ಸಿರುಗುಪ್ಪ ಶಾಸಕ ಸೋಮಲಿಂಗಪ್ಪನವರಿಗೆ ಸಚಿವಸ್ಥಾನ ನೀಡಬೇಕೆಂದು ಸಿದ್ದರಾಮೇಶ್ವರ ಭೋವಿ ಸಂಘದ ಆಗ್ರಹ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ : ಬಳ್ಳಾರಿ 

ಸಿರುಗುಪ್ಪ:  ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ತಾಲೂಕಿನ  ಶ್ರೀ ಸಿದ್ದರಾಮೇಶ್ವರ ಭೋವಿ ಸಂಘದವರು ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದರು. 

ರಾಜ್ಯದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮಾಡಿದ್ದು, ಒಳ್ಳೆಯ ನಿರ್ಧಾರವಾಗಿದೆ.  ಈಗ ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಯಾಗುತ್ತಿದೆ, ಈ ಸಂದಂರ್ಭದಲ್ಲಿ ಸಿರುಗುಪ್ಪ ಕ್ಷೇತ್ರಕ್ಕೆ ಇದುವರೆಗೂ ಯಾವ ಪಕ್ಷದವರು ಸಚಿವ ಸ್ಥಾನ ಕೊಟ್ಟಿಲ್ಲ. ಕ್ಷೇತ್ರದ ಜನತೆ ಮತ್ತು ನಮ್ಮ ಸಮುದಾಯ ಬಹುತೇಕರು ಬಿಜೆಪಿಯನ್ನೇ ಬೆಂಬಲಿಸುತ್ತಿದ್ದು, ನಮ್ಮ ಶಾಸಕ ಎಂ.ಎಸ್.ಸೋಮಲಿಂಗಪ್ಪನವರು ಹುಟ್ಟು ಹೋರಾಟಗಾರಾಗಿದ್ದಾರೆ. ಇವರು ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದು, ಬಿ.ಜೆ.ಪಿ, ಪಕ್ಷದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷಕ್ಕಾಗಿ ಅಪಾರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲದೆ ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ತಾಲೂಕಿನಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಅಭಿವೃದ್ಧಿಯ ಹರಿಕಾರ ಎಂಬ ಬಿರುದನ್ನೇ ಪಡೆದಿದ್ದಾರೆ. ಕಾರ್ಯಕರ್ತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಭಿವೃದ್ಧಿಯೇ ಅವರ ಮೂಲ ಮಂತ್ರ  ಮತ್ತು ಬಿ.ಜೆ.ಪಿ. ಪಕ್ಷ ನನಗೆ ತಾಯಿ ಸಮಾನವೆಂದು ಪ್ರತಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಹೇಳುತ್ತಾರೆ. 

ಆದ್ದರಿಂದ ಇವರ ಹಿರಿತನ, ಸರಳತೆ, ಸಮಾಜಮುಖಿ ಮತ್ತು ಪಕ್ಷನಿಷ್ಠೆ ಇರುವಂತಹ ನಮ್ಮ ಶಾಸಕರಿಗೆ ಸಚಿವಸ್ಥಾನ ಕೊಡಿ. ಆಗ ಪಕ್ಷಕ್ಕೆ ಇನ್ನೂ ಶಕ್ತಿ ಬಂದಂತಾಗುತ್ತದೆ. ಇವರಿಗೆ ಸಚಿವ ಸ್ಥಾನ ಕೊಟ್ಟರೆ ಬಳ್ಳಾರಿ ಜಿಲ್ಲೆ, ಕೊಪ್ಪಳ ಜಿಲ್ಲೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪಕ್ಷ ಬಲವರ್ಧನೆ ಮಾಡುವುದಕ್ಕೆ ಹೆಚ್ಚಿನ ಶಕ್ತಿ ತುಂಬಿದಂತಾಗುತ್ತದೆ. ಬಳ್ಳಾರಿ ಜಿಲ್ಲೆಗೆ ಸಚಿವಸ್ಥಾನ ಕೊಡಬೇಕಾದಲ್ಲಿ ಸಿರುಗುಪ್ಪ ಕ್ಷೇತ್ರದ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪನವರಿಗೆ ಸಚಿವಸ್ಥಾನ ನೀಡಲೇಬೇಕು. ಆದಕಾರಣ ತಾವುಗಳು ಈ ಬಾರಿಯಾದರೂ ನಮ್ಮ ಸಿರುಗುಪ್ಪ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸಚಿವಸ್ಥಾನ ಕೊಡಬೇಕೆಂದು ಶ್ರೀ ಸಿದ್ದರಾಮೇಶ್ವರ ಭೋವಿ ಸಂಘದವರು  ಸುದ್ದಿಗೋಷ್ಠಿಯಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ವಿ ಗಾಳೆಪ್ಪ ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ವಿ. ರಾಮರಾಜು, ಪ್ರಧಾನ ಕಾರ್ಯದರ್ಶಿ ವಿ. ನಟರಾಜ ಹಾಗೂ ನಗರಸಭೆ ಹಾಲಿ ಸದಸ್ಯರು, ಗ್ರಾಮ ಪಂಚಾಯಿತಿ ಕೆಂಚನಗುಡ್ಡ ಸದಸ್ಯರುಗಳಾದ ಗುರಪ್ಪ. ವಿ ಬಸವರಾಜ, ಕೃಷ್ಣ,  ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ವಿ.ಮಂಜುನಾಥ ತಾಲ್ಲೂಕು ಬಿ ಜೆ ಪಿ ಮಾಜಿ ಪ್ರಧಾನ ಕಾರ್ಯದರ್ಶಿ ಗಿತ್ತ ಹುಲುಗಪ್ಪ  ಸೇರಿದಂತೆ ಸಮಾಜದ ಅನೇಕ  ಮುಖಂಡರುಗಳು ಇದ್ದರು.

Share and Enjoy !

Shares