ವಿಜಯನಗರ ವಾಣಿ
ಅಂತಿಮ ಹಂತದ ಎ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ನಾಲ್ಕು ಗೋಲುಗಳಿಂದ ಗೆಲುವು ಸಾಧಿಸಿದೆ. ಇನ್ನು ಈ ನಾಲ್ಕು ಗೋಲುಗಳಲ್ಲಿ ಮೂರನ್ನು ವಂದನಾ ಕಟಾರಿಯಾ ಬಾರಿಸುವ ಮೂಲಕ ಕ್ರೀಡಾಕೂಟದಲ್ಲಿ ಮೊದಲ ಹ್ಯಾಟ್ರಿಕ್ ಗೋಲು ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಒಯಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 29 ವರ್ಷದ ವಂದನಾ ಸಿಡಿಸಿದ ಮೂರು ಗೋಲು ಟೋಕಿಯೊ ಒಲಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುವ ಮಹಿಳಾ ಹಾಕಿ ತಂಡದ ಆಸೆಯನ್ನು ಜೀವಂತಗೊಳಿಸಿದೆ. ಇನ್ನು ಐರ್ಲೆಂಡ್ ಮತ್ತು ಗ್ರೇಟ್ ಬ್ರಿಟನ್ ಆಟದ ಫಲಿತಾಂಶ ಮೇಲೆ ಭಾರತ ಮಹಿಳಾ ತಂಡದ ಅಳಿವು, ಉಳಿವು ನಿಂತಿದೆ.
ವಂದನಾ ಕಟಾರಿಯಾ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಗೋಲು ದಾಖಲಿಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು ಎಂದು ಟೋಕಿಯೊ 2020 ಭಾರತ ಟ್ವೀಟ್ ಮಾಡಿದೆ.
ಐದು ಗುಂಪು ಹಂತದ ಪಂದ್ಯಗಳಲ್ಲಿ ಭಾರತ ಎರಡರಲ್ಲಿ ಗೆದ್ದಿದ್ದು ಮೂರರಲ್ಲಿ ಪರಾಭವಗೊಂಡಿದೆ. ಕಟಾರಿಯಾ ಪಂದ್ಯದ ಆರಂಭದಲ್ಲಿ ಎರಡು ಗೋಲು ಬಾರಿಸಿದ್ದು ನಂತರ ಕೊನೆಯಲ್ಲಿ ತಂಡಕ್ಕಾಗಿ ನಾಲ್ಕನೇ ಗೋಲು ಬಾರಿಸಿ ಗೆಲುವು ತಂದುಕೊಟ್ಟರು.
ಇನ್ನು ನೇಹಾ ಗೋಯಲ್ ಭಾರತದ ಪರ 1 ಗೋಲು ಬಾರಿಸಿದ್ದು ತಂಡ ದಕ್ಷಿಣ ಆಫ್ರಿಕಾವನ್ನು 4-3ರಿಂದ ಸೋಲಿಸಲು ಸಹಾಯಕವಾಯಿತು.