ಟೋಕಿಯೋ 2020: ಕಂಚಿನ ಪದಕ ಭಾರತೀಯ ಹಾಕಿಗೇಕಿಷ್ಟು ಮಹತ್ವ?

Share and Enjoy !

Shares

ವಿಜಯನಗರ ವಾಣಿ : ಪ್ರೊ ಕಬಡ್ಡಿ ಆರಂಭಗೊಳ್ಳುವವರೆಗೂ ಭಾರತದಲ್ಲಿ ಕಬಡ್ಡಿ ದೇಸಿ ಕ್ರೀಡೆಯಾಗಿ ಉಳಿದುಕೊಂಡಿತ್ತು. ಸೈನಾ ನೆಹ್ವಾಲ್‌ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವರೆಗೂ ಭಾರತದಲ್ಲಿ ಬ್ಯಾಡ್ಮಿಂಟನ್‌ ಬಗ್ಗೆ ಜನ ಹೆಚ್ಚ ಗಮನ ಕೊಡುತ್ತಿರಲಿಲ್ಲ. ಭಾರತದಲ್ಲಿ ಕ್ರಿಕೆಟ್‌ಗಿಂತ ಮೊದಲು ಅತಿಹೆಚ್ಚು ಜನಪ್ರಿಯತೆ ಪಡೆದಿದ್ದು ರಾಷ್ಟ್ರೀಯ ಕ್ರೀಡೆ ಹಾಕಿಯಾದರೂ, ಕಳೆದ ಮೂರ್ನಾಲ್ಕು ದಶಕಗಳಲ್ಲಿ ಹಾಕಿಯ ಜನಪ್ರಿಯತೆ ಕಡಿಮೆಯಾಗುತ್ತಲೇ ಇತ್ತು.

ತಂಡ ಕೆಲ ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದರೂ ಒಲಿಂಪಿಕ್ಸ್‌ನಲ್ಲಿ ಪದಕ ಬರ ಮುಂದುವರಿದಿದ್ದು, ಕ್ರೀಡೆಯತ್ತ ಹೆಚ್ಚು ಜನ ಆಕರ್ಷಿತರಾಗದಿರಲು ಕಾರಣವಾಗಿತ್ತು. ಆದರೆ ಟೋಕಿಯೋ ಗೇಮ್ಸ್‌ನ ಕಂಚಿನ ಪದಕ ಭಾರತದಲ್ಲಿ ಹಾಕಿಗೆ ಮರುಜನ್ಮವಿದ್ದಂತೆ. ಈ ಪದಕ ಮತ್ತಷ್ಟುಯಶಸ್ಸಿಗೆ ನಾಂದಿಯಾಗಲಿದೆ.

ಟೋಕಿಯೋ 2020: ಕೊನೆ ನಿಮಿಷದಲ್ಲಿ 11 ಸೆಕೆಂಡ್‌ ನಿಂತ ಗಡಿಯಾರ: ಎಡವಟ್ಟು!

ಇನ್ಮುಂದೆ ಭಾರತದಲ್ಲಿ ಹಾಕಿಯನ್ನು ಜನ ಗಂಭೀರವಾಗಿ ಪರಿಗಣಿಸಲಿದ್ದಾರೆ. ಹಾಕಿ ತಂಡಗಳ ಪ್ರದರ್ಶನದ ಮೇಲೆ ಅಭಿಮಾನಿಗಳ ಗಮನವಿರಲಿದೆ. ಟೋಕಿಯೋ ಗೇಮ್ಸ್‌ ಪದಕ ಭಾರತ ತಂಡದ ಜವಾಬ್ದಾರಿ ಹೆಚ್ಚಿಸಲಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ 3ನೇ ಸ್ಥಾನಕ್ಕೇರಿದೆ. ತಂಡ ಅಗ್ರಸ್ಥಾನಕ್ಕೇರಲು ಯತ್ನಿಸಬೇಕಿದೆ.

2023ರಲ್ಲಿ ವಿಶ್ವಕಪ್‌ಗೆ ಆತಿಥ್ಯ: ಟೋಕಿಯೋದಿಂದ ವಾಪಸಾಗುತ್ತಿದ್ದಂತೆ ಭಾರತ ತಂಡ 2023ರ ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಬೇಕಿದೆ. ಭಾರತವೇ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದ್ದು, ತಂಡದ ಮೇಲೆ ಭಾರೀ ನಿರೀಕ್ಷೆ ಇರಲಿದೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮೂರು ವರ್ಷ ಮಾತ್ರ ಬಾಕಿ ಇದೆ.

Share and Enjoy !

Shares