ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ದೇವದುರ್ಗ:- ಜಿಲ್ಲೆಯ ಪ್ರಭಾವಿ ನಾಯಕ ಅನುಭವಿ ರಾಜಕಾರಣಿ,ಹಿಂದುಳಿದ ವರ್ಗಗಳ ಹರಿಕಾರ,ಕೋವಿಡ ಸಂದರ್ಭದಲ್ಲಿ ಲಕ್ಷಾಂತರ ಜನರ ಹಸಿವನ್ನು ನೀಗಿಸಿದ ಅನ್ನಬ್ರಹ್ಮ ಸಾವಿರ ಕೋಟಿ ಅನುದಾನವನ್ನ ಹೋದ ಬಜೆಟ್ ನಲ್ಲಿ ತಂದು ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ದೇವದುರ್ಗ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಧೀಮಂತ ನಾಯಕ ನಾಲ್ಕು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿ ಕೂಡ ಸಾಕಷ್ಟು ಕೆಲಸಗಳು ಸಹ ಮಾಡಿದ್ದಾರೆ. ಇಂಥ ಅನುಭವಿ ರಾಜಕಾರಣಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ದೇವದುರ್ಗ ತಾಲೂಕಿನ ಬಿಜೆಪಿ ಮುಖಂಡರ ವತಿಯಿಂದ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ವರಿಗೆ ಆಗ್ರಹಿಸಿಲಾಯಿತು. ಸಮಾಜಕ್ಕೆ ಕೊಡುಗೆ ನೀಡಿದ ಜನಪ್ರಿಯ ಶಾಸಕರಾದ ಕೆ.ಶಿವನಗೌಡ ನಾಯಕರಿಗೆ
ಸಚಿವ ಸ್ಥಾನ ನೀಡಲೇ ಬೇಕು ಎಂದು ಸಂಗಮೇಶ ಚಿಕ್ಕರಾಯಕುಂಪಿ ಬಿ.ಜೆ.ಪಿ ಯುವ ಮುಖಂಡರು ಆಗ್ರಹಿಸಿದರು