ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸುಗೂರು: ತಾಲೂಕಿನ ಯರಡೋಣ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಲು ಸಾರ್ವಜನಿಕರು ಕ್ಷೇತ್ರದ ಶಾಸಕ ಡಿಎಸ್ ಹೂಲಿಗೇರಿಗೆ ಮನವಿ ಸಲ್ಲಿಸಿದರು.
ನಮ್ಮ ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದೆ ಇರುವುದರಿಂದ ನಮ್ಮ ಗ್ರಾಮದಲ್ಲಿ ಸಾರ್ವಜನಿಕರ ಆರೋಗ್ಯದ ಇತದೃಷ್ಠಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ನಮ್ಮ ಗ್ರಾಮಕ್ಕೆ ಮಾಡಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಾಗರಾಜ ಹೊಸಮನಿ, ಸಣ್ಣ ಹುಸೆನಪ್ಪ ದೊಡ್ಡಮನಿ, ಗುಂಡಪ್ಪ ನಾಯಕ ಗೋನವಾರ, ಗುಂಡಪ್ಪ, ಮಲ್ಲಪ್ಪ ನಾಯಕ, ಇಬ್ರಾಹಿಂಸಾಬ ಇನ್ನಿತರರು ಇದ್ದರು.