ವಿಜಯನಗರ ವಾಣಿ
ಕುರುಗೋಡು: ಬಡ ಹಾಗೂ ಮಧ್ಯಮ ವರ್ಗದ ಕಿವುಡರಿಗೆ ಶ್ರವಣ ದೋಷ ಯಂತ್ರಗಳ ಸದುಪಯೋಗದೊಂದಿಗೆ ಉತ್ತಮ ಜೀವನ ಪಡೆದುಕೊಳ್ಳಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಹೇಳಿದರು.
ಕುರುಗೋಡು ಸಮೀಪದ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಪಂ ಹಳೆ ಗ್ರಾಪಂಯ ಮಾದರಿ ಗ್ರಂಥಾಲಯದಲ್ಲಿ ಟಚ್ ಫಾರ್ ಲೈಫ್ ಫೌಂಡೇಷನ್ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡ ಮೆಟ್ರಿ ಗ್ರಾಪಂಯ ಮೆಟ್ರಿ, ಚಿನ್ನಾಪುರ, ಉಪ್ಪಾರಹಳ್ಳಿ ಗ್ರಾಮದ ಕಿವುಡರಿಗೆ ಉಚಿತವಾಗಿ ಶ್ರವಣ ದೋಷ ಯಂತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನೂರಿತ ವೈದ್ಯರಿಂದ ಕಿವುಡರ ತಪಾಸಣೆ ನಡೆಸಿ, ನಂತರ ಅವಶ್ಯಕತೆ ಇರುವವರಿಗೆ ಉಚಿತವಾಗಿ ಶ್ರವಣ ದೋಷ ಯಂತ್ರ ನೀಡಲಾಗುವುದು. ಈ ಗ್ರಾಪಂಯಲ್ಲಿ 50 ಕಿವುಡರಿಗೆ ಶ್ರವಣ ದೋಷದ ಯಂತ್ರದ ಮೂಲಕ ಒಳ್ಳೆಯ ಜೀವನ ನಡೆಸಲಿ. ಈ ಕಾರ್ಯಕ್ರಮ ಯಶಸ್ವಿಯಾದರೆ, ಮುಂದಿನ ದಿನದಲ್ಲಿ ಕ್ಷೇತ್ರದಲ್ಲಿ ಇಂತಹ ಕಾರ್ಯಕ್ರಮ ಮೂಲಕ ಕಿವುಡರ ಬದುಕಿಗೆ ನೆರವಾಗಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಾಕ್ಟರ್ ಲಕ್ಷ್ಮಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜಗೌಡ, ಮುಖಂಡರಾದ ಶಿವಶಂಕರಗೌಡ, ಬಿ.ನಾರಾಯಣಪ್ಪ, ಹೊಸಕೋಟೆ ಜಗದೀಶ್, ಕುಮಾರಸ್ವಾಮಿ, ಗಿರೀಶ್, ಜಿ.ಮಾರೆಗೌಡ ಪುರಸಭೆ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಅರೋಗ್ಯ ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು.