ವಿಜಯನಗರ ವಾಣಿ
ಬೆಂಗಳೂರು: ಅಂತೂ ಇಂತೂ ಅಳೆದು ತೂಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ನೂತನ ಮಂತ್ರಿಮಂಡಲ ರಚನೆಯಾಗಿದೆ. ಖಾತೆ ಹಂಚಿಕೆಯೊಂದೇ ಬಾಕಿಯಿದ್ದು, ಒಟ್ಟು 34 ಜನರ ಸಂಪುಟದಲ್ಲಿ 29 ಜನರನ್ನು ಮಂತ್ರಿಯನ್ನಾಗಿ ಮಾಡಲಾಗಿದೆ.
ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಹುತೇಕ ಎಲ್ಲಾ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆಲಸ ಹೊಸ ಮುಖಗಳನ್ನು ಬಿಟ್ಟರೆ ಇನ್ನುಳಿದಂತೆ ಮಾಜಿ ಸಿಎಂ ಬಿಎಸ್ವೈ ಅವರ ಸಂಪುಟದಲ್ಲಿದ್ದ ಸಚಿವರೇ ಮುಂದುವರದಂತಾಗಿದೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿನ್ನೂ ತಮ್ಮದೇ ಬಿಗಿ ಹಿಡಿತ ಇದೆ ಎಂದು ಬಿಎಸ್ವೈ ಸಾರಿದಂತಾಗಿದೆ. ಆದರೆ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಸದ್ಯಕ್ಕೆ ಸಚಿವ ಸ್ಥಾನ ನೀಡಿಲ್ಲ.
ಇನ್ನು ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ ಹೀಗಿದೆ.
೧- ಗೋವಿಂದ ಕಾರಜೋಳ
೨- ಕೆ ಎಸ್ ಈಶ್ವರಪ್ಪ
೩ -ಆರ್ ಅಶೋಕ್
೪-ಡಾ ಅಶ್ವಥ್ ನಾರಾಯಣ
೫-ಬಿ ಶ್ರೀರಾಮುಲು
೬-ವಿ ಸೋಮಣ್ಣ
೭- ಜೆ ಸಿ ಮಾಧುಸ್ವಾಮಿ
೮ – ಸಿ ಸಿ ಪಾಟೀಲ್
೯- ಪ್ರಭು ಚವಾಣ
೧೦- ಆನಂದ್ ಸಿಂಗ್
೧೧-ಕೆ. ಗೋಪಾಲಯ್ಯ
೧೨ ಬೈರತಿ ಬಸವರಾಜ
೧೩- ಎಸ್ ಟಿ ಸೋಮಶೇಖರ
೧೪- ಬಿ ಸಿ ಪಾಟೀಲ್
೧೫-ಕೆ ಸುಧಾಕರ್
೧೬ ಕೆ ಸಿ ನಾರಾಯಣಗೌಡ
೧೭- ಶಿವರಾಮ ಹೆಬ್ಬಾರ್
೧೮- ಉಮೇಶ್ ಕತ್ತಿ
೧೯ ಎಸ್ ಅಂಗಾರಾ
೨೦ ಮುರುಗೇಶ್ ನಿರಾಣಿ
೨೧ -ಎಂ ಟಿ ಬಿ ನಾಗರಾಜ
೨೨- ಕೋಟ ಶ್ರೀನಿವಾಸ ಪೂಜಾರಿ
೨೩- ಶಶಿಕಲಾ ಜೊಲ್ಲೆ
೨೪- ವಿ ಸುನಿಲ್ ಕುಮಾರ್
೨೫- ಹಾಲಪ್ಪ ಆಚಾರ್
೨೬- ಅರಗ ಜ್ಞಾನೇಂದ್ರ
೨೭ ಶಂಕರ್ ಪಾಟೀಲ್ ಮುನೇನಕೊಪ್ಪ
೨೮ ಬಿ ಸಿ ನಾಗೇಶ್
೨೯ ಮುನಿರತ್ನ
ಈ ಮಧ್ಯೆ ರಾಜ್ಯದ ಹಲವೆಡೆ ತಮ್ಮ ನೆಚ್ಚಿನ ನಾಯಕರಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಅಭಿಮಾನಿಗಳು ಪ್ರತಿಭಟನೆಯನ್ನೂ ಮಾಡುತ್ತಿದ್ದು, ಈ ಅಸಮಾಧಾನ ಹೇಗೆ ಶಮನವಾಗುತ್ತದೆಯೋ ಕಾದು ನೋಡಬೇಕು.
ಬಳಿಕ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ, ಎಸ್. ಅಂಗಾರ, ಜೆ.ಸಿ.ಮಾಧುಸ್ವಾಮಿ, ಅರಗಜ್ಞಾನೇಂದ್ರ, ಡಾ. ಅಶ್ವಥ ನಾರಾಯಣ, ಸಿ.ಸಿ.ಪಾಟೀಲ್, ಆನಂದ್ ಸಿಂಗ್, ಕೋಟಾ ಶ್ರೀನಿವಾಸ ಪೂಜಾರಿ, ಪ್ರಭು ಚೌಹ್ವಾಣ್, ಮುರುಗೇಶ್ ನಿರಾಣಿ, ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಬಿ.ಸಿ.ಪಾಟೀಲ್, ಬಸವರಾಜ ಬೈರತಿ, ಡಾ.ಕೆ.ಸುಧಾಕರ್, ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಎಂಟಿಬಿ ನಾಗರಾಜ್, ಕೆ.ಸಿ.ನಾರಾಯಣಗೌಡ, ಬಿ.ಸಿ.ನಾಗೇಶ್, ಸುನಿಲ್ ಕುಮಾರ್, ಆಚಾರ್ ಹಾಲಪ್ಪ ಬಸಪ್ಪ, ಶಂಕರ್ ಪಾಟೀಲ್ ಮುನೇನಕುಪ್ಪ, ಮುನಿರತ್ನ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಹುತೇಕರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು. ಪ್ರಭುಚೌವ್ಹಾಣ್ ಅವರು ದೇವರ ಮತ್ತು ಗೋಮಾತೆ ಹೆಸರಿನಲ್ಲಿ, ಮುರುಗೇಶ ನಿರಾಣಿ ಅವರು ದೇವರು ಮತ್ತು ರೈತರ ಹೆಸರಿನಲ್ಲಿ, ಶಿವರಾಂ ಹೆಬ್ಬಾರ್ ಅವರು ದೇವರ ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿ, ಬಿ.ಸಿ. ಪಾಟೀಲ್ ಅವರು ರೈತರು ಮತ್ತು ಬಸವಣ್ಣ ಹೆಸರಿನಲ್ಲಿ, ಶಶಿಕಲಾ ಜೊಲ್ಲೆ ಅವರು ದೇವರ ಮತ್ತು ಕ್ಷೇತ್ರದ ಜನರ ಹೆಸರಿನಲ್ಲಿ, ಶಂಕರ್ ಪಾಟೀಲ್ ಮುನೇನಕುಪ್ಪ ಅವರು ದೇವರ ಮತ್ತು ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.