ವಿಜಯನಗರ ವಾಣಿ
ಕುರುಗೋಡು: ಪಟ್ಟಣದ ಪರಿಶಿಷ್ಟ ಸಮುದಾಯದ ಕಾಲೋನಿಗೆ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಮತ್ತು ಕುಂದು ಕೊರೆತೆಗಳ ಬಗ್ಗೆ ಪರಿಶೀಲಿಸಿದರು.
ನಂತರ ಬಹುದಿನಗಳಿಂದ ಪಟ್ಟಣದ ಜನತೆಗೆ ಸಮಸ್ಯೆಯಾಗಿ ಕಾಡುತ್ತಿರುವ ಸಿಂದಿಗೇರಿ ರಸ್ತೆಯಲ್ಲಿರುವ ಸಾರ್ವಜನಿಕ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಕೆರೆಯ ಪಕ್ಕದಲ್ಲಿ ಇರುವ ಆರ್. ಒ. ಪ್ಲಾಂಟ್ ಗೆ ನೀಡಿ ನೀರನ್ನು ಸರಿಯಾದ ರೀತಿಯಲ್ಲಿ ಇದನ್ನು ಶುದ್ದೀಕರಣ ಮಾಡಿ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಅಲ್ಲದೆ ಮುಷ್ಟಗಟ್ಟೆ ರಸ್ತೆ ಹಾಗೂ ಕಂಪ್ಲಿ ರಸ್ತೆಗೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಇನ್ನೂ ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಬೇಕಾಗಿದೆ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ತದನಂತರ ಬಾದನಹಟ್ಟಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಐಟಿಐ ಕಾಲೇಜ್ ಹಾಗೂ ಪಿ ಯು ಕಾಲೇಜ್ ಮತ್ತು ಪ್ರಥಮ ದರ್ಜೆ ಕಾಲೇಜ್ ಗೆ ಭೇಟಿ ನೀಡಿ ಮಾಹಿತಿ ಪಡೆದರು.
ಇನ್ನೂ ಪಿ ಯು ಮತ್ತು ಐಟಿಐ ಕಾಲೇಜ್ ಗೆ ಹೋಗುವುದಕ್ಕೆ ಸೂಕ್ತವಾದ ದಾರಿ ಇಲ್ಲ. ಇದರಿಂದ ವಿದ್ಯಾರ್ಥಿ ಗಳಿಗೆ ನಾನಾ ತರಹದ ಸಮಸ್ಯೆಗಳು ಉಂಟಾಗುತ್ತಿದೆ ಹಾಗೂ ಶಿಕ್ಷಣ ಪಡೆಯುವುದಕ್ಕೆ ತೊಂದ್ರೆ ಆಗುತ್ತದೆ ಆದ್ದರಿಂದ ಸರಿಯಾದ ರೀತಿಯಲ್ಲಿ ಬಿಲ್ಡಿಂಗ್ ನ ಮ್ಯಾಪ್ ನ್ನು ರಚಿಸಿ ನಮಗೆ ಕಳುಹಿಸಿ ನಂತರ ವ್ಯವಸ್ಥೆ ನೀಡಲಾಗುವುದು ಎಂದು ತಿಳಿಸಿದರು.
ಅದೇ ರೀತಿ ಮಾಧ್ಯಮ ದವರು ಕೇಳಿದ ಪಟ್ಟಣದಲ್ಲಿ ತುರ್ತು ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. 100 ಹಾಸಿಗೆವುಳ್ಳ ಆಸ್ಪತ್ರೆ ನಿರ್ಮಾಣ ಗೊಂಡರೆ ಎಲ್ಲ ರೋಗಿಗಳಿಗೆ ಇಲ್ಲೇ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಮತ್ತು ದೂರದ ಆಸ್ಪತ್ರೆ ಗಳಿಗೆ ತೆರಳುವುದು ಸಮಸ್ಯೆ ದೂರವಾಗುತ್ತದೆ ಎಂಬ ಪ್ರೆಶ್ನೆಗೆ ಅವರು ಪ್ರತಿಕ್ರಿಯಿಸಿ 100 ಹಾಸಿಗೆ ವುಳ್ಳ ಆಸ್ಪತ್ರೆ ಬಗ್ಗೆ ಈಗಾಗಲೇ ಎಲ್ಲ ತರಹದ ವ್ಯವಸ್ಥೆ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ಚಾಲನೆ ದೊರೆಯಲಾಗುವುದು ಎಂದು ಮಾಹಿತಿ ನೀಡಿದರು.
ಅಲ್ಲದೆ ಮಿನಿ ವಿಧಾನ ಸೌದ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇನ್ನೂ ಪಟ್ಟಣದ ವಿವಿಧ ಕಡೆ ನಡೆಯುವ ಅಭಿವೃದ್ಧಿ ಕಾಮಗರಿಗಳ ಬಗ್ಗೆ ವೀಕ್ಷಣೆ ಗೆ ಶಾಸಕ ಜೆ. ಎನ್. ಗಣೇಶ್ ಜಿಲ್ಲಾಧಿಕಾರಿಗಳನ್ನು ಕರೆದೋಯ್ಯುದರು.
ಈ ಸಂದರ್ಭದಲ್ಲಿ ಶಾಸಕ ಜೆ. ಎನ್. ಗಣೇಶ್, ತಹಸೀಲ್ದಾರ್ ರಾಘವೇಂದ್ರ ರಾವ್, ಪುರಸಭೆ ಮುಖ್ಯಧಿಕಾರಿ ಪರುಶುರಾಮ್, ಇಂಜಿನಿಯರ್ ಗಳು, ಕಂದಾಯ ಇಲಾಖೆ ಸಿಬ್ಬಂದಿ ಗಳು, ಅರೋಗ್ಯ ಇಲಾಖೆ ಯವರು, ಗುತ್ತಿಗೆದಾರರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.