ಯುವ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್‌ ಪ್ಲ್ಯಾನ್‌?

Share and Enjoy !

Shares
Listen to this article

 ವಿಜಯನಗರ ವಾಣಿ

ತಮ್ಮ ಹಿರಿತನದ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಸಂಪುಟಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.

“ಬೊಮ್ಮಾಯಿಯವರ ನೇತೃತ್ವದ ನಮ್ಮ ಬಿಜೆಪಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ನಾನು ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ನಾಯಕ ಆಗಿರುವುದರಿಂದ ಹೊಸ ಸಂಪುಟಕ್ಕೆ ಸೇರ್ಪಡೆಯಾಗುವುದಿಲ್ಲ. ಇದು ನೈತಿಕ ನೆಲೆಯಲ್ಲಿ ಕೈಗೊಂಡ ವೈಯಕ್ತಿಕ ನಿರ್ಧಾರ. ಈ ಬಗ್ಗೆ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ. ವರಿಷ್ಠರ ಗಮನಕ್ಕೂ ತಂದಿದ್ದೇನೆ,” ಎಂದು ಸ್ಪಷ್ಟ ಪಡಿಸಿದರು.

”ಯಡಿಯೂರಪ್ಪನ ನಾಯಕತ್ವದಲ್ಲಿ ನಾವು ಬಂದಿದ್ದೇವೆ. ಅವರು ಹಿರಿಯರಿದ್ದರು. ಹಾಗಾಗಿ ಅವರ ಸಂಪುಟದಲ್ಲಿ ಮಂತ್ರಿ ಆದೆ. ಇನ್ನು ಪಕ್ಷದ ಕೆಲಸ ಮಾಡುತ್ತೇನೆ,” ಎಂದು ಹೇಳಿದರು.

ಹಿರಿಯರಿಗೆ ಅವಕಾಶ ಅನುಮಾನ!
ಶೆಟ್ಟರ್‌ ಅವರಂತೆಯೇ ಇನ್ನೂ ಹಲವು ಹಿರಿಯ ಶಾಸಕರಿದ್ದಾರೆ. ಬಿಎಸ್‌ವೈ ಹೊರತು ಪಡಿಸಿ ಹಿರಿಯರ ಸಾಲಿನಲ್ಲಿ ನಿಲ್ಲುವವರಲ್ಲಿ ಶೆಟ್ಟರ್‌ ಅವರಂತೆ ಈಶ್ವರಪ್ಪ ಅವರೂ ಇದ್ದಾರೆ. 1994 ಬ್ಯಾಚ್‌ ಎಂದು ಗುರುತಿಸಿದವರಲ್ಲಿ ಡಜನ್‌ನಷ್ಟು ಶಾಸಕರು ಬಿಜೆಪಿಯಲ್ಲಿದ್ದಾರೆ. ಇವರಲ್ಲಿ ಸತತವಾಗಿ 6 ಬಾರಿ ಆಯ್ಕೆಯಾದವರು. ಈ ಶಾಸಕರಲ್ಲಿ ಬಹುತೇಕರು ಈಗಾಗಲೇ ಮಂತ್ರಿಗಳಾಗಿದ್ದಾರೆ. ಹೊಸ ಮುಖಗಳಿಗೆ ಆದ್ಯತೆ ನೀಡುವ ದೃಷ್ಟಿಯಿಂದ ಹಿರಿಯರನ್ನು ಸಂಪುಟದಿಂದ ಹೊರಗಿಡಲು ಹೈಕಮಾಂಡ್‌ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

Share and Enjoy !

Shares