ರಾತ್ರಿ ಕರ್ಪ್ಯೂ ರಾಯಚೂರು ಜಿಲ್ಲಾಧಿಕಾರಿ ಮಾರ್ಗಸೂಚಿ :

ವಿಜಯನಗರವಾಣಿ ಸುದ್ದಿ  :ರಾಯಚೂರು ಜಿಲ್ಲೆ

 

ಪ್ರತಿ ದಿನ ರಾತ್ರಿ 09.00 ಗಂಟೆಯಿಂದ ಬೆಳಿಗ್ಗೆ 05.00 ಗಂಟೆಯವರೆಗೆ ಅಗತ್ಯ ಸೇವೆಗಳನ್ನು  ಚಟುವಟಿಕೆಗಳನ್ನು ಹೊರತುಪಡಿಸಿ , ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ .

2 , ರೋಗಿಗಳು ಮತ್ತು ಅವರ ಆರೈಕೆದಾರರು / ತುರ್ತು ಅಗತ್ಯವಿರುವ ವ್ಯಕ್ತಿಗಳ ಚಲನೆಯನ್ನು ಅನುಮತಿಸಲಾಗುವುದು . 

3 , ರಾತ್ರಿಯಲ್ಲಿ ಕಾರ್ಯಾಚರಣೆ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳು ಕಾರ್ಯನಿರ್ವಹಿಸಲು ಅನುಮತಿ ಇದ . ಅಂತಹ ಸಂಸ್ಥೆಗಳು ನೀಡುವ ಗುರುತಿನ ಚೀಟಿಯೊಂದಿಗೆ ನೌಕರರ ಚಲನೆಯನ್ನು ಅನುಮತಿಸಲಾಗುತ್ತದೆ .

 4. ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರ ನೌಕರರು ಮತ್ತು ವಾಹನಗಳು ಆಯಾ ಸಂಸ್ಥೆ ನೀಡುವ ಮಾನ್ಯತೆ ಹೊಂದಿದ ಗುರುತಿನ ಚೀಟಿಯೊಂದಿಗೆ ಚಲನೆಯನ್ನು ಅನುಮತಿಸಲಾಗುವುದು , ಅವಶ್ಯವಿರುವ IT and ITes ಕಂಪನಿಗಳು / ಸಂಸ್ಥೆಯ ಅಗತ್ಯ ಸಿಬ್ಬಂದಿ / ನೌಕರರು ಮಾತ್ರ ಕಚೇರಿಯಿಂದ ಕೆಲಸ ನಿರ್ವಹಿಸುವುದು ಹಾಗೂ ಉಳಿದ ಸಿಬ್ಬಂದಿಯನ್ನು ಮನೆಯಿಂದಲೇ ಕೆಲಸ ನಿರ್ವಹಿಸತಕ್ಕದ್ದು , 

5 , ಔಷಧಾಲಯಗಳು ಸೇರಿದಂತೆ ವೈದ್ಯಕೀಯ , ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ .

 6 , ಟ್ರಕ್ ಗಳು , ಸರಕು ವಾಹನಗಳು ಅಥವಾ ಖಾಲಿ ವಾಹನಗಳು ಸೇರಿದಂತೆ ಯಾವುದೇ ಸರಕು ವಾಹನಗಳ ಮೂಲಕ ಎಲ್ಲಾ ರೀತಿಯ ಸರಕುಗಳ ಚಲನೆಗೆ ಯಾವುದೇ ನಿರ್ಬಂಧವಿರುವುದಿಲ್ಲ . ಹೋಂ ಡೆಲಿವರಿಗಾಗಿ ಇ – ಕಾಮರ್ಸ್ ಕಂಪನಿಗಳ ಕಾರ್ಯಾಚರಣೆಯನ್ನು ಅನುಮತಿಸಲಾಗಿದೆ . 

7 , ವಿಮಾನ , ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅಧಿಕೃತ ಪ್ರಯಾಣದ ಟಿಕೆಟು / ದಾಖಲೆಗಳನ್ನು ಪ್ರದರ್ಶಿಸುವ ಮೂಲಕ ಚಲನೆಯನ್ನು ಅನುಮತಿಸಲಾಗುತ್ತದೆ . ಕೋವಿಡ್ -19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು :  ಮುಖಗವಸುಗಳು : ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ , ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖಗವಸನ್ನು ಧರಿಸುವುದು ಕಡ್ಡಾಯವಾಗಿದೆ . ಮುಖಗವಸನ್ನು ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ ರೂ .250 / – ಮತ್ತು ಇನ್ನುಳಿದ ಪ್ರದೇಶಗಳಲ್ಲಿ ರೂ .100 / – ದಂಡ ವಿಧಿಸಲಾಗುತ್ತದೆ . ಸಾಮಾಜಿಕ ಅಂತರ : ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಟ 6 ಅಡಿ ( 2 ಗಜ ಅಂತರ ) ಅಂತರವನ್ನು ಕಾಯ್ದುಕೊಳ್ಳಬೇಕು . ಗುಂಪುಗೂಡುವಿಕೆ : ಬೃಹತ್ ಸಾರ್ವಜನಿಕ ಸಭೆಗಳು ಒಟ್ಟುಗೂಡುವಿಕೆ ನಿಷೇಧವನ್ನು ಮುಂದುವರಿಸಲಾಗಿದೆ , ಶವಸಂಸ್ಕಾರ |ಅಂತಿಮ ವಿಧಿ ಸಂಬಂಧಿತ ಕಾರ್ಯಗಳು : ವ್ಯಕ್ತಿಗಳ ಸಂಖ್ಯೆ 20 ಕ್ಕೆ ಮೀರಿರಬಾರದು .  ಸ್ಥಳೀಯ ಪ್ರಾಧಿಕಾರಗಳು ಅದರ ಕಾನೂನುಗಳು , ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿರ್ಬಂಧಿಸುವುದು ಹಾಗೂ ನಿಗದಿಪಡಿಸಿದ ದಂಡ ವಿಧಿಸುವುದು ,  ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ , ಪಾನ್ , ಗುಟ್ಕಾ , ತಂಬಾಕು ಇತ್ಯಾದಿಗಳ ಬಳಕೆಯನ್ನು ನಿಷೇಧಿಸಿದೆ . ದಂಡನೀಯ ಉಪಬಂಧಗಳು : ಕೋವಿಡ್ -19 ನಿರ್ವಹಣೆಯ ಲಾಕ್‌ಡೌನ್ ಕ್ರಮಗಳನ್ನು , ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು , ವಿಪತ್ತು ನಿರ್ವಹಣಾ ಅಧಿನಿಯಮ -2005 ರ ಸೆಕ್ಷನ್ 51 ರಿಂದ 60 ರ ಉಪಬಂಧಗಳು , ಅಲ್ಲದೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 186 ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ಧ ಕ್ರಮ ಜರುಗಿಸಬಹುದು ,

 

Share and Enjoy !

Shares