ಬಳ್ಳಾರಿ: ಐಎಎಸ್ ಅಧಿಕಾರಿ ಡಾ.ಚಂದ್ರ ಮೋಹನ್ ಅವರು ವಿಮ್ಸ್ ಸಂಸ್ಥೆಗೆ ಭೇಟಿ ನೀಡಿ ವಿಮ್ಸ್‍ನ ಶಿಕ್ಷಕರ ಭವನ ದಲ್ಲಿ ವಿಮ್ಸ್ ವೈದ್ಯಕೀಯ ವಿದ್ಯಾರ್ಥಿ ಗಳ ಜೊತೆ ಸಂವಾದ ನಡೆಸಿದರು.
ಸಂವಾದದಲ್ಲಿ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಚಂದ್ರಮೋಹನ್ ಅವರು ಐಎಎಸ್ ಪರೀಕ್ಷೆಯನ್ನು ಸಫಲವಾಗಿ ಎದುರಿಸಲು ಇರುವ ಸವಾಲುಗಳು, ತಯಾರಿ ಹಾಗೂ ಹೆಚ್ಚಿನ ಅಂಕ ಮತ್ತು ಶ್ರೇಣಿಗಳಿಸಲು ಸಹಾಯವಾಗುವಂಥ ತಮ್ಮ ಹಲವಾರು ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಪಾಲ್ಲ್ಗೊಂಡು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ಸಾಹದಿಂದ ಉತ್ತರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಆಡಳಿತ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಡಾ.ಚಂದ್ರಮೋಹನ್ ಅವರು ವಿಮ್ಸ್ ಕಾಲೇಜಿನ 1987-1993 ಸಾಲಿನ ಹಳೆಯ ವಿದ್ಯಾರ್ಥಿಯಾಗಿದ್ದು, 1996 ಸಾಲಿನಲ್ಲಿ ತಮಿಳುನಾಡು ಸರ್ಕಾರದ ಐಎಸ್ ಅಧಿಕಾರಿ ಯಾಗಿ ನೇಮಕಗೊಂಡರು. ಪ್ರಸ್ತುತ ತಮಿಳುನಾಡು ಸರ್ಕಾ ರದ ಪ್ರವಾಸೋದ್ಯಮ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಕಲೆ ಮತ್ತು ಸಂಸ್ಕøತಿ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಐಎಎಸ್ ಪರೀಕ್ಷಾ ಇತಿಹಾಸದಲ್ಲಿ ಮೊದಲ ಬಾರಿಗೆ ವೈದ್ಯಕೀಯ ವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡ ಹೆಗ್ಗಳಿಕೆ ಇವರದ್ದು. ಈಗಾಗಲೇ ಸುಮಾರು 23 ವರ್ಷಗಳ ಕಾಲ ವಿವಿಧ ಪ್ರಮುಖ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅಶ್ವಿನ್ ಕುಮಾರ್ ಸಿಂಗ್, ಮಿಣಿ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಕೃಷ್ಣ, ಅಂಗರಚನಾಶಾಸ್ತ್ರದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ್, ವಿಮ್ಸ್ ವಿದ್ಯಾರ್ಥಿಗಳ ನಿಲಯಪಾಲಕರಾದ ಡಾ.ಅರುಣ್ ಕುಮಾರ್, ಎಸ್.ಕೆ. ಪಾಂಡುರಂಗ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಡಾ.ಎಸ್.ಕೆ ಅರುಣ್ ಮತ್ತು ಇತರರು ಇದ್ದರು.