ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸುಗೂರು : ತಾಲೂಕಿನ ಕೆ,, ಕೆ, ಆರ್, ಡಿ, ಬಿ, ನಿಗಮದ ಯಾವುದೆ ಅನುದಾನ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಹೇಳಿದರು,
ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ರವರು ಕೆ, ಕೆ ಆರ್, ಡಿ, ಬಿ, ನಿಗಮದ ಅನುದಾನ ದುರ್ಬಳಕೆ ಯಾಗಿದೆ ಎಂದು ಆರೋಪ ಮಾಡಿರುವ ಕುರಿತು ಶಾಸಕ ಹೂಲಗೇರಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದ ನಂತರ ಪತ್ರಕರ್ತ ಪ್ರಶ್ನೆಗೆ ಉತ್ತರ ನೀಡಿ ಮಾತನಾಡಿದರು,
2018 ರಲ್ಲಿ 26 ಕೋಟಿ 53 ಲಕ್ಷ 2019-20 ರಲ್ಲಿ 38 ಕೋಟಿ 89 ಲಕ್ಷ 2020ರಲ್ಲಿ 29 ಕೋಟಿ 34 ಲಕ್ಷ 2012 28-ಕೋಟಿ 92 ಲಕ್ಷ ರೂ ಅನುದಾನ ಬಂದಿದೆ ನಾನು ಯಾವುದೆ ಎನ್ನ ತಪ್ಪು ಮಾಡಿಲ್ಲ ತಪ್ಪು ಮಾಡಿಲ್ಲ ಯಾವುದೇ ಕಪ್ಪು ಚುಕ್ಕಿ ಬರುವದಿಲ್ಲ ನಾಳೆ ದಾಖಲೆಗಳ ಸಮೇತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಪತ್ರಿಕಾಗೋಷ್ಠಿ ಮಾಡಿ ಉತ್ತರ ನೀಡಲಾಗುವದು ನಾನು ಯಾವುದೆ ತಪ್ಪು ಮಾಡಿಲ್ಲ ಇದರ ಬಗ್ಗೆ ಯಾವುದೆ ಮುಜುಗರ ಆಗುವುದಿಲ್ಲ ಕಲ್ಯಾಣ ಕರ್ನಾಟಕದಲ್ಲಿ ಕೆ, ಕೆ , ಆರ್, ಡಿ, ಬಿ ದುರ್ಬಳಕೆ ಕುರಿತು ರಾಜ್ಯದಲ್ಲಿ ಮುಖ್ಯಮಂತ್ರಿಗಳು ಕೇಳುತ್ತಾರೆ, ಮಾಜಿ ಸಚಿವರ ಪತ್ರಿಕಾಗೋಷ್ಠಿ ಆರೋಪ ಹೈಕಾಮಾಂಡ್ ನೋಡಿಕೊಳ್ಳುತ್ತದ್ದೆ ಎಂದು ಶಾಸಕ ಹೂಲಗೇರಿ ಹೇಳಿದರು.