ನಡುಗಡ್ಡೆ ಸಂತಸ್ಥರಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಸಭೆಗೆ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ನಿಯೋಗ ಜೊತೆ ಶಾಸಕ ಡಿ.ಎಸ್ ಭೇಟಿ..!

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ

 

ಲಿಂಗಸುಗೂರು : ಪ್ರತಿ ವರ್ಷ ಕೃಷ್ಣಾ ನದಿ ನಡುಗಡ್ಡೆಗಳ ನಿವಾಸಿಗಳ ಸಂಕಷ್ಟ ಅನುಭವಿಸು ವಂತಾಗುತ್ತಿದೆ. ಶಾಶ್ವತವಾಗಿ ಪರಿಹಾರ ನೀಡುವಲ್ಲಿ 20 ವರ್ಷಗಳಿಂದ ಜಿಲ್ಲಾ ಹಾಗೂ ತಾಲೂಕು ಆಡಳಿತ ಬೇಜವಬ್ದಾರಿಯಿಂದ ನೆನೆಗುದಿಗೆ ಬಿದ್ದಿದೆ. ಸರ್ವೆ 19 ರಲ್ಲಿ 11 ಕುಟಂಬಗಳಿಗೆ ನಿವೇಶನಗಳ ಹಕ್ಕುಪತ್ರ ನೀಡಲಾಗಿದೆ ಆದರೆ

 

ಅಲ್ಲಿ ಹಳ್ಳದ ಬಸಿ ನೀರು ಬರುತ್ತಿದ್ದರಿಂದ ವಾಸ ಮಾಡಲು ಯೋಗ್ಯವಲ್ಲದ ಕಾರಣ ಯಳಗುಂದಿ ಗ್ರಾಮದ ಸರ್ಕಾರಿ ಭೂಮಿಯಲ್ಲಿ ನಿವೇಶನಗಳನ್ನು ಒದಗಿಸಬೇಕು. ಈ ಪೈಕಿ ನಡುಗಡ್ಡೆಯಲ್ಲಿ ವಾಸವಿದ ಮೂರು ನಾಯಕ ಸಮುದಾಯದ ಕುಟಂಬಗಳಿಗೆ ನಿವೇಶನ ಹಕ್ಕು ಪತ್ರ ನೀಡುವ ಮೂಲಕ ತಹಶೀಲ್ದಾರರ ಸ್ವಜಾತಿ ಪ್ರೇಮ ಮೆರೆದಿದ್ದಾರೆ. ಇದಲ್ಲದೆ ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೆಲೆಗುದಿಗೆ ಬಿದ್ದಿದೆ. ಇದರಲ್ಲಿ ಇಲ್ಲಿನ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ,ಸಹಾಯಕ ಆಯುಕ್ತರು, ತಹಶೀಲ್ದಾರ ಇಚ್ಚಾಶಕ್ತಿ ಇಲ್ಲದಿರುವುದೇ ಇದಕ್ಕೆ ಮೂಲಕಾರಣ ವಾಗಿದೆ .

ನದಿಯ ನಡುಗಡ್ಡೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ನೀಡುವಂತೆ ದಲಿತ ಸಂಘರ್ಷ ಸಮಿತಿ ನೇತ್ರತ್ವದಲ್ಲಿ ತಾ.ಪಂ ಸಭಾಂಗಣದಲ್ಲಿ ಶನಿವಾರ 31 ರಂದು ಶಾಸಕ ಡಿ.ಎಸ್.ಹೂಲಗೇರಿ ಅಧ್ಯಕ್ಷ ತೆಯಲ್ಲಿ ನಡೆಯುತ್ತಿದ್ದ ತ್ರೈಮಾಸಿಕ ಕೆಡಿಪಿ ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದರು.

ಇದನ್ನರಿತು ಎಚ್ಚೆತ್ತುಕೊಂಡ ಶಾಸಕರು ಅಧಿಕಾರಿಗಳ ನಿಯೋಗ ಸಂತ್ರಸ್ತರ ಶಾಶ್ವತ ಪರಿಹಾರಕ್ಕಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ನಂತರ ಅಧಿಕಾರಿಗಳು ಸಂತ್ರಸ್ತರಿಗೆ ನೀಡಬೇಕಾದ ಸರ್ಕಾರದ ಸೌಲಭ್ಯಗಳನ್ನು ನೀಡಲು ಮೀನಾಮೇಷ ಮಾಡುತ್ತಿರುವುದನ್ನು ಕಂಡ ಹನುಮಂತಪ್ಪ ವೆಂಕಟಾಪುರ ಹೋರಾಟಗಾರರು ತಾಲೂಕ ದಂಡಾಧಿಕಾರಿ ಜೊತೆ ಮಾತಿನ ಚಕಮಕಿ ನಡೆಯಿತು .

ಇದನ್ನು ಕಂಡ ತಳದಲ್ಲಿದ್ದ ಶಾಸಕರು ಹಾಗೂ ಸಹಾಯಕ ಆಯುಕ್ತರು ಸಂಘಟಕರಿಗೆ ಸಮಜಾಯಿಸಿ ಅಧಿಕಾರಿಗಳಿಗೆ ಕೂಡಲೇ ದಾಖಲೆಗಳನ್ನು ಸಿದ್ಧಪಡಿಸಿ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನು ನೀಡಬೇಕೆಂದು ತಾಲೂಕ ದಂಡಾಧಿಕಾರಿಗಳಿಗೆ ತಾಕೀತು ಮಾಡಿದರು.

ಸಂದರ್ಭದಲ್ಲಿ ಹನುಮಂತಪ್ಪ ವೆಂಕಟಾಪುರ್ ಜಿಲ್ಲಾ ಸಂಘಟನಾ ಸಂಚಾಲಕರು, ಮಹಾದೇವಪ್ಪ ಪರಂಪರ ತಾಲೂಕ ಸಂಚಾಲಕರು, ಹಾಜಪ್ಪ ಕರಡಕಲ್, ಶರಣಪ್ಪ ಕಟ್ಟಿಮನಿ, ಬಸವರಾಜ್ ಬಂಕದ ಮನೆ, ಲಕ್ಕಪ್ಪ ನಾಗರಾಳ, ಹಾಗೂ ಸಂಘಟನೆ ಸದಸ್ಯರು, ನೆರೆ ಸಂತ್ರಸ್ತ ಫಲಾನುಭವಿಗಳು ಇನ್ನಿತರ ಇದ್ದರು.,

Share and Enjoy !

Shares