ಲಿಂಗಸ್ಗೂರ ತಾಲೂಕು ಪತ್ರಿಕಾ ದಿನಾಚರಣೆ: ಪ್ರಶಸ್ತಿಗೆ ಪತ್ರಕರ್ತ ಹನುಮಂತ ನಾಯಕ ಆಯ್ಕೆ,

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆಯ 

ಲಿಂಗಸುಗೂರು ತಾಲೂಕಿನಲ್ಲಿ  2021-22ನೇ ಸಾಲಿನ ಅಗಸ್ಟ್ 03 ರಂದು ನೆಡೆಯುವ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪತ್ರಿಕಾ ದಿನಾಚರಣೆ ಅಂಗವಾಗಿ  ಪ್ರಶಸ್ತಿಗೆ ಮುದಗಲ್ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ  ‍ಹನುಮಂತ ನಾಯಕ  ಅವರನ್ನು ಆಯ್ಕೆ ಮಾಡಲಾಗಿದೆ.

ಮುದಗಲ್ ನ ಯುವ  ಪತ್ರಕರ್ತ  ಹಾಗೂ ಸಂಪಾದಕರಾದ  ಹನುಮಂತ ನಾಯಕ ಮಟ್ಟೂರು ಅವರನ್ನು  ಪತ್ರಿಕೆ ಬಳಗ ಆಯ್ಕೆ ಮಾಡಿದ್ದಾರೆ. ಹನುಮಂತ ನಾಯಕ ಇವರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರಿನಲ್ಲಿ ಜನಿಸಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಟ್ಟೂರಿನಲ್ಲಿ ಪೂರೈಸಿ ನಂತರ  ಮುದಗಲ್  ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿ,  ಕಾಲೇಜು ಶಿಕ್ಷಣವನ್ನು ಲಿಂಗಸ್ಗೂರನ  (ಎಸ್ ಎಂ ಎಲ್ ಬಿ)  ಬಸವೇಶ್ವರ ಕಾಲೇಜ್, ಸೇರಿದಂತೆ ಇನ್ನಿತರ ಕಾಲೇಜ್ ನಲ್ಲಿ  ಅವರು  ಶಿಕ್ಷಣವನ್ನು  ಪೂರೈಸಿದ್ದಾರೆ ಎನ್ನಲಾಗಿದೆ.  ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವ ರೂಢಿಸಿಕೊಂಡು 2011ರಲ್ಲಿ ಪ್ರಥಮವಾಗಿ ಸುದ್ದಿಮೂಲ ಮತ್ತು ಹೊಸದಿಗಂತ ದಿನಪತ್ರಿಗಳೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದ್ದರು. ಅದಾದ ನಂತರ ವಿಶ್ವವಾಣಿ, ಪ್ರಸ್ತುತ  ಸ್ಟಾರ್ ಆಫ್ ರಾಯಚೂರು ದಿನಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಮತ್ತು ಮುದಗಲ್ ಎಕ್ಸ್‌ಪ್ರೆಸ್‌ ಎಂಬ ವಾರ ಪತ್ರಿಕೆಯನ್ನು ತರುವ ಮೂಲಕ ಸ್ವಂತ ಪತ್ರಿಕೆಯ ಜವಬ್ದಾರಿವಹಿಸಿಕೊಂಡು ಸಾಗುತ್ತಿದ್ದಾರೆ.  ಪ್ರಜಾಪ್ರಭುತ್ವದ ಲೋಪದೋಷಗಳನ್ನು ತಮ್ಮ ಪತ್ರಿಕೆಯಲ್ಲಿ ನೇರಾ ನೇರವಾಗಿ ಜನರ ಮುಂದಿಡುವಲ್ಲಿ ಮೇಲುಗೈ ಸಾಧಿಸಿದ್ದು ಒಂಬತ್ತು  ವರ್ಷಗಳಿಂದ ಯುವ ಉತ್ಸಾಹಿ, ಸ್ನೇಹ ಜೀವಿ ಹಾಗೂ ಸದಾ ಒಳ್ಳೆಯದಕ್ಕಾಗಿ ತುಡಿಯುತ್ತಿರುವ ಸರಳ ಸಜ್ಜನಿಕೆಯ ಇವರ ಸೇವೆಯನ್ನು ಗುರುತಿಸಿ ಮುದಗಲ್ ಕಾರ್ಯನಿರತ ಪತ್ರಕರ್ತ ಸಂಘವು ಅವರನ್ನು  ತಾಲೂಕಿನಲ್ಲಿ ನೆಡೆಯುವ ಕಾರ್ಯನಿರತ ಪತ್ರಕರ್ತ ಸಂಘದ  ಪತ್ರಿಕೆ ದಿನಾಚರಣೆ ಅಂಗವಾಗಿ  ಇವರನ್ನು  ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.  ಆಯ್ಕೆ ವೇಳೆ ಮುದಗಲ್ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರು ಹಾಗೂ  ಸರ್ವ ಸದಸ್ಯರು  ಇದ್ದರು.

 

Share and Enjoy !

Shares