ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ಧೋನಿಯ ಆಕರ್ಷಕ ಎಂಟ್ರಿ!

Share and Enjoy !

Shares
Listen to this article

ವಿಜಯನಗರ ವಾಣಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ತಂಡ ಹೊರಡುವ ಮುನ್ನ ಚೆನ್ನೈ ಸೂಪರ್ ಕಿಂಗ್ಸ್  ನಾಯಕ ಮಹೇಂದ್ರ ಸಿಂಗ್ ಧೋನಿ  ಚೆನ್ನೈ ತಲುಪಿದರು. ಅಲ್ಲಿ ಅಭಿಮಾನಿಗಳು ಅವರಿಗೆ ಆತ್ಮೀಯ ಸ್ವಾಗತ ನೀಡಿದರು. ಎಲ್ಲಾ ಸಿಎಸ್‌ಕೆ (CSK) ಆಟಗಾರರು ಚೆನ್ನೈನಿಂದ ಯುಎಇಗೆ ತೆರಳುತ್ತಾರೆ. ಭಾರತದ ಆಟಗಾರರ ಗುಂಪೊಂದು ಆಗಸ್ಟ್ 13 ರಂದು ಯುಎಇಗೆ ಪ್ರಯಾಣ ಬೆಳೆಸಲಿದೆ ಎಂದು ಸಿಎಸ್‌ಕೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಪಿಎಲ್ ಮೊದಲು ಎಂ.ಎಸ್. ಧೋನಿಯ ಆಕರ್ಷಕವಾದ ಎಂಟ್ರಿ:
ಚೆನ್ನೈ ಸೂಪರ್ ಕಿಂಗ್ಸ್  ಸಿಇಒ ಕೆ.ಎಸ್. ವಿಶ್ವನಾಥನ್ ಅವರು, ಐಪಿಎಲ್‌ನ ಉಳಿದ ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಆಗಸ್ಟ್ 13 ರಂದು ತಂಡದ ಭಾರತೀಯ ಆಟಗಾರರು ಯುಎಇಗೆ ತೆರಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಸಿಎಸ್‌ಕೆ ಆಟಗಾರರು ಯುಎಇಗೆ ಹೋಗುವ ಮೊದಲು ಚೆನ್ನೈನಲ್ಲಿ ಯಾವುದೇ ಶಿಬಿರವಿರುವುದಿಲ್ಲ ಎಂದು ವಿಶ್ವನಾಥನ್ ಹೇಳಿದರು.ಸಿಎಸ್‌ಕೆ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ‘ಲಯನ್ ಡೇ ಎಂಟ್ರಿ’ ಎಂಬ ಶೀರ್ಷಿಕೆಯೊಂದಿಗೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ  ಯ ಚಿತ್ರವನ್ನು ಹಂಚಿಕೊಂಡಿದ್ದು ಅವರು ನಗರಕ್ಕೆ ಬಂದಿರುವ ಬಗ್ಗೆ ಮಾಹಿತಿ ನೀಡಿದೆ. ಈ ಮಧ್ಯೆ ಅಭಿಮಾನಿಗಳು ಧೋನಿ ಚೆನ್ನೈಗೆ ಬಂದಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಐಪಿಎಲ್ 2021 (IPL 2021) ರ ಉಳಿದ ಪಂದ್ಯಾವಳಿಗಳು ಯುಎಇಯಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿದೆ. ಮೇ ತಿಂಗಳಲ್ಲಿ ಬಯೋಬಬಲ್ಸ್ ಒಳಗೂ ಕರೋನವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾದ ನಂತರ ಪಂದ್ಯಾವಳಿಯನ್ನು ಮಧ್ಯದಲ್ಲಿ ಮುಂದೂಡಲಾಯಿತು.

ಸೆಪ್ಟೆಂಬರ್ 19 ರಂದು CSK ಯ ಮೊದಲ ಪಂದ್ಯ:
ಇದರ ನಂತರ, ಬಿಸಿಸಿಐ ಯುಎಇಯಲ್ಲಿ ಉಳಿದ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಿತು, ಈ ಹಿಂದೆ ಐಪಿಎಲ್ 2020 ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು. CSK ಮುಂಬೈ ಇಂಡಿಯನ್ಸ್ ವಿರುದ್ಧ ಸೆಪ್ಟೆಂಬರ್ 19 ರಂದು ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಲೀಗ್ ಅನ್ನು ಅಮಾನತುಗೊಳಿಸುವ ಮೊದಲು, ಧೋನಿ ತಂಡವು ಏಳು ಪಂದ್ಯಗಳಿಂದ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು.

 

Share and Enjoy !

Shares