ಲಿಂಗಸುಗೂರು :ಕೆ,ಡಿ,ಪಿ ಪ್ರಗತಿ ಪರಿಶೀಲನಾ ಸಭೆ,

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆಯ 

ಲಿಂಗಸುಗೂರು ತಾಲೂಕಿನ ಶಾಸಕ ಡಿ ಎಸ್ ಹೂಲಗೇರಿ ಅಧ್ಯಕ್ಷತೆಯಲ್ಲಿ ತಾಲೂಕ ಪಂಚಾಯತ ಸಭಾಂಗಣದಲ್ಲಿ ತ್ರೈ ಮಾಸಿಕ ಕೆ, ಡಿ, ಪಿ, ಪ್ರಗತಿ ಪರಿಶೀಲನೆ ಸಭೆ ಜರಗಿತು,

ಇದೆ ವೇಳೆ ಗುಂತಗೋಳ ಗ್ರಾಮದ ಕೊಲೆಯಾದ ವ್ಯಕ್ತಿಯ ಶವವನ್ನು  ಮರಣೋತ್ತರ ಪರೀಕ್ಷೆ ವಿಳಂಬ ಮಾಡದ  ಬಗ್ಗೆ ತಾಲೂಕ ವೈದ್ಯಾಧಿಕಾರಿ ಅಮರೇಶ ಪಾಟೀಲ್ ಬಳಿ ಮಾಹಿತಿ ಕೇಳಿದ ಶಾಸಕ ಡಿ ಎಸ್ ಹೂಲಗೇರಿ ಇದೆ ರೀತಿ ನಿರ್ಲಕ್ಷ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಪಾರಸ್ಸು ಮಾಡಲಾಗುವದು ಎಂದು ತರಾಟೆ ತಗೆದುಕೊಂಡರು, ಹಾಗೂ ಕೆ, ಡಿ, ಪಿ, ಸಭೆಯ ಕುರಿತು ಅಧಿಕಾರಿಗಳು  ಪತ್ರಕರ್ತರಿಗೆ ಯಾವುದೇ ಸರಿಯಾದ ರೀತಿ ಮಾಹಿತಿ  ನೀಡಿಲ್ಲ,

 

ಇದೆ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಹುಲ್ ಸಂಕನೂರು, ತಹಶೀಲ್ದಾರ ಚಾಮರಾಜ ಪಾಟೀಲ್, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಬೋವಿ, ಸಹಾಯಕ ನಿರ್ದೇಶಕ ಸೋಮನಗೌಡ ಪಾಟೀಲ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು,

 

Share and Enjoy !

Shares