ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಪ್ರಜಾವಾಣಿ ವರದಿಗಾರ ಡಾ.ಶರಣಪ್ಪ ಆನೆಹೊಸೂರಿಗೆ ಸೋಮವಾರ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಪಂಪಮ್ಮ ವಿರುಪನಗೌಡ ದತ್ತಿಯನ್ನು ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೆಪುರಂ ವೆಂಕಟೇಶ ಪ್ರಶಸ್ತಿ ಪ್ರದಾನ ಮಾಡಿದರು.
ಡಾ.ಶರಣಪ್ಪ ಆನೆಹೊಸೂರು ಅವರ ಶಾಸನ ಸಂಸ್ಕೃತಿ ಎಂಬ ಕೃತಿಗೆ ಪ್ರಶಸ್ತಿ ದೊರೆತಿದೆ. ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ನಾಡೋಜ ಮನು ಬಳೆಗೆರ, ವಿಮರ್ಶಕ ನರಹರಿ ಸನ್ಮಾನಿಸಿದರು.
ವಿಜಯ ಕರ್ನಾಟಕ ವರದಿಗಾರ ದೇವಣ್ಣ ಕೋಡಿಹಾಳ, ಸಂಪಾದಕ ಹನಮಂತ ನಾಯಕ, ಆರ್.ಟಿ.ಐ ಕಾರ್ಯಕರ್ತ ಅಮರೇಶ ಮಡಿವಾಳರ ಸನ್ಮಾನಿಸಿದರು.