ವಿಜಯನಗರ ವಾಣಿ ಸುದ್ದಿ :
ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ಬೊಮ್ಮಾಯಿ ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆಯಲ್ಲಿ
ಇರುಸುಮುರುಸು ಉಂಟಾದ ಬೆನ್ನಲ್ಲೇ ನೂತನ ಸಚಿವ ಆನಂದ್ ಸಿಂಗ್ ಅವರಿಗೆ ನೀಡಿರುವ ಖಾತೆ ವಿಚಾರವಾಗಿ ಅಸಮಾಧಾನ
ಹೊರ ಹಾಕಿದ ಹಿನ್ನೆಲೆಯಲ್ಲಿ ಹೊಸಪೇಟೆ ನಗರದ ಶಾಸಕರ ಕಚೇರಿಯ ಮುಂಭಾಗದ ನಾಮಫಲಕವನ್ನು ಜೆಸಿಬಿ ಮುಖಾಂತರ ತೆರವು ಗೊಳಿಸುತ್ತಿರವದುವ ಹಲವು ಅನುಮಾನಗಳಿಗೆ ಎಡೆಮಾಡಿದೆ.
ರಾಜಕೀಯ ಬೆಳವಣಿಗೆಯಲ್ಲಿ ಸಚಿವ ಆನಂದ್ ಸಿಂಗ್ ರಾಜೀನಾಮೆಗೆ ಮುಂದಾಗುತ್ತಿದ್ದಾರೆ ಎಂಬ ವದಂತಿಯು ಹಬ್ಬುತ್ತಿದೆ .ಮುಖ್ಯ ಮಂತ್ರಿ ಬೊಮ್ಮಾಯಿಅವರು ಸಿಂಗ್ ಮನಸವೊಲಿಸಲು ಯಶಸ್ವಿ ಯಾಗ್ತಾರಾ?ಕಾದು ನೋಡಬೇಕಿದೆ.