ದುರ್ಬಲ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವೇಶ ನಿರಾಕರಿಸುವ ಮೂಲಕ ವಾರ್ಷಿಕ 2,500 ಕೋಟಿ ರೂಪಾಯಿ ಉಳಿಕೆ ಮಾಡುತ್ತಿರುವ ಕ್ರೈಸ್ತ ಸಂಘಟನೆಗಳು..

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ಭಾರತದಲ್ಲಿ ಕ್ರೈಸ್ತ ಸಂಘಟನೆಗಳು ನಡೆಸುತ್ತಿರುವ 13,000 ಶಾಲೆಗಳಲ್ಲಿ ಆರ್ಥಿಕವಾಗಿ ದುರ್ಬಲ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ನಿರಾಕರಿಸುವ ಮೂಲಕ ವಾರ್ಷಿಕ 2,500 ಕೋಟಿ ರೂಪಾಯಿ ಉಳಿಕೆ ಮಾಡುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್ ಸಿಪಿಸಿಆರ್) ಅಲ್ಪಸಂಖ್ಯಾತ ಸಂಸ್ಥೆಗಳನ್ನು ಶಿಕ್ಷಣ ಹಕ್ಕು ಕಾಯ್ದೆಯಡಿ ತರಲು ಸಿದ್ಧತೆ ನಡೆಸಿದೆ. ಈ ವೇಳೆ ಕ್ರೈಸ್ತ ಸಂಘಟನೆಗಳು ಆರ್ಥಿಕವಾಗಿ ದುರ್ಬಲ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ನಿರಾಕರಿಸುವ ಮೂಲಕ ವಾರ್ಷಿಕ 2,500 ಕೋಟಿ ರೂಪಾಯಿ ಉಳಿಕೆ ಮಾಡುತ್ತಿವೆ ಎಂಬುದು ತಿಳಿದುಬಂದಿದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಣ ಹಕ್ಕು ಕಾಯ್ದೆಯಡಿ ತಂದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣಕ್ಕೆ ಕಡ್ಡಾಯವಾಗಿ ಪ್ರವೇಶ ನೀಡಬೇಕಾಗುತ್ತದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಎನ್ ಸಿ ಪಿಸಿ ಆರ್ ತಯಾರಿಸಿರುವ ವರದಿಯ ಪ್ರತಿ ಲಭ್ಯವಾಗಿದ್ದು, ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಮನೆಗಳಲ್ಲಿ 2017-18 ರಲ್ಲಿ ಪ್ರತಿ ವಿದ್ಯಾರ್ಥಿಗೆ ಖಾಸಗಿ ಅನುದಾನ ರಹಿತ ಸಂಸ್ಥೆಗಳಲ್ಲಿ ಸರಾಸರಿ 18,26 ಖರ್ಚು ಆಗುತ್ತಿತ್ತು.

ದೇಶಾದ್ಯಂತ ಇರುವ 12,904 ಕ್ರೈಸ್ತ ಮಿಷನರಿ ಶಾಲೆಗಳಲ್ಲಿ 54,86,884 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಿಂದ 10,022.89 ಕೋಟಿ ರೂಪಾಯಿ ಹಣವನ್ನು ವಿದ್ಯಾರ್ಥಿಗಳಿಂದ ಪಡೆಯುತ್ತಿವೆ. ಈ ಶಾಲೆಗಳು ಆರ್ಥಿಕವಾಗಿ ದುರ್ಬಲ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ನೀಡುವ ನಿಯಮದಿಂದ ಹೊರಗೆ ಉಳಿಯುವುದರಿಂದ ಒಟ್ಟಾರೆ ಮಕ್ಕಳ ಪೈಕಿ ಶೇ.25 ರಷ್ಟಕ್ಕೆ ಸಮನಾಗಿ ಖರ್ಚುಗಳನ್ನು ಉಳಿಸುತ್ತಿದ್ದು ವಾರ್ಷಿಕ 2,505.72 ಕೋಟಿ ರೂಪಾಯಿಗಳನ್ನು ಉಳಿಕೆ ಮಾಡುತ್ತಿದೆ ಎಂದು ವರದಿ ಹೇಳಿದೆ.

ಅಲ್ಪಸಂಖ್ಯಾತ ಸಂಸ್ಥೆಗಳನ್ನು ಶಿಕ್ಷಣ ಹಕ್ಕು ಕಾಯ್ದೆಯಿಂದ ಹೊರಗೆ ಇಟ್ಟಿರುವ ಕಾಯ್ದೆಗಳನ್ನು ಬದಲಾವಣೆ ಮಾಡಬೇಕಾದ ತುರ್ತು ಅಗತ್ಯವನ್ನು ಎನ್ ಸಿಪಿಸಿಆರ್ ಮನಗಂಡಿದೆ.

Share and Enjoy !

Shares