ಮಧುರೆ ಮರಿಸ್ವಾಮಿ ಅವರಿಗೆ ಸರ್ಕಾರದಿಂದ ಗುಬ್ಬಿ ವೀರಣ್ಣ ಪ್ರಶಸ್ತಿ

Share and Enjoy !

Shares
Listen to this article

ಸಿರುಗುಪ್ಪ : ತಾಲ್ಲೂಕಿನ ಗಡಿಭಾಗದ ಗ್ರಾಮ ಮದಿರೆ ಯ ಮರಿಸ್ವಾಮಿ ಇವರಿಗೆ ಕರ್ನಾಟಕ ರಾಜ್ಯ ಸರ್ಕಾರವು ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಿ ಗೌರವಿಸಿದೆ
ಪ್ರಖ್ಯಾತ ಹಾರ್ಮೋನಿಯಂ ಕಲಾವಿದ ಸಂಗೀತ ನಿರ್ದೇಶಕ ಸಂಗೀತ ಮಾಂತ್ರಿಕರೆಂದೆ ಹೆಸರು ಪಡೆದಿದ್ದ ಮಧುರೆ ಶ್ರೀ ಮರಿಸ್ವಾಮಿ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಬುಧವಾರ ಸಂಜೆ ಬೆಂಗಳೂರಿನ
ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಗಿದೆ
ಈ ನಾಡಿಗೆ ಸಲ್ಲಿಸಿದ ಸಂಗೀತ ಸೇವೆಯನ್ನ ಪರಿಗಣಿಸಿ ಸರ್ಕಾರ ಈ ಪ್ರಶಸ್ತಿ ನೀಡಿದೆ.

ಗದಗಿನ ವೀರೇಶ್ವರ ಪುಣ್ಯಾಶ್ರಮದ ಸ್ವರ ಮಾಂತ್ರಿಕ .ಪಂಡಿತ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗಡಿನಾಡು ಪ್ರದೇಶದ ಹಿರಿಯ ರಂಗಭೂಮಿ ಕಲಾವಿದರಾದ ಸಂಗೀತ ಸಾಮ್ರಾಟ ಕಳೆದ 5ದಶಕಗಳಿಂದ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದ ಮತ್ತು ಪ್ರಶಸ್ತಿಗಳಿಗಾಗಿ ಎಂದು ಹಾತೊರೆಯದೆ ಅವುಗಳ ಬೆನ್ನಟ್ಟಿ ಹೋಗದೆ ಕಲಾ ಸರಸ್ವತಿಯ ಸೇವೆ ಮಾಡಿಕೊಂಡಿದ್ದ ಶ್ರೀ ಮಧುರೆ ಮರಿಸ್ವಾಮಿ
ಸರ್ಕಾರ ಅವರ ಸಾಧನೆಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿದ್ದು ಶ್ರೀಯುತರ ಅಸಂಖ್ಯಾತ ಅಭಿಮಾನಿಗಳಿಗೆ ಮತ್ತು ಶಿಷ್ಯ ಬಳಗಕ್ಕೆ ಅತೀವ ಸಂತಸ ತಂದಿದೆ
ಶ್ರೀ ಮದಿರೆ ಮರಿಸ್ವಾಮಿ ಅವರಿಗೆ ಶ್ರೇಷ್ಠ ಡಾಕ್ಟರ್ ಗುಬ್ಬಿವೀರಣ್ಣ ಪ್ರಶಸ್ತಿ ನೀಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸೇರಿದಂತೆ ಅನೇಕ ರಂಗಭೂಮಿಯ ಕಲಾವಿದರು ಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಲಾಸೇವೆ ಮಾಡಿ ಕೊಂಡಿರುವ ಅವರ ಶಿಷ್ಯ ರುಗಳು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ

Share and Enjoy !

Shares