ತುಳಸಿ ಎಲೆಗಳನ್ನು ಕೀಳುವ ಸರಿಯಾದ ವಿಧಾನ ತಿಳಿಯಿರಿ

Share and Enjoy !

Shares
Listen to this article

ವಿಜಯನಗರ ವಾಣಿ

ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ (Astrology) ತುಳಸಿ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ವಿಷ್ಣುವಿಗೆ ಪ್ರಿಯವಾದ ತುಳಸಿಗೆ  ಸಂಬಂಧಿಸಿದಂತೆ ಅನೇಕ ಪೌರಾಣಿಕ ನಂಬಿಕೆಗಳಿವೆ. ಮನೆಯಲ್ಲಿ ತುಳಸಿ ಸಸ್ಯವನ್ನು ನೆಡುವುದರಿಂದ ಹಿಡಿದು ಸೇವಿಸುವ ತನಕ ಅನೇಕ ವೈಜ್ಞಾನಿಕ ಪ್ರಯೋಜನಗಳಿವೆ. ಪರಿಸರವನ್ನು ಶುದ್ಧೀಕರಿಸುವ, ಸಕಾರಾತ್ಮಕತೆಯನ್ನು ತರುವಂತಹ ತುಳಸಿ ಸಸ್ಯವನ್ನು ಮನೆಯ ಮುಂದೆ ನೆಡುವುದು ಸೂಕ್ತ. ಇದರೊಂದಿಗೆ, ತುಳಸಿಗೆ ನೀರನ್ನು ಅರ್ಪಿಸುವುದು, ಪ್ರತಿದಿನ ಅದನ್ನು ಪೂಜಿಸುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ.

ತುಳಸಿ ಎಲೆಗಳನ್ನು ಕೀಳುವ ಸರಿಯಾದ ವಿಧಾನ :
ಜ್ಯೋತಿಷ್ಯ ಪ್ರಕಾರ, ತುಳಸಿ ಎಲೆಯನ್ನು ಭಾನುವಾರ ಕೀಳಬಾರದು ಮತ್ತು ಭಾನುವಾರ ತುಳಸಿಗೆ ನೀರನ್ನು ಅರ್ಪಿಸಬಾರದು. ಇದಲ್ಲದೆ, ಅಮಾವಾಸ್ಯೆ ಚತುರ್ದಶಿ ಮತ್ತು ದ್ವಾದಶಿಯಂದು ತುಳಸಿ ಎಲೆಗಳನ್ನು ಕೀಳುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ. ಈ ದಿನ ತುಳಸಿ ಎಲೆಯನ್ನು  ಕಿತ್ತರೆ ಜೀವನದಲ್ಲಿ ಆರ್ಥಿಕ ತೊಂದರೆ ಉಂಟಾಗುತ್ತದೆ.

 

  • ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಎಂದಿಗೂ ಮುರಿಯಬಾರದು. ತುಳಸಿಯನ್ನು ರಾಧಾ ದೇವಿಯ ಸ್ವರೂಪ ಎಂದು ನಂಬಲಾಗಿದೆ. ಸಂಜೆಯ ವೇಳೆ ರಾಧೇ ಶ್ರೀ ಕೃಷ್ಣನೊಂದಿಗೆ  ಕಾಲ ಕಳೆಯುತ್ತಿರುತ್ತಾಳಂತೆ. ಹಾಗಾಗಿ ಈ ಹೊತ್ತು ತುಳಸಿ ಎಲೆಗಳನ್ನು ಕೀಳಬಾರದಂತೆ.

 

  • ಇದಲ್ಲದೆ, ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಸಮಯದಲ್ಲಿಯೂ ತುಳಸಿ ಎಲೆಗಳನ್ನು ಮುರಿಯಬಾರದು.

 

  • ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು. ದೇವರಿಗೆ ಅರ್ಪಿಸಲು ತುಳಸಿ ಎಲೆಗಳನ್ನು ಬಳಸುವಾಗ, ಎಲೆಗಳು 11 ದಿನಗಳಿಗಿಂತ ಹೆಚ್ಚು ಹಳೆಯದಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.
  • ತುಳಸಿ ಎಲೆಗಳನ್ನು ಎಂದಿಗೂ ಉಗುರುಗಳಿಂದ ಒಡೆಯಬಾರದು. ಅದನ್ನು ಬೆರಳ ತುದಿಯಿಂದ ಮುರಿಯಬೇಕು.

 

  • ಒಣಗಿದ ತುಳಸಿ ಗಿಡವನ್ನು  ಮನೆಯಲ್ಲಿ ಇಟ್ಟುಕೊಳ್ಳಬಾರದು . ಅದು ಒಣಗಿದರೆ, ಸಸ್ಯವನ್ನು ನದಿಯಲ್ಲಿ ವಿಸರ್ಜಿಸಿ . ಬೇರೊಂಸು ಗಿಡವನ್ನು ನೆಡಬೇಕು.

 

  • ತುಳಸಿ ಎಲೆಗಳನ್ನು ಈಶ್ವರ ಮತ್ತು ಗಣೇಶನಿಗೆ ಅರ್ಪಿಸಬಾರದು.

Share and Enjoy !

Shares