ಸಂಸತ್ತಿಗೆ ಆಯ್ಕೆಯಾಗಿರುವ 25 ಬಿಜೆಪಿ ಸಂಸದರಲ್ಲಿ ಯಾರೊಬ್ಬರೂ ಮೇಕೆದಾಟು ಪರ ಮಾತನಾಡಿಲ್ಲ: ಸಿದ್ದರಾಮಯ್ಯ

Share and Enjoy !

Shares
Listen to this article

ವಿಜಯನಗರ ವಾಣಿ

ಸಿಟಿ ರವಿ ಕನ್ನಡಿಗರ ಪರ ಇಲ್ಲ. ತಮಿಳುನಾಡಿದ ಬಿಜೆಪಿ ಉಸ್ತುವಾರಿಯಾಗಿರುವ ಹಿನ್ನಲೆ ಅವರು, ಇದೇ ಕಾರಣಕ್ಕೆ ತಮಿಳುನಾಡು ಪರವಾಗಿ ಮಾತನಾಡುತ್ತಾರೆ. ರಾಜ್ಯದ ಪರವಾಗಿ ಅಲ್ಲ. ಸಿಟಿ ರವಿ ಮಾತ್ರವಲ್ಲ, ಸಂಸತ್ತಿಗೆ ಆಯ್ಕೆಯಾಗಿರುವ 25 ಬಿಜೆಪಿ ಸಂಸದರಲ್ಲಿ ಯಾರೊಬ್ಬರೂ ಮೇಕೆದಾಟು ಪರ ಮಾತನಾಡಿಲ್ಲ. ಬಿಜೆಪಿಯಿಂದ ರಾಜ್ಯದ ರಕ್ಷಣೆ ಆಗಲ್ಲ. ಬಿಜೆಪಿಯವರ ಯಾರ ಪರವಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದೇ ವೇಳೆ ಮೇಕೆದಾಟು ಯೋಜನೆ ನಮ್ಮ ಹಕ್ಕು. ಅದನ್ನು ತಡೆಯುವ ಹಕ್ಕು ತಮಿಳುನಾಡಿನವರಿಗೆ ಇಲ್ಲ. ಈ ಯೋಜನೆ ಕುರಿತು ಸುಮ್ಮನೆ ಮಾತನಾಡುವ ಬದಲು ಅವರು ಕೇಂದ್ರದ ಒಪ್ಪಿಗೆ ಪಡೆಯಲಿ ಎಂದು ಸವಾಲ್​ ಹಾಕಿದರು.

ಇನ್ನು ಇಂದಿರಾ ಕ್ಯಾಂಟೀನ್​ ಹೆಸರು ಬದಲಾವಣೆಗೆ ಆಗ್ರಹಿಸಿದ ಸಿಟಿ ರವಿಗೆ ಇದೇ ವೇಳೆ ತಿರುಗೇಟು ನೀಡಿದ ಅವರು, ದೆಹಲಿಯಲ್ಲಿ ಕ್ರೀಡಾಂಗಣಕ್ಕೆ ಜೇಟ್ಲಿ ಹೆಸರನ್ನು, ಮಧ್ಯಪ್ರದೇಶದಲ್ಲಿ ಮೋದಿ, ವಾಜಪೇಯಿ, ಸಾವರ್ಕರ್ ಹೆಸರನ್ನು ಯಾಕೆ ಇಟ್ಟಿದ್ದಾರೆ ಹೇಳಲಿ. ನೆಹರು ಈ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು. ಇಡೀ ಕುಟುಂಬದ ಬಲಿದಾನ ಮಾಡಿದೆ. ತಾತ ಮೋತಿಲಾಲ್ ಕಾಲದಿಂದಲೂ ಹೋರಾಟ ಮಾಡಿದ್ದಾರೆ. ನಾನು ವಾಜಪೇಯಿ, ಅಡ್ವಾಣಿ ಬಗ್ಗೆ ಲಘುವಾಗಿ ಮಾತನಾಡಲ್ಲ. ಸಿ.ಟಿ.ರವಿ ಯಾವ ಹೋರಾಟ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಲಿ. ಸಿ. ಟಿ. ರವಿ ಗೌರವ ಕೊಡುವುದು ಕಲಿತಿಲ್ಲ. ಲಘುವಾಗಿ ಎಲ್ಲರೂ ಮಾತನಾಡಬಹುದು. ಅವರಂತೆ ನಾನುಲಘುವಾಗಿ ಮಾತನಾಡಿದರೆ ಏನು ವ್ಯತ್ಯಾಸವಿರುತ್ತದೆ ಎಂದರು.

ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಫಲವಾಗಿದೆ. ಜನರಿಗೆ ಸಾವಿನ ಲೆಕ್ಕದಲ್ಲೂ ಸುಳ್ಳು ಹೇಳಿದ್ದಾರೆ. ರಾಜ್ಯದಲ್ಲಿ 4 ಲಕ್ಷ ಜನ ಸತ್ತಿದ್ದಾರೆ. ಸರ್ಕಾರ 36ಸಾವಿರ ಮಾತ್ರ ಲೆಕ್ಕ ಕೊಡುತ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ 75ನೇ ವಸಂತಕ್ಕೆ ಕಾಲಿಟ್ಟ ಕುರಿತು ಮಾತನಾಡಿದ ಅವರು, ನನಗೆ ಜನ್ಮದಿನದ ದಿನಾಂಕ ಗೊತ್ತಿಲ್ಲ. ಶಾಲಾ ದಾಖಲಾತಿ ಪ್ರಕಾರ 74 ವರ್ಷ ತುಂಬಿದೆ.

ನಾನು ಜನ್ಮದಿನ ಆಚರಣೆ ಮಾಡುವುದಿಲ್ಲ. ಆದರೆ, ಅಭಿಮಾನಿಗಳು, ಗೆಳೆಯರು ಆಚರಣೆ ಮಾಡುತ್ತಿದ್ದಾರೆ. ನಾನು ಮೊದಲು ಕೇಕ್ ಕಟ್ ಮಾಡಿಲ್ಲ. .ಗೆಳೆಯರ ಒತ್ತಾಯಕ್ಕೆ‌ಕೇಕ್ ಕಟ್ ಮಾಡುತ್ತೇನೆ ಎಂದರುನಮ್ಮಿಬ್ಬರ ಮಧ್ಯೆ ಬಿರುಕಿಲ್ಲ

ಹುಟ್ಟುಹಬ್ಬದ ಹಿನ್ನಲೆ ಪತ್ರಿಕಾಗೋಷ್ಠಿ ವೇಳೆ ದೂರವಾಣಿ ಮೂಲಕ ಜಮೀರ್ ಶುಭಾಶಯ ತಿಳಿಸಿದ್ದು, ಸರ್ ಹೈದ್ರಾಬಾದ್‌ನಲ್ಲಿದ್ದೆ ನಾನು ಬರಲು ಆಗಿಲ್ಲ. ತಪ್ಪು ತಿಳಿಯಬೇಡಿ, ನಾಳೆ‌ ಮನೆಗೆ ಬರುತ್ತೇನೆ . ನನ್ನ ಬಗ್ಗೆ ತಪ್ಪಾಗಿ ಅರ್ಥೈಸಿ ಕೊಳ್ಳಬೇಡಿ. ಯಾರ್ಯಾರೋ ಏನೋ ಹೇಳುತ್ತಾರೆ ಎಂದು ಜಮೀರ್​ ಮಾತಿಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಹಾಗೆಲ್ಲ ತಪ್ಪು ತಿಳಿದುಕೊಳ್ಳುವವನಲ್ಲ. ನೀನು ಎಲ್ಲಿದ್ದಿಯಾ, ಪರ್ವಾಗಿಲ್ಲ ಬಾ. ನಾಳೆ ಎಲ್ಲ ವಿಷಯ ಮಾತಾಡೋಣ. ನಮ್ಮಿಬ್ಬರ ಮಧ್ಯೆ ಬಿರುಕು ಎಂದು ಬಂದಿದೆ. ಅದೆಲ್ಲ ಹುಟ್ಟುಹಾಕಿರುವ ಸುಳ್ಳು ಸುದ್ದಿ. ನಾಳೆ ನೀನು ಬಾ ಮಾತಾಡೋಣ ಎಂದರು.

ವಿಪಕ್ಷ ನಾಯಕರ ಸಿದ್ದರಾಮಯ್ಯ ಹುಟ್ಟು ಹಬ್ಬದ ಹಿನ್ನಲೆ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಜೆಡಿಎಸ್​ ವರಿಷ್ಠ ಹೆಚ್ ಡಿ ದೇವೇಗೌಡರು, ಸಿಎಂ ಬಸವರಾಜ್ ಬೊಮ್ಮಯಿ, ಸಚಿವ ಡಾ.ಸಿ.ಎನ್ ಅಶ್ವತ್ ನಾರಾಯಣ್ , ಶ್ರೀರಾಮುಲು, ನಿರ್ಮಾಲನಂದನಾಥ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಅವರಿಗೆ ಶುಭ ಕೋರಿದ್ದಾರೆ.

Share and Enjoy !

Shares