ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕಮಲದಿನ್ನಿ ಗ್ರಾಮಸ್ಥರಿಂದ ಕೃಷ್ಣ ನದಿಯಲ್ಲಿ ತೇಲಿ ಬಂದ ಅನಾಥಶವ ಸಂಸ್ಕಾರ

Share and Enjoy !

Shares

ರಾಯಚೂರು ಜಿಲ್ಲೆ
ಲಿಂಗಸೂಗೂರು ;ರಾಜ್ಯದಲ್ಲಿ ಕೃಷ್ಣ ನದಿಯ ಆರ್ಭಟ ಜೋರಾಗಿದ್ದು ರಾಜ್ಯಾದ್ಯಂತ ಬೋರ್ಗರೆಯುತ್ತಿದೆ. ಕೃಷ್ಣೆಯ ಜಲಾನಯನದಿಂದ ನಡುಗಡ್ಡೆಯ ಪ್ರದೇಶದ ಜನರ ಸ್ಥಿತಿ ಅದೋಗತಿ…!
“ಬದುಕು ಕಟ್ಟಿದ್ದೇವೆ ಬದುಕಲು ಬಿಡಿ..! ಬೇಡಿದರೂ ಬೆಂಬಿಡದೆ ಕಾಡುತ್ತಿದೆ ಪ್ರಕೃತಿ ವಿಕೋಪ..!
ಹೀಗೊಂದು ಘಟನೆ ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಕಮಲದಿನ್ನಿಯ ಹೊಳೆಯಲ್ಲಿ ತೇಲಿ ಬಂದ ಅನಾಥ ಶವ ಸಾಕ್ಷಿ. ಕಮಲದಿನ್ನಿ ಗ್ರಾಮದ ಹೊಳೆಯ ದಂಡೆ ಮೇಲೆ ಶವ ತೆಲುತ್ತಿದ್ದುದನ್ನು ಕಂಡು ಗ್ರಾಮಸ್ಥರು ಲಿಂಗಸುಗೂರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು ಗ್ರಾಮಸ್ಥರು ಪೋಲೀಸರ ಇಲಾಖೆಯವರ ಆದೇಶದಂತೆ ಗ್ರಾಮದ ಸಮಾಜ ಸೇವಕ ಅಮರೇಶ ಚಲವಾದಿ ಹಾಗೂ ಆತನ ಸಹಪಾಠಿಗಳು ನದಿಗೆ ಹಾರಿ ಕೊಳೆತ ಸ್ಥಿತಿಯ ಶವವನ್ನು ಹೊರತಂದು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಾದ ಎಚ್.ಬಿ ತಳ್ಳಳ್ಳಿ ಯವರು ಪರೀಕ್ಷಿಸಿದ ನಂತರ ಗ್ರಾಮಸ್ಥರ ಸಾಯದಿಂದ ನದಿಯ ದಂಡೆಯಲ್ಲಿ ಶವ ಸಂಸ್ಕಾರ ಮಾಡಲಾಹಿತು. ಈ ಪೈಕಿ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂದರ್ಭದಲ್ಲಿ ಲಿಂಗಸೂಗೂರು ಪೊಲೀಸ್ ಠಾಣೆಯ ASI ಮೋಹಿನುದ್ದಿನ್, ಪೊಲೀಸ್ ಸಿಬ್ಬಂದಿಗಳಾದ ಪರಶುರಾಮ ಗದ್ದಿ, ಸೋಮನಾಥ ನಾಯಕ್ ಹಾಗೂ ಜಿ ಪಿ ಮಾಜಿ ಸದಸ್ಯರಾದ ಈಶ್ವರಯ್ಯ, ಪ್ರಸ್ತುತ ಜಿ ಪಿ ಸದಸ್ಯರಾದ ಮಾಂತೇಶ ಪೂಜಾರಿ, ಗ್ರಾಮದವರಾದ ಹನುಮಂತ ನಗಾರಿ, ಯಮನಪ್ಪ ಚಲವಾದಿ ಮಾಂತೇಶ್ ಚಲವಾದಿ, ಶಂಕ್ರಪ್ಪ ಬಿಜ್ಜುರ, ನವಲಿ ಗ್ರಾಮದ ಅಮರಪ್ಪ ದೊರೆ, ಶರಣಪ್ಪ ಜಿಪಿ ಸದಸ್ಯರು ರಾಂಪುರ್, ಬಸವರಾಜ್ ನಾಯಕ್ ನರಕಲದಿನ್ನಿ ಇನ್ನಿತರರು ಇದ್ದರು

Share and Enjoy !

Shares