ಮಠದ ಭಕ್ತರಿಗೆ ಮಾಹಿತಿ

Share and Enjoy !

Shares
Listen to this article

ಬಳ್ಳಾರಿ ಜಿಲ್ಲೆ: ಬಳ್ಳಾರಿ ತಾಲ್ಲೂಕಿನ ಶ್ರೀ ಗುರು ಮರುಳ ಸಿದ್ಧಾಶ್ರಮ. ದಾಸರ ನಾಗೇನಹಳ್ಳಿ ಗ್ರಾಮದ ಸಿದ್ಧಾಶ್ರಮದ ಸಂಸ್ಥಾಪಕರಾದ ಶ್ರೀ ನಂಜುಂಡೇಶ್ವರ ತಾತನವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಗುರುಗಳು ತಮಗೆ ತುಂಬಾ ಪರಿಚಿತರಿದ್ದ ಅವರಿಂದ ನಿಮ್ಮ ಕೆಲಸ ಮಾಡಿಸಿ ಕೊಡುವುದಾಗಿ ಹೇಳುತ್ತಾ ಅವರುಗಳು ಇಂತಹ ವಸ್ತುಗಳನ್ನು ತರಬೇಕು ಇಷ್ಟು ಹಣ ಖರ್ಚಾಗುತ್ತದೆ ಎಂದೆಲ್ಲ ಹೇಳುತ್ತಾ ಶ್ರೀಗಳ ಹೆಸರನ್ನು ಅವರೇ ದುರ್ಬಳಕೆ ಮಾಡುತ್ತಿರುವುದು ತಿಳಿದು ಬಂದಿರುತ್ತದೆ.
ಕಾರಣ ಸರ್ವ ಭಕ್ತಾದಿಗಳು ಇಂಥವರ ಮಾತಿಗೆ ಕಿವಿಗೊಡದೆ ನೇರವಾಗಿ ಮರುಳ ಸಿದ್ಧಾಶ್ರಮಕ್ಕೆ ಬಂದು ಶ್ರೀಗಳವರ ಮುಖೇನವಾಗಿ ಭೇಟಿಯಾಗುವುದು ಒಳಿತು. ಮಠದ ವತಿಯಿಂದ ಯಾವುದೇ ಮಧ್ಯವರ್ತಿಗಳು ಇರುವುದಿಲ್ಲವೆಂದು ಈ ಮೂಲಕ ಶ್ರೀಗಳ ಪುತ್ರರಾದ ಚಾಮರಾಜ ಹಿರೇಮಠ ಇವರು ಭಕ್ತರಲ್ಲಿ ತಿಳಿಸಿರುತ್ತಾರೆ.

Share and Enjoy !

Shares