ವಿಜಯನಗರ ವಾಣಿ ಸುದ್ದಿ : ಕುರುಗೋಡು
ಕುರುಗೋಡು. ಅನೈತಿಕ ಸಂಬಂಧ ವಿಚಾರವಾಗಿ ಓರ್ವ ವ್ಯಕ್ತಿ ಕೊಲೆಯಾದ ಘಟನೆ ಕುರುಗೋಡು ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿ ಒರ್ವಾಯಿ ಗ್ರಾಮದ ನಿವಾಸಿ ದಾಲಾಸಬ್ (51) ವರ್ಷ ಇತ ಬಾರೀಕೆರ್ ಜನಾಂಗದ ಜಡಿಯಮ್ಮ ಎಂಬ ಮಹಿಳೆ ಜೊತೆ ಸುಮಾರು 5 ವರ್ಷ ದಿಂದ ಅನೈತಿಕ ಸಂಬಂಧ ಹೊಂದಿದ್ದ ಎನ್ನುವ ಕಾರಣ ದಿಂದ ಜಡಿಯಮ್ಮ ಅವರ ಮಾವ ಅರೋಗ್ಯಪ್ಪ ಬುದುವಾರ ರಾತ್ರಿ ಸರಿ ಸುಮಾರು 11 ಗಂಟೆ ವೇಳೆ ಮನೆಯಲ್ಲಿ ಮಲಗಿದ್ದ ದಾಲಾಸಬ್ ಮೇಲೆ ಮಾರಕ ಅಸ್ತ್ರ ಗಳಿಂದ ಹಲ್ಲೆ ಮಾಡಿ ಕೊಲೆ ಗೈದಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ಆರೋಪಿ ಪರಾರಿಯಾಗಿದ್ದು ಪತ್ತೆ ಗಾಗಿ ಕುರುಗೋಡು ಪೊಲೀಸ್ ಬಲೆ ಬಿಸಿದ್ದಾರೆ. ಸ್ಥಳಕ್ಕೆ ಡಿ ವೈ ಎಸ್ಪಿ ಸತ್ಯನಾರಾಯಣ ರಾವ್, ಸಿಪಿಐ ಚಂದನ್ ಗೋಪಾಲ್, ಪಿ ಎಸ್ ಐ ಮೌನೇಶ್ ರಾಥೋಡ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಕುರುಗೋಡು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.