ಪ್ರಧಾನಿ ಮೋದಿಯವರು ಥ್ರೋ ನಲ್ಲಿ ಗೋಲ್ಡ್ ಮೆಡಲ್ ಪಡೆದವರಿಗೆ ಮತ್ತು ಬಾಲಿವುಡ್ ನಟಿಯರಿಗೆ ಟ್ವಿಟ್ ಮಾಡುತ್ತಾನೆ ಹೊರೆತು ಮೃತ ಪಡುವ ರೈತರಿಗೆಲ್ಲ : ಮಾಜಿ ಸಚಿವ ಸಂತೋಷ ಲಾಡ್ ವ್ಯಂಗ್ಯ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ : ಕುರುಗೋಡು

ಕುರುಗೋಡು. ಆ.13 ನರೇಂದ್ರ ಮೋದಿಯವರು ಕೇವಲ ಒಬ್ಬ ಭಾಷಣ ಕಾರ ಹಾಗೂ ಶೋಕಿದಾರ ಅಷ್ಟೇ ದೇಶದ ಅಭಿವೃದ್ಧಿ ಯಲ್ಲಿ ಶೂನ್ಯ ಎಂದು ಕಾಂಗ್ರೆಸ್ ಕೆಪಿಸಿಸಿ ವೀಕ್ಷಕ ಹಾಗೂ ಮಾಜಿ ಸಚಿವ ಎಸ್. ಸಂತೋಷ ಲಾಡ್ ಟೀಕಿಸಿದರು.

ಪಟ್ಟಣದ ಶಾಸಕರ ಕಚೇರಿ ಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ 19 ನಿಂದ ಮೃತ ಪಟ್ಟ ಕುಟುಂಬ ಗಳಿಗೆ ಸಹಾಯ ಹಸ್ತ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮೋದಿಯವರು ದಿನ ದಿನಕ್ಕೆ ಥ್ರೋ ನಲ್ಲಿ ಗೋಲ್ಡ್ ಮೆಡಲ್ ಮತ್ತು ಭಾಲಿವುಡ್ ನಟಿಯರಿಗೆ ಟ್ವಿಟ್ ಮಾಡುತ್ತಾನೆ ಹೊರೆತು ಸತ್ತು ಹೋಗುವ ಬಡವರಿಗೆ ಮಾತ್ರ ಟ್ವಿಟ್ ಮಾಡಲ್ಲ ಆ ಪುಣ್ಯಾತ್ಮ ಆಗಾಗಿ ಮೋದಿಯವರು ಬಡವರ ಪರ ಯಾವಾಗಲು ಚಿಂತನೆ ಮಾಡುವ ವ್ಯಕ್ತಿಯಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಯವರಿಗೆ ಕೇವಲ ದುಡ್ಡು ಹಾಗೂ ಅಧಿಕಾರ, ಆಸೆಗಳು ಬೇಕು ಹೊರೆತು ರೈತರ ಸಮಸ್ಯೆಗಳು ಬೇಕಾಗಿಲ್ಲ ಎಂದರು.

ಇನ್ನೂ ಸಮ್ಮಿಶ್ರ ಸರಕಾರ ಇದ್ದಾಗ ಕಂಪ್ಲಿ ಕ್ಷೇತ್ರಕ್ಕೆ ಅನುದಾನ ಬಹಳ ಬಿಡುಗಡೆ ಗೊಂಡಿದೆ. ಆ ಒಂದು ಅನುದಾನ ದಿಂದ ಕ್ಷೇತ್ರ ವನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲೆ ಯಲ್ಲಿ ಮಿನಿ ವಿಧಾನಸೌಧ ಇದ್ದಿಲ್ಲ, ಆದರೆ ಕಂಪ್ಲಿ ಮತ್ತು ಕುರುಗೋಡು ತಾಲೂಕು ಗಳಲ್ಲಿ ನೂತನ ಶಾಸಕರು ಮಂಜೂರು ಮಾಡಿಸಿ ಇವತ್ತು ಕಾಮಗಾರಿ ಪ್ರಾರಂಭ ವಾಗಿರುವುದು ವಿಶೇಷ. ಅಲ್ಲದೆ ಇನ್ನೂ 2 ತಿಂಗಳಲ್ಲಿ 100 ಆಸೀಗೇವುಳ್ಳ ಆಸ್ಪತ್ರೆ ಕೂಡ ನಿರ್ಮಾಣ ವಾಗಲಿದೆ.

ಇನ್ನೂ ಈಗಾಗಲೇ ಕಂಪ್ಲಿ ಸೋಮಪ್ಪ ಕೆರೆ ಯಲ್ಲಿ ನೂತನ ಉದ್ಯಾನವನ ಸಾರ್ವಜನಿಕ ರ ನಿರೀಕ್ಷೆ ಮೀರಿ ನಿರ್ಮಾಣ ವಾಗುತ್ತಿರುವುದು ಉತ್ತಮ ಕೆಲಸ ವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎರಡು ತಾಲೂಕು ಗಳಲ್ಲಿ ಮನೆ ಮಾಡಿ ನಿತ್ಯ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಜನರ ಕೈಗೆ ಸಿಗುವ ಶಾಸಕರಾಗಿದ್ದಾರೆ.

ಇನ್ನೂ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಎಸ್ ಇ ಪಿ ಮತ್ತು ಟಿ ಎಸ್ ಪಿ ಸೇರಿದಂತೆ ಇತರೆ ಯೋಜನೆಗಳ ಅಡಿಯಲ್ಲಿ ಸುಮಾರು 30 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡದೆ ತಡೆ ಹಿಡಿದಿದ್ದಾರೆ. ಇದಲ್ಲದೆ ಮಕ್ಕಳ ಷ್ಕಲರ್ ಶಿಪ್ ಕೂಡ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಇನ್ನೂ ಕಂಪ್ಲಿ ಮತ್ತು ಕುರುಗೋಡು ಎರಡು ತಾಲೂಕಿನ ಬ್ಲಾಕ್ ವತಿಯಿಂದ ಹಾವು ಕಚ್ಚಿರೋರು, ಸಿಡಿಲು ಬದಿರುವುದು, ಕೋವಿಡ್ 19 ನಿಂದ ಮೃತ ಪಟ್ಟಿರೋರು, ಬೀದಿ ಬದಿ ವ್ಯಾಪಾರಸ್ಥರು,  ಕಟ್ಟಡ ಕಾರ್ಮಿಕರು, ಉದ್ಯಮ ಶೀಲತೆಯಿಂದ ನಷ್ಟ ಹೊಂದಿರುವರು ಸೇರಿದಂತೆ ಇತರೆ ಅರ್ಜಿ ಗಳನ್ನು ಸುಮಾರು 10 ದಿನದ ಒಳಗಡೆ 15 ಸಾವಿರ ಕ್ಕೂ ಹೆಚ್ಚು ಅರ್ಜಿಗಳನ್ನು ಅವರವರ ಮನೆಗೆ ತೆರಳಿ ವಿಚಾರಿಸಿ ಪಡೆದು ಕೊಂಡು ನಮಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.

ನಂತರ ಶಾಸಕ ಜೆ. ಎನ್. ಗಣೇಶ್ ಮಾತನಾಡಿ, ಕೋವಿಡ್ 1 ಮತ್ತು 2 ಅಲೆ ಯಿಂದ ಬಹಳಷ್ಟು ಜನ ಮೃತ ಪಟ್ಟಿದ್ದು ಅವರ ಕುಟುಂಬ ಗಳು ಇವತ್ತು ಬೀದಿಗೆ ಬಂದಿದ್ದಾವೆ. ಅಂತಹ ಕುಟುಂಬ ಗಳಿಗೆ ಇವತ್ತು ಬಿಜೆಪಿ ಸರಕಾರ ಪರಿಹಾರ ನೀಡಲು ಮುಂದಾಗದಿರುವುದು ನಿಜಕ್ಕೂ ದುರಂತ ಎಂದು ವಿಷಾದನೀಯ ವ್ಯಕ್ತಪಡಿಸಿದರು.

ಎಮ್ಮಿಗೆನೂರಿನ ನನ್ನ ಅಭಿಮಾನಿ ಯುವಕವೊಬ್ಬ ಕೋವಿಡ್ ಬಂದು ಮೃತ ಹೊಂದಿದ ಎಲ್ಲ ತರಹದ ಅನುಕೂಲ ಮಾಡಿದರು ಉಳಿಸಿಕೊಳ್ಳಲು ಆಗದೆ ನನ್ನ ಮುಂದೇನೆ ಮೃತ ಹೊಂದಿದ ನೋವ್ವು ಇನ್ನೂ ಮರೆ ಮಾಚಿಲ್ಲ ಎಂದು ನೋವ್ವನ್ನು ಹೊರ ಹಾಕಿದರು.

ಕೋವಿಡ್ ನಲ್ಲಿ ಪ್ರತಿ ತಾಲೂಕಿನ 28 ಗ್ರಾಪಂ ಗಳಿಗೆ ತೆರಳಿ ಕೋವಿಡ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ, ಅವರಿಗೆ ಆಹಾರ ಕಿಟ್ ಒದಗಿಸುವ ಕಾರ್ಯ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶಿವ ಯೋಗಿ, ರಫಿ, ಬ್ಲಾಕ್ ಅಧ್ಯಕ್ಷ ಬಂಗಿ ಮಲ್ಲಯ್ಯ, ಇಟಗಿ ಬಸವರಾಜ್ ಗೌಡ,  ವಾಸಪ್ಪ, ಮುಂಡರಗಿ ನಾಗರಾಜ್, ಎ. ಮಾನಯ್ಯ, ಸೇರಿದಂತೆ ಕಂಪ್ಲಿ ಮತ್ತು ಕುರುಗೋಡಿನ ಪುರಸಭೆ ಸದಸ್ಯರು, ಬ್ಲಾಕ್ ಸಮಿತಿ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಕಾರ್ಯ ಕರ್ತರು ಇದ್ದರು.

 

Share and Enjoy !

Shares