ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಗಸ್ಟ್ .4 ರಿಂದ ಆರಂಭ.

Share and Enjoy !

Shares
Listen to this article

ವಿಜಯನಗರ ವಾಣಿ

ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಾಳೆಯಿಂದ(ಬುಧವಾರ) ಆರಂಭವಾಗುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಮುಖಾಮುಖಿ ಕಾದಾಟ ನಡೆಸಲಿವೆ. ಆ ಮೂಲಕ ಕೊಹ್ಲಿ ಪಡೆಯ ಯುಕೆ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ.

ಇತ್ತಿಚೆಗೆ ದಿನೇಶ್‌ ಕಾರ್ತಿಕ್‌ ಅವರ ಸಂದರ್ಶನದಲ್ಲಿ ವಿರಾಟ್‌ ಕೊಹ್ಲಿ, ಕಳೆದ 15 ವರ್ಷಗಳ ಹಿಂದೆ ವಿಧಿವಶರಾಗಿದ್ದ ತಮ್ಮ ತಂದೆಯನ್ನು ಸ್ಮರಿಸಿಕೊಂಡು ಭಾವುಕರಾದರು. ಟೀಮ್‌ ಇಂಡಿಯಾ ನಾಯಕ 2006ರಲ್ಲಿ ತಮ್ಮ ತಂದೆ ಪ್ರೇಮ್‌ ಕೊಹ್ಲಿಯನ್ನು ಕಳೆದುಕೊಂಡಿದ್ದರು. ಇದಾದ ಎರಡು ವರ್ಷಗಳ ಬಳಿಕ, ಕೊಹ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

2008ರಲ್ಲಿ ಭಾರತ ಹಿರಿಯರ ತಂಡಕ್ಕೆ ಚೊಚ್ಚಲ ಪ್ರವೇಶ ಮಾಡುವುದಕ್ಕೂ ಮುನ್ನ ಅದೇ ವರ್ಷದ ಆರಂಭದಲ್ಲಿ ಮಲೇಷ್ಯಾದಲ್ಲಿ ವಿರಾಟ್‌ ಕೊಹ್ಲಿ ತಮ್ಮ ನಾಯಕತ್ವದಲ್ಲಿ 19 ವಯೋಮಿತಿ ಭಾರತ ತಂಡಕ್ಕೆ ವಿಶ್ವಕಪ್‌ ಗೆದ್ದು ಕೊಟ್ಟಿದ್ದರು. ಆದರೆ, ತಮ್ಮ ಪುತ್ರನ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಪ್ರೇಮ್‌ ಕೊಹ್ಲಿ ಇರಲಿಲ್ಲವಲ್ಲ ಎಂಬ ನೋವು ಭಾರತದ ನಾಯಕನಿಗೆ ಈಗಲೂ ಕಾಡುತ್ತಿದೆ.

ತಂದೆಯ ಅನುಪಸ್ಥಿತಿ ಕಾಡುತ್ತಿದೆಯೇ ಎಂದು ದಿನೇಶ್‌ ಕಾರ್ತಿಕ್‌ ಸಂದರ್ಶನದಲ್ಲಿ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ, “ಹೌದು, ಭಾರತ ತಂಡವನ್ನು ನಾನು ಪ್ರತಿನಿಧಿಸಿದಾಗ ಅವರು ಇರಲಿಲ್ಲ. ಈಗ ನನ್ನ ಮಗಳು ಹಾಗೂ ನನ್ನ ತಾಯಿಯ ಮುಖದಲ್ಲಿ ಸಂತೋಷವನ್ನು ನೋಡುತ್ತಿದ್ದೇನೆ. ಒಂದು ವೇಳೆ ಅವರು(ತಂದೆ) ಇದ್ದಿದ್ದರೆ ಇನ್ನಷ್ಟು ಚೆನ್ನಾಗಿ ಇರುತ್ತಿತ್ತು,” ಎಂದು ಕೊಹ್ಲಿ ಭಾವುಕರಾದರು.

ಸಂದರ್ಶನ ಮುಗಿದ ಬಳಿಕ ದಿನೇಶ್ ಕಾರ್ತಿಕ್, ವಿರಾಟ್‌ ಕೊಹ್ಲಿ ಮಾತನಾಡಿರುವ ವಿಡಿಯೋದ ಟೀಸರ್‌ ಅನ್ನು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಇದು ಎಂತಹ ಅದ್ಭುತ ವಾರ! ಪಿತೃತ್ವ, ಪ್ರೇಮ ಜೀವನ, ಆಧ್ಯಾತ್ಮಿಕತೆ, ಸೋಶಿಯಲ್‌ ಮೀಡಿಯಾ, ನಾಯಕತ್ವ ಮತ್ತು ಟೀಮ್ ಇಂಡಿಯಾ ರೆಡ್ ಹಾರ್ಟ್ ಕುರಿತು ವಿಶ್ವ ಕ್ರಿಕೆಟ್ ನ ಸೂಪರ್ ಸ್ಟಾರ್ ಜೊತೆ ಚರ್ಚೆ. ಶೀಘ್ರದಲ್ಲೇ ವಿಡಯೋ ಬರಲಿದೆ! ” ಎಂದು ಕಾರ್ತಿಕ್‌ ತಮ್ಮ ಟೀಸರ್‌ಗೆ ಕ್ಯಾಪ್ಷನ್‌ ನೀಡಿದ್ದಾರೆ.

ಬುಧವಾರ ಜೋ ರೂಟ್‌ ನಾಯಕತ್ವದ ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಆಡುವ ಮೂಲಕ ಭಾರತ ತಂಡದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಅಭಿಯಾನ ಆರಂಭವಾಗಲಿದೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತದ ಪರಿಷ್ಕೃತ ತಂಡ

ರೋಹಿತ್‌ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್‌), ಆರ್‌ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಜಸ್‌ಪ್ರೀತ್‌ ಬುಮ್ರಾ, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್, ಶಾರ್ದುಲ್‌ ಠಾಕೂರ್‌, ಉಮೇಶ್‌ ಯಾದವ್, ಕೆಎಲ್‌ ರಾಹುಲ್, ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್.

ಕಾಯ್ದಿರಿಸಲ್ಪಟ್ಟ ಆಟಗಾರರು:  ಪ್ರಸಿಧ್ ಕೃಷ್ಣ ಮತ್ತು ಅರ್ಝಾನ್‌ ನಾಗವಾಸವಾಲ.

Share and Enjoy !

Shares