಭಗೊಂಡು ಎರಡು ವರ್ಷ ಕಳೆದರೂ ಇನ್ನೂ ವಿವಿಧ ಇಲಾಖೆಗಳು ಕುರುಗೋಡಿಗೆ ಬಂದಿಲ್ಲ. ಆದ್ದರಿಂದ ಮಿನಿ ವಿಧಾನಸೌಧ ನಿರ್ಮಾಣವಾದರೆ, ಎಲ್ಲಾ ಇಲಾಖೆಗಳು ಒಂದೇ ಸೂರಿನಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಮಿನಿ ವಿಧಾನಸೌಧ ನಿರ್ಮಾಣವಾಗುತ್ತಿದ್ದಂತೆ ಇನ್ನಿತರ ಇಲಾಖೆಗಳು ಕುರುಗೋಡಿಗೆ ಬರಲಿದ್ದು, ಕುರುಗೋಡು ತಾಲೂಕಿನ ಜನರಿಗೆ ಇಲಾಖೆಯ ಯೋಜನೆಗಳು ಸಕಾಲದಲ್ಲಿ ದೊರಯಲಿವೆ ಎಂದರು.
    ಅದೇ ರೀತಿ ಕೊರೊನಾ ಸಂದರ್ಭದಲ್ಲಿ ಜನರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗದೇ ಪರದಾಡುವಂತಗಿತ್ತು, ಆದ್ದರಿಂದ ಮುಂದಿನ ದಿನಗಳಲ್ಲಿ 100 ಅಸಿಗೆವುಳ್ಳ ಆಸ್ಪತೆ ಯನ್ನು ಜನರಿಗೆ ಸೇವೆಗಳು ಮುಟ್ಟುವಂತೆ ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
    ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಗ್ರೇಡ್ 2 ತಹಸೀಲ್ದಾರ್ ಮಲ್ಲೇಶ್ ಪ್ಪ, ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು, ವಿವಿಧ ಸಮುದಾಯದ ಮುಖಂಡರುಗಳು, ಪುರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಬ್ಲಾಕ್ ಸಮಿತಿಯ ಅಧ್ಯಕ್ಷರು ಮತ್ತು ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

Share and Enjoy !

Shares