ಆಗಸ್ಟ್ 15 ರಂದು ಮಹನೀಯರ ಭಾವಚಿತ್ರಕ್ಕೆ ಅವಮಾನ ಮಾಡಿದವರನ್ನು ಅಮಾನತ್ ಮಾಡುವಂತೆ ಮಲ್ಲಿಕಾರ್ಜುನ ಆಗ್ರಹ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ 

ದೇವದುರ್ಗ ತಾಲ್ಲೂಕಿನ ಶಾವಂತಗೇರ ಮತ್ತು ಜಿನ್ನಾಪುರ ಗ್ರಾಮಗಳಲ್ಲಿ 75ನೇ  ಸ್ವಾತಂತ್ಯ ದಿನ ಆಚರಣೆಯ ಸಂದರ್ಭದಲ್ಲಿ ಡಾ. ಬಿ‌.ಆರ್ .ಅಂಬೇಡ್ಕರ್ ರವರ ಭಾವಚಿತ್ರ ಇಡದೆ ಅವರಿಗೆ ಅವಮಾನ ಮಾಡಿದ್ದಾರೆ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಕವಾಗಿ ಗಾಂಧಿಯವರ ಭಾವಚಿತ್ರ ಮತ್ತು ವಾಸ್ತವಿಕವಾಗಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಂತಹ ಅದರಲ್ಲು ಶಾಸನಬದ್ಧವಾಗಿ ಸ್ವಾತಂತ್ರ್ಯ ಕೊಟ್ಟಿರುವಂತಹ ಸಂವಿಧಾನ ಶಿಲ್ಪಿ ಡಾ||  ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಅವರಿಗೆ ಗೌರವ ಸಮರ್ಪಣೆ ಮಾಡುವುದರ ಜೊತೆಗೆ ಅವರು ಈ ರಾಷ್ಟ್ರಕ್ಕೆ ಕೊಟ್ಟಿರುವಂತಹ ಕೊಡುಗೆಯನ್ನು ಸವಿಸ್ಥಾರವಾಗಿ ಹೇಳುವ ಸುದಿನ. ಇಂತಹ ಸಂದರ್ಭದಲ್ಲಿ ಬಹುಸಂಖ್ಯಾತ ವಿರೋಧಿಯಾಗಿರುವ ಕೆಲ ಮನುವಾದಿ ಮನಸುಳ್ಳ ಅಧಿಕಾರಿಗಳು ಡಾ. ಬಿ.ಆರ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಇದನ್ನು  ಅರಿಯದೆ ಉದ್ದೇಶ ಪುವರ್ಕವಾಗಿ ಅವಮಾಮ ಮಾಡಿದ್ದಾರೆ ಅಲ್ಲದೆ ಕರೆ ಮಾಡಿ ಶಿಕ್ಷಕರಿಗೆ ಸಂಪರ್ಕಸಿದರೆ  ಬೇಜವಾಬ್ದಾರಿ  ಉತ್ತರ ನಿಡಿದ್ದಾರೆ ಆದ್ದರಿಂದ‌ ಶಾವಂತಗೇರ ಮತ್ತು ಜಿನ್ನಾಪುರ ಶಾಲೆಯ ಮುಖ್ಯಗುರಗಳನ್ನು ಅಮಾನತ್ತು ಮಾಡಿ ಅವರ ಮೇಲೆ ಸೂಕ್ತಕ್ರಮಾ ಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣ ‌ಅಧಿಕಾರಿಯಾದ ಡಾ. ಇಂದಿರಾ ಅವರಿಗೆ ಮನವಿಸಲ್ಲಿಸದರು

 

Share and Enjoy !

Shares