ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸೂಗೂರು ; ಪಶು ವೈದ್ಯಾಧಿಕಾರಿಗಳ ನಿರ್ಲಕ್ಷೆ. ಕೋರೋನ ಮಹಾಮಾರಿ ನಡುವೆ ರೈತರಿಗೆ ಕೊಡಲಿ ಪೆಟ್ಟು ಕೊಟ್ಟ ಜಾನುವಾರುಗಳ ಕಾಲುಬಾಯಿ ರೋಗ ಮಹಾಮಾರಿ. ಲಿಂಗಸುಗೂರು: ರೈತರಿಗೆ ಕೊರೋನ ಮಹಾಮಾರಿಯ ನಡುವೆ ಮತ್ತೊಂದು ಪೆಟ್ಟು ನೀಡಿದ ಜಾನುವಾರುಗಳಿಗೆ ಕಾಲು ಬಾಯಿ ರೋಗ . ಲಿಂಗಸ್ಗೂರು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗೂಳಿಪೂರ ದಲ್ಲಿ ಎಮ್ಮೆ ಹಸುಗಳಿಗೆ ಕಾಲುಬಾಯಿ ರೋಗ ಎಮ್ಮೆ ಹಸುಗಳಿಗೆ ಕಳೆದ 15 ದಿನಗಳಿಂದ. ರೋಗ ಕಾಣಿಸಿಕೊಂಡಿದ್ದು ಈ ರೋಗ ದಿನೇದಿನೇ ಹೆಚ್ಚಾಗುತ್ತಿರುವುದರಿಂದ ಗೂಳಿಪುರದ ರೈತರು ತಾಲೂಕ ಪಶವೈದ್ಯಾಧಿಕಾರಿ ಹತ್ತಿರ ತಮ್ಮ ಜನ್ವಾರುಗಳನು ಚಿಕಿತ್ಸೆ ಮಾಡಿ ರಕ್ಷಣೆ ಮಾಡಿ ಎಂದು ಸುಮಾರು 15 ದಿನಗಳಿಂದ ತಮ್ಮ ಅಲೆದಾಡುವುದಿಲ್ಲ ದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ .
ಆದರೆ ತಾಲೂಕ ಪಶವೈದ್ಯಾಧಿಕಾರಿ ಮಾತ್ರ ನಮ್ಮತ್ರ ಅದರ ಮೆಡಿಸನ್ ಇಲ್ಲ ಇಂಜೆಕ್ಷನ್ ಗಳಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ವರ್ತನೆ ತೋರುತಿರುವದರಿಂದ ರೈತರಲ್ಲಿ ಹೆಚ್ಚಿದ ಆತಂಕ ದಿನೇದಿನೆ ರೋಗ ಹರಡುವ ಆತಂಕ ಎದುರಾಗಿದ ಕಾರಣ ದಿಕ್ಕುತೋಚದೆ ರೈತರು ಸೂಕ್ತ ಕಾಲಕ್ಕೆ ಪಶುಗಳಿಗೆ ಕಾಲು ಬಾಯಿ ರೋಗ ಹರಡದಂತೆ ಪಶು ಸಂಗೋಪನಾ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಪತ್ರಿಕೆ ಮಾಧ್ಯಮದ ಮೊರೆಹೋಗಿ ಆದಷ್ಟು ಬೇಗ ಸಂಬಂಧಪಟ್ಟ ಜಿಲ್ಲಾ ತಾಲೂಕ ಪಶುವೈದ್ಯಾಧಿಕಾರಿಗಳು ತಮ್ಮ ಕುರಿಗಳು ಜಾನುವಾರುಗಳನ್ನು ಚಿಕಿತ್ಸೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ರೈತರು ವ್ಯವಸಾಯ ಪಶುಸಂಗೋಪನೆ ನಂಬಿಕೊಂಡಿರುವ ರೈತರಿಗೆ ಇದು ಅವರ ಪ್ರಮುಖ ಆದಾಯದ ಮೂಲ, ಆಗಿರುವದರಿಂದ ಹೈನೋಧ್ಯಮಕ್ಕೆ ಪೆಟ್ಟು ನೀಡುವ ಸಾದ್ಯತೆ ಹೆಚ್ಚಾಗಿದೆ ಅದಲ್ಲದೆ ಸುಮಾರು 150ಹೆಚ್ಚು ಎಮ್ಮೆ ಮತ್ತು ಹಸುಗಳಿಗೆ ,ಕುರಿ ಮೇಕೆ ಗಲ್ಲಿಗೆ ರೋಗ ಕಂಡು ಬಂದಿದೆ. ಈಗಲಾದರೂ ಸಂಬಂಧಪಟ್ಟ ಪಶುವೈದ್ಯ ಅಧಿಕಾರಿಗಳು ರೋಗಗ್ರಸ್ತ ಪ್ರಾಣಿಗಳಿಗೆ ರಕ್ಷಣೆ ಮಾಡುವ ಎಂದು ಕಾದುನೋಡಬೇಕಾಗಿದೆ.