ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿನ ವಿವಿಧ ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧಿಸಿ ಡಿಸಿ ಮಾಲಪಾಟಿ ಆದೇಶ

Share and Enjoy !

Shares
Listen to this article

ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಆದ ನಾನು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ವಿವಿಧ ಗ್ರಾಮ ಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಆ.11ರಿಂದ ಆ.20ರವರೆಗೆ ಜರುಗುವ ಮೊಹರಂ ಹಬ್ಬದ ಆಚರಣೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿ ಕಾರಿ ಪವನಕುಮಾರ ಮಾಲಪಾಟಿ ಅವರು ಆದೇಶ ಹೊರಡಿ ಸಿದ್ದಾರೆ. ಕರ್ನಾಟಕ ಪೆÇೀಲೀಸ್ ಕಾಯ್ದೆ 1963 ರ ಕಲಂ 35ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೋಹರಂ ಹಬ್ಬ ಆಚರಣೆ ನಿಷೇಧಿಸಿರುವ ಗ್ರಾಮಗಳು ಮತ್ತು ಸ್ಥಳಗಳ ವಿವರ: ಬಾಪೂಜಿ ನಗರ, ಬಳ್ಳಾರಿ [ಬ್ರೂಸ್ ಪೇಟ್ ಪೆÇಲೀಸ್ ಠಾಣೆ]. ಪೀರಲ ದೇವರ ಗುಡಿ, ಮಹಾನಂದಿ ಕೊಟ್ಟಂ ಒಳಗಡೆ ಹಾಗೂ ತಾಳೂರು ರಸ್ತೆಯ ಕನ್ನಡ ನಗರ ಮುಖ್ಯ ರಸ್ತೆ (ನ್ಯಾಯಾಧಿಶರ ವಸತಿ ಗೃಹ ಕೌಂಪೌಂಡ್ ಪಕ್ಕದಲ್ಲಿ) [ಗಾಂಧಿನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ಕೊಳಗಲ್ಲು, ಕಪ್ಪಗಲ್ಲು, ಸಂಗನಕಲ್ಲು, ಇಬ್ರಾಹಿಂಪುರ ಮತ್ತು ಶ್ರೀಧರಗಡ್ಡೆ ಗ್ರಾಮಗಳು [ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ವಣೇನೂರು, ಜಾಲಿಬೆಂಚಿ, ಡಿ,ಕಗ್ಗಲ್ಲು, ಕೆ.ಕೆ.ಹಾಳ್, ಬಿ.ಡಿ.ಹಳ್ಳಿ, & ಸಿಂಧವಾಳ ಗ್ರಾಮಗಳು [ಮೊಕಾ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ].ನೆಲ್ಲುಡಿ ಕೊಟ್ಟಾಲ್, ಯರ್ರಿಗಂಳಿ, ಹೆಚ್.ವೀರಾಪುರ, ಹೊಸ ಬೆಲ್ಲುಡಿ, ಶಂಕರ್ಸಿಂಗ್ ಕ್ಯಾಂಪ್ ಎಮ್ಮಿಗನೂರು, ಸೋಮಸಮುದ್ರ [ಕುರುಗೋಡು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ಹೊನ್ನಾಳ್ಳಿ [ಕುಡುತಿನಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ತೆಕ್ಕಲಕೋಟೆ, ಹಳೇಕೊಟೆ, ಉಪ್ಪಾರ ಹೊಸಳ್ಳಿ, ಉಡೇಗೋಳ ಮತ್ತು ಅರಳಿಗನೂರು [ತೆಕ್ಕಲಕೋಟೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ಸಿರಿಗೇರಿ, ಕರೂರು, ತಾಳೂರು, ಕೂರಿಗನೂರು [ ಸಿರಿಗೇರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ದೇಶನೂರು, ಕೆ.ಸೂಗೂರು, ಹೀರೇಹಾಳ್, ಮುದೇನೂರು, ಕೆ.ಬೆಳಗಲ್ಲು, ನಾಡಂಗ, ಭಂಡ್ರಾಳ್ [ಸಿರುಗುಪ್ಪ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ಹನಸಿ ಗ್ರಾಮ(ಹೆಚ್.ಬಿ.ಹಳ್ಳಿ ತಾಲೂಕು), ನಿಡಗುರ್ತಿ [ಕೂಡ್ಲಿಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ಸ್ವಾಮಿಹಳ್ಳಿ ಗ್ರಾಮ(ಸಂಡೂರು ತಾಲೂಕು), ಸೋವೆನಹಳ್ಳಿ (ಸಂಡೂರು ತಾಲೂಕು) [ಗುಡೆಕೋಟೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ತಾಳೂರು ಗ್ರಾಮ(ಸಂಡೂರು ತಾಲೂಕು) [ಗಾದಿಗನೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ತಿಮಲಾಪುರ ಗ್ರಾಮ ಹೊಸಪೇಟೆ ತಾಲೂಕು [ ಎಂ.ಎಂ.ಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ]. ನಂ.15 ಗೋನಾಳ್ ಗ್ರಾಮ, ಕಂಪ್ಲಿ ಪಟ್ಟಣದ ಶುಗರ್ ಫ್ಯಾಕ್ಟರಿ ಏರಿಯಾದ 21ನೇ ವಾರ್ಡನಲ್ಲಿ, ನಂ.10 ಮುದಾಪುರ ಗ್ರಾಮದಲ್ಲಿ [ಕಂಪ್ಲಿ ಠಾಣಾ ವ್ಯಾಪ್ತಿಯಲ್ಲಿ].
*ಈ ಅವಧಿಯಲ್ಲಿ ಈ ಕೆಳಕಂಡ ಚಟುವಟಿಕೆಗಳ ನಿಷೇಧ: ಕರ್ನಾಟಕ ಪೆÇಲೀಸ್ ಕಾಯ್ದೆ 1963ರ ಕಲಂ 35(ಎ)ರ ಅಡಿಯಲ್ಲಿ ಶಸ್ತø, ಬಡಿಗೆ, ಬರ್ಚಿ, ಗದೆ, ಬಂದೂಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಲು ಉಪಯೋಗಿಸುಬಹುದಾದ ಯಾವುದೇ ವಸ್ತು ಒಯ್ಯುವುದನ್ನು ನಿಷೇಧಿಸಲಾಗಿದೆ.
ಕರ್ನಾಟಕ ಪೆÇಲೀಸ್ ಕಾಯ್ದೆ 1963ರ ಕಲಂ 35(ಬಿ)ರ ಅಡಿಯಲ್ಲಿ ಯಾವುದೇ ದಾಹಕ(ನಾಶಕಾರಿ) ಪದಾರ್ಥ ಇಲ್ಲವೆ ಸ್ಪೋಟಕ ವಸ್ತು ಒಯ್ಯುವುದನ್ನು ನಿಷೇಧಿಸಲಾಗಿದೆ. ಕರ್ನಾಟಕ ಪೆÇಲೀಸ್ ಕಾಯ್ದೆ 1963ರ ಕಲಂ 35(ಡಿ)ರ ಅಡಿಯಲ್ಲಿ ಯಾವುದೇ ವ್ಯಕ್ತಿಗಳ ಭಾವ ಚಿತ್ರಗಳನ್ನು ಅವಮಾನಕರ ರೀತಿಯಲ್ಲಿ ಪ್ರದರ್ಶಿಸಬಾರದು. ಕರ್ನಾಟಕ ಪೆÇಲೀಸ್ ಕಾಯ್ದೆ 1963ರ ಕಲಂ 35(ಇ)ರ ಅಡಿಯಲ್ಲಿ ಬಹಿರಂಗವಾಗಿ ಘೋಷಣೆ ಮಾಡುವು ದನ್ನು, ಪದ ಹಾಡುವುದನ್ನು, ವಾದ್ಯ ಬಾರಿಸುವುದನ್ನು, ವ್ಯಾಖ್ಯಾನ ಕೊಡುವು ದನ್ನು, ಸನ್ನೆ ಪ್ರದರ್ಶನವನ್ನು, ಆ ಆಫೀಸರರ ಅಭಿಪ್ರಾಯದಲ್ಲಿ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಯಾವುದೇ ವಸ್ತು ಅಥವಾ ತಯಾರಿ ಪ್ರದರ್ಶನ ಅಥವಾ ಪ್ರಸಾರವನ್ನು ಪ್ರತಿಬಂದಿಸುವುದು. ಗುಂಪುಗೂಡಿ ಮೆರವಣಿಗೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಮಾಲಪಾಟಿ ಅವರು ತಿಳಿಸಿದ್ದಾರೆ.
ಈ ಪ್ರತಿಬಂಧಕ ಆಜ್ಞೆಗೆ ವಿರುದ್ಧವಾಗಿ ಯಾರೊಬ್ಬರು ವರ್ತಿಸಿದರೆ, ಅವರು ಯಾವುದೇ ಪೆÇೀಲೀಸ್ ಅಧಿಕಾರಿಗಳಿಂದ ಇಂತಹ ವಸ್ತು ವಶಪಡಿಸಿ ಕೊಳ್ಳಲು ಪಾತ್ರರಾಗುವರು ಹಾಗೂ ಈ ರೀತಿ ಪಡೆಯಲ್ಪಟ್ಟ ಪದಾರ್ಥ ಸರ್ಕಾರಕ್ಕೆ ಜಮಾ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Share and Enjoy !

Shares