ಸಿಎಂ ಬೊಮ್ಮಾಯಿ ಭೇಟಿಯಾದ ಬುಡಾ ಅಧ್ಯಕ್ಷ ದಮ್ಮೂರ ಶೇಖರ್

Share and Enjoy !

Shares
Listen to this article

ಬಳ್ಳಾರಿ: ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಶಾಲಾ-ಕಾಲೇಜು/ಸಂಘ-ಸಂಸ್ಥೆ/ಟ್ರಸ್ಟ್‍ಗಳಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ವಿತರಿಸುತ್ತಿರುವ ಪ್ರಾಧಿಕಾರದ ನಿವೇಶನಗಳನ್ನು ಮಾರಾಟ ಮಾಡಿಕೊಳ್ಳಲು ಪ್ರಾಧಿಕಾರ ಗಳಿಗೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.
ಬುಡಾ ವತಿಯಿಂದ ಇಲ್ಲಿಯವರೆಗೆ 159 ನಾಗರಿಕ ಸೌಲಭ್ಯ ನಿವೇಶನಗಳು ಇದ್ದು, ಇದರಲ್ಲಿ 72 ನಾಗರಿಕ ಸೌಲಭ್ಯ ನಿವೇಶನಗಳನ್ನು ಶಾಲಾ-ಕಾಲೇಜು/ಸಂಘ/ಸಂಸ್ಥೆ/ಟ್ರಸ್ಟ್‍ಗಳಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಇದರ ಬದಲು ಕಂದಾಯ ಇಲಾಖೆ ಶಾಲಾ-ಕಾಲೇಜು/ಸಂಘ/ಸಂಸ್ಥೆ/ಟ್ರಸ್ಟ್‍ಗಳಿಗೆ ನಿವೇಶನಗಳ ಮಾರಾಟ ಸುತ್ತೋಲೆ ಹೊರಡಿಸಲಾಗಿರುತ್ತದೆ.
ಇದೇ ಮಾದರಿಯಲ್ಲಿ ರಾಜ್ಯದಲ್ಲಿನ ಎಲ್ಲಾ ಪ್ರಾಧಿಕಾರಿಗಳಿಗೂ ಸುತ್ತೋಲೆ ಹೊರಡಿಸಿದ್ದಲ್ಲಿ, ಕೋವಿಡ್ ನಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಎಲ್ಲಾ ಪ್ರಾಧಿಕಾ ರಿಗಳಿಗೂ ಇದರಿಂದ ಅನುಕೂಲವಾಗುತ್ತದೆ.
ಆದುದರಿಂದ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳನ್ನು ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಿಗೆ, ಟ್ರಸ್ಟ್‍ಗಳಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ವಿತರಿಸುತ್ತಿರುವ ನಿವೇಶನಗಳನ್ನು ಮಾರಾಟ ಮಾಡಿಕೊಳ್ಳಲು ಪ್ರಾಧಿಕಾರ ಗಳಿಗೆ ಅವಕಾಶ ಮಾಡಿಕೊಡುವಂತೆ ಬುಡಾ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Share and Enjoy !

Shares