ಕೆ, ಬಿ, ಜೆ, ಎನ್ ಎಲ್ , ಅಧಿಕಾರಿಗಳ ನಿರ್ಲಕ್ಷ ಗ್ರಾಮದೊಳಕ್ಕೆ ಮತ್ತೆ ಕಾಲುವೆ ನೀರು,

Share and Enjoy !

Shares

ವಿಜಯನಗರವಾಣಿ ಸುದ್ದಿ: ರಾಯಚೂರು ಜಿಲ್ಲೆ

 

ಲಿಂಗಸೂಗೂರು  ; ಕೆ, ಬಿ, ಜೆ, ಎನ್, ಎಲ್  ಅಧಿಕಾರಿಗಳ ನಿರ್ಲಕ್ಷದಿಂದ ರಾಂಪುರು ಏತ ನೀರಾವರಿ ಕಾಲುವೆಯ ನೀರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಾಳಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ  ಐದನಾಳ ಗ್ರಾಮಕ್ಕೆ ಮತ್ತೆ  ನುಗ್ಗುವೆ,

ಐದನಾಳ ಗ್ರಾಮಕ್ಕೆ ಕಾಲುವೆ ನೀರು ನುಗಿದ ಕುರಿತು  ಸುಮಾರು 11 ದಿನಗಳ ಹಿಂದೆ ವರದಿ ಪ್ರಸಾರ ಮಾಡಲಾಗಿತ್ತು, ಆದರು   ಕಂಡರೂ ಕಾಣದಂತಿರುವ   ಕೆ, ಬಿ ಜೆ, ಎನ್, ಎಲ್, ಅಧಿಕಾರಿ  ಅಸಿಸ್ಟೆಂಟ್ ಇಂಜಿನಿಯರ್ ಯವರಾದ ನಾಗೇಶ  ತಾತ್ಕಾಲಿಕ ಮರಂ ಹಾಕಿದರು ಮತ್ತೆ ಐದನಾಳ ಗ್ರಾಮಕ್ಕೆ ನೀರು ಬಂದಿದೆ,

ರಾಂಪುರು ಏತ ನೀರಾವರಿಯ ಕಾಲುವೆ ಚಿಕ್ಕಾದಾಗಿದ್ದು ಕಾಲುವೆ ತುಂಬಾ ಜಾಲಿ ಬೆಳೆದಿದ್ದು ನಿಂತಿದೆ ಹಾಗೂ ಮಣ್ಣು ಕೂಡ ತುಂಬಿದೆ ಅನೇಕ ಬಾರಿ 

ಕೆ ಬಿ ಜೆ ಎನ್ ಎಲ್ ಅಧಿಕಾರಿಗಳಿಗೆ ಜಂಗಲ್ ಕಟಿಂಗ್ ಹಾಗೂ ಮಣ್ಣು ತಗೆಯುವಂತ್ತೆ ಈ ಭಾಗದ ರೈತರು ಮನವಿ ಮಾಡಿದರು ಯಾವುದೆ ಪ್ರಯೋಜನವಾಗಿಲ್ಲ ಎಂಬ ಆರೋಪದ ಮಾತು  ಕೇಳಿ ಬರುತ್ತಿದ್ದೆ,

ಅಧಿಕಾರಿಗಳು ಈಗ ರಾಂಪುರ   ಏತ ನೀರಾವರಿಯ  ಕಾಲುವೆ ಸರಿಯಾಗಿ ನಿರ್ವಹಣೆ ಮಾಡದ ಈ ಭಾಗದ ರೈತರಿಗೆ ಮೀನಮೇಷ ಮಾಡುತ್ತಿದ್ದಾರೆ ಹಿನ್ನಲೆಯಲ್ಲಿ ಕಾಳಾಪುರು ಗ್ರಾಮ ಪಂಚಾಯತ ವ್ಯಾಪ್ತಿಯ ಐದನಾಳ ಗ್ರಾಮಕ್ಕೆ ನೀರು  ನುಗ್ಗುತ್ತಿರುವುದು ಎರಡನೇ ಬಾರಿಯಾಗಿದೆ 

 

ನೀರು ಗ್ರಾಮಕ್ಕೆ ನುಗಿದ್ದರಿಂದ ರಸ್ತೆ ಮೇಲೆ ಹರಿಯುವರಿಂದ ಚಿಕ್ಕ ಮಕ್ಕಳಿಗೂ ಮತ್ತು ವಯಸ್ಸಾದಂತೆ ಹಿರಿಯರಿಗೂ ರೈತರಿಗು  ಗ್ರಾಮಸ್ಥರಿಗೆ ಸಂಚಾರ ಮಾಡಲು ಕೂಡ ತುಂಬಾ ತೊಂದರೆಯಾಗಿದೆ ರಾಂಪುರು ಏತ ನೀರಾವರಿಯ ನೀರು ಪೋಲಾಗಲು ಕಾಣೀಭೂತರಾದ  ಸಂಭಂದಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಹೋದಲ್ಲಿ ನಿಮ್ಮ ಆಫೀಸಿನ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಐದನಾಳ ಗ್ರಾಮಸ್ಥರ  ಒತ್ತಾಯ ಮಾಡಿದರು.

Share and Enjoy !

Shares