ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪಾಲು ಸಮರ್ಪಕ ಬಳಕೆಗೆ ಕ್ರಿಯಾಯೋಜನೆ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

Share and Enjoy !

Shares
Listen to this article

ಹೊಸಪೇಟೆ(ವಿಜಯನಗರ): ನ್ಯಾಯಾಧೀಕರಣ-1 ಮತ್ತು ನ್ಯಾಯಾಧೀಕರಣ-2ರಲ್ಲಿ ನಮ್ಮ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪಾಲನನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಿಯಾಯೋಜನೆ ರೂಪಿಸಲಾ ಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ವಿಜಯನಗರ ಜಿಲ್ಲೆಯ ಹೊಸ ಪೇಟೆ ಸಮೀಪದ ತುಂಗಾಭದ್ರಾ ಜಲಾಶಯದ ವೈಕುಂಠ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಅವರು ಮಂಗಳ ವಾರ ಮಾತನಾಡಿದರು.
ಹಂಚಿಕೆಯಾದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕ, ಆಡಳಿತಾತ್ಮಕ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನು ನಮ್ಮ ಸರಕಾರ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ ಸಚಿವ ಗೋವಿಂದ ಕಾರಜೋಳ ಅವರು ನೀರಿಗೆ ಸಂಬಂಧಿಸಿ ದಂತೆ ಕೆಲ ಸಮಸ್ಯೆಗಳ ವ್ಯಾಜ್ಯಗಳು ಸುಪ್ರೀಂಕೋ ರ್ಟ್‍ನಲ್ಲಿದ್ದು, ಅವುಗಳ ತೀರ್ಪು ಬರುವವರೆಗೆ ನಾವೆಲ್ಲ ಕಾಯಬೇಕಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ 5 ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಹಾಗೂ ಜಲಸಂಪನ್ಮೂಲ ವಿಷಯಕ್ಕೆ ಸಂಬಂಧಿಸಿದಂತೆ ಅಗಾಧ ಅನುಭವ ಹೊಂದಿರುವುದ ರಿಂದ ಎಲ್ಲ ಯೋಜನೆಗಳು ಪೂರ್ಣಗೊಳಿಸಲಿಕ್ಕೆ ಸಹಕಾರಿಯಾ ಗಲಿದೆ ಎಂಬ ವಿಶ್ವಾಸವನ್ನು ಸಚಿವ ಕಾರಜೋಳ ವ್ಯಕ್ತಪಡಿಸಿದರು.
ತೆಲಂಗಾಣ ಮತ್ತು ಆಂಧ್ರಪ್ರದೇಶ ಸಮ್ಮತಿ ಯೊಂದಿಗೆ ನವಲಿ ಗ್ರಾಮದ ಹತ್ತಿರ ಸಮತೋಲನ ಜಲಾ ಶಯ ನಿರ್ಮಾಣ: ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಮ್ಮತಿ ಪಡೆದುಕೊಂಡು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಹತ್ತಿರ ಸಮತೋ ಲನ ಜಲಾಶಯ ನಿರ್ಮಿಸಲು ಯೋಜಿಸಲಾಗಿದ್ದು, ಡಿಪಿಎಆರ್ ತಯಾರಿಕೆ ಕೈಗೆತ್ತಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮೂರು ರಾಜ್ಯಗಳ ಸಭೆ ಕರೆದು ಸಮ್ಮತಿ ಪಡೆದುಕೊ ಳ್ಳಲಾಗುವುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿ ಸಿದರು. ತುಂಗಭದ್ರಾ ಜಲಾಶಯದ ಒಟ್ಟು ಸಂಗ್ರಹಣಾ ಸಾಮಥ್ರ್ಯ 132.47 ಟಿ.ಎಂ.ಸಿ ಇದ್ದು, ಪ್ರಸಕ್ತ ಹೂಳು ತುಂಬಿರುವುದರಿಂದ ಈ ಸಾಮಥ್ರ್ಯವು 100.855 ಟಿ.ಎಂ. ಸಿಗೆ ಇಳಿಕೆಯಾಗಿರುತ್ತದೆ. ಇದರಿಂದ 31.615 ಟಿಎಂಸಿ ನೀರಿನ ಕೊರತೆಯಾಗಿದೆ. ಇದನ್ನು ಸರಿದೂಗಿಸಲು ನವಲಿ ಬಳಿ ಸಮತೋ ಲನ ಜಲಾಶಯ ನಿರ್ಮಿಸುವುದಕ್ಕೆ ಯೋಜಿಸಲಾಗಿದೆ ಎಂದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 16 ಟಿ.ಎಂ.ಸಿ ನೀರಿನ ಹಂಚಿಕೆ: ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 16 ಟಿಎಂಸಿ ನೀರಿನ ಹಂಚಿಕೆಯಾಗಿದೆ ಎಂದು ವಿವರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಈ ಸದರಿ ಯೋಜನೆ ಅಡಿ ಬಲಭಾಗದಲ್ಲಿ ಒಟ್ಟು 35,791 ಎಕರೆ (14485 ಹೆಕ್ಟರ್) ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿ ಸಲಾಗಿದೆ. ಈ ಯೋಜನೆಯ ಎಡಭಾಗದಲ್ಲಿ ಒಟ್ಟು 216467 ಎಕರೆ (87597ಹೆಕ್ಟರ್) ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಲಾಗಿದೆ ಎಂದರು.
122 ಕೆರೆಗಳು ಮತ್ತು 2 ಜಲಾಶಯ ತುಂಬಿ ಸಲು 1800 ಕೋಟಿ ರೂ.ವೆಚ್ಚ: ಈ ವಲಯದ ವ್ಯಾಪ್ತಿಯಲ್ಲಿ ಒಟ್ಟು 8 ಏತ ನೀರವಾರಿ ಯೋಜನೆಗಳಿಂದ 122 ಕೆರೆಗಳು ಮತ್ತು 2 ಜಲಾಶಯ ತುಂಬಿಸಿಲು 1800 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು 172210 ಎಕರೆ (700 ಹೆಕ್ಟರ್) ಬಾಧಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು. ಕುಡಿಯುವ ನೀರಿನ ಸಮಸ್ಯೆ, ಅಂತರ್ಜಲ ಸಮಸ್ಯೆ, ನೀರಿನ ಸಮಸ್ಯೆ ನೀಗಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು.
ವಿಜಯನಗರ ಕಾಲುವೆಗಳ ಆಧುನೀಕರಣಕ್ಕೆ 371 ಕೋಟಿ ರೂ.ವೆಚ್ಚ: ಈ ವಲಯದ ವ್ಯಾಪ್ತಿಯಲ್ಲಿ ವಿಜಯನಗರ ಅರಸರ ಕಾಲದಲ್ಲಿ ನೀರಾವರಿಗಾಗಿ ನಿರ್ಮಿಸಿರುವ ಸುಮಾರು 500 ವರ್ಷಗಳ ಹಿಂದಿನ ಅನ್‍ಲೈನ್ಡ್ 16 ಕಾಲುವೆಗಳು ಮತ್ತು 11 ಅಣೆಕಟ್ಟುಗಳಿದ್ದು, ಅವುಗಳಲ್ಲಿ ಸದ್ಯಕ್ಕೆ ಪ್ಯಾಕೇಜ್-1ಅಡಿ ಕಾಲುವೆ ಮತ್ತು ಅಣೆಕಟ್ಟು ಆಧುನೀಕರಣಗೊಳಿಸಲು 371 ಕೋಟಿ ರೂ. ವೆಚ್ಚ ಮಾಡ ಲಾಗುತ್ತಿದೆ ಎಂದು ಸಚಿವ ಕಾರಜೋಳ ಅವರು ತಿಳಿಸಿದರು. ಇನ್ನುಳಿದ 8 ಅಣೆಕಟ್ಟು 1 ಕಾಲುವೆ ಆಧನೀಕರಣವನ್ನು ಸಹ ಕೈಗೆತ್ತಿಕೊಳ್ಳಲು ರೂ.139ಕೋಟಿ ಗಳಿಗೆ ಸದ್ಯದಲ್ಲೇ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗು ವುದು ಎಂದು ಅವರು ತಿಳಿಸಿದರು. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಅಣ್ಣಾಮಲೈ ಅವರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವ ಕಾರಜೋಳ ಅವರು ಮೇಕೆದಾಟು ಯೋಜನೆ ಜಾರಿಗೆ ಯಾರ ಅನುಮತಿಯೂ ಅಗತ್ಯವಿಲ್ಲ. ಈ ವಿಚಾರ ಸದ್ಯಕ್ಕೆ ಸುಪ್ರೀಂಕೋರ್ಟ್‍ನಲ್ಲಿರುವುದ ರಿಂದ ಹೆಚ್ಚಿಗೆ ಮಾತನಾಡಲಾರೆ ಎಂದು ಅವರು ತಿಳಿಸಿದರು.
*ಆ.21ಕ್ಕೆ ಮುಖ್ಯಮಂತ್ರಿಗಳಿಂದ ಆಲಮಟ್ಟಿ ಜಲಾಶಯಕ್ಕೆ ಬಾಗಿನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಆ.21ರಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು ಜಲಸಂಪ ನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿ ದರು. ಆಗಸ್ಟ್ ತಿಂಗಳಲ್ಲಿ ಬಹುತೇಕ ಎಲ್ಲ ಡ್ಯಾಂಗಳು ತುಂಬಿರುವುದು ಇತಿಹಾಸದಲ್ಲಿಯೇ ಮೊದಲನೇ ಬಾರಿ ಎಂದು ಹೇಳಿದ ಸಚಿವ ಕಾರಜೋಳ ಅವರು ಪ್ರತಿವರ್ಷವೂ ಇದೇ ತರಹ ಮಳೆಯಾಗಲಿ ಎಂದು ಗಂಗಾಮಾತೆಗೆ ಬಾಗಿನ ಅರ್ಪಿಸಿ ಕೋರಿರುವೆ ಎಂದರು. ಸಿಎಂ ಅವರು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಅಂದು ನೀರಾವರಿ ಯೋಜನೆಗಳ ಕುರಿತು ಹೆಚ್ಚಿನ ಗಮನಹರಿಸುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್, ಸಂಸದರಾದ ಕರಡಿ ಸಂಗಣ್ಣ,ವೈ.ದೇವೇಂದ್ರಪ್ಪ, ಶಾಸಕರಾದ ಬಸವ ರಾಜ ದಡೇಸೂ ಗುರ, ಪರಣ್ಣ ಮನಳ್ಳಿ,ವೆಂಕಟರಾವ ನಾಡಗೌಡ ಮತ್ತಿತರರು ಇದ್ದರು.

Share and Enjoy !

Shares