ಲಿಂಗಸುಗೂರು :ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ ಕಳ್ಳಭಟ್ಟಿ ಸಾರಾಯಿ ವಶ.

ವಿಜಯನಗರವಾಣಿ ಸುದ್ದಿ: ರಾಯಚೂರು ಜಿಲ್ಲೆ

ಲಿಂಗಸೂಗೂರು ;ಬುಧುವಾರ  ಮಧ್ಯಾಹ್ನ  ಅಬಕಾರಿ ಜಂಟಿ ಆಯುಕ್ತರು ಕಲಬುರಗಿ ವಿಭಾಗ ಕಲಬುರಗಿ ರವರ ಆದೇಶದಂತೆ.  ಅಬಕಾರಿ ಉಪ ಆಯುಕ್ತರು ರಾಯಚೂರು ಜಿಲ್ಲೆ ರಾಯಚೂರ ಅವರ ನಿರ್ದೇಶನದಂತೆ  ಅಬಕಾರಿ ಉಪ ಅಧೀಕ್ಷಕರು ಉಪವಿಭಾಗ ರಾಯಚೂರ ಅವರ ಮಾರ್ಗದರ್ಶನದಲ್ಲಿ ಲಿಂಗಸೂಗೂರು ವಲಯ ವ್ಯಾಪ್ತಿಯ ಲಿಂಗಸುಗೂರು ತಾಲೂಕಿನ ಭೂಪುರ  ತಾಂಡದಿಂದ ರಾಂಪುರ ಗ್ರಾಮಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಖಚಿತವಾದ ಮಾಹಿತಿ  ಮೇರೆಗೆ ದಾಳಿ ಮಾಡಿ ಸದರಿ ದಾಳಿಯ ಸಮಯದಲ್ಲಿ  ಶಿವಪ್ಪ ತಂದೆ ಖೇಮಪ್ಪ  ಚವಾಣ್ ಎಂಬಾತನು ಅಕ್ರಮವಾಗಿ ಸುಮಾರು 08 (ಎಂಟು) ಲೀಟರ್ ಕಳ್ಳಭಟ್ಟಿ ಸಾರಾಯಿ ಯನ್ನು ಹೋಂದಿ ಮಾರಾಟ ಮಾಡುತ್ತಿರುವುದು ಕಂಡುಬಂದ ಪ್ರಯುಕ್ತ ಆತನನ್ನು ಬಂಧಿಸಿ ಆತನ ವಿರುದ್ಧ ಅಬಕಾರಿ ನಿರೀಕ್ಷಕರು ಲಿಂಗಸುಗೂರು ವಲಯ ರವರು ಪ್ರಕರಣ ಸಂಖ್ಯೆ-8 /2021 -22 ನ್ನು ದಾಖಲಿಸಿದ್ದು ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಒಪ್ಪಿಸಲಾಯಿತು.

ಸದರಿ  ದಾಳಿಯ ಸಮಯದಲ್ಲಿ   ಅಬಕಾರಿ ನಿರೀಕ್ಷಕಿ  ಸರಸ್ವತಿ.   ಅಬಕಾರಿ ಉಪ ನಿರೀಕ್ಷಕರಾದ  ಲಿಂಗರಾಜು ಮತ್ತು ಮಹಮ್ಮದ್ ಹುಸೇನ್ ಅಬಕಾರಿ ಉಪ ನಿರೀಕ್ಷಕರು ಸಿಬ್ಬಂದಿಗಳಾದ ಮಂಜುನಾಥ. ಮಾಳಿಂಗರಾಯ. ರಾಜೇಂದ್ರ  ವಾಹನ ಚಾಲಕ ಅಮರೇಶ ಮತ್ತು ಮಂಜುನಾಥ ಲಿಂಗಸೂಗೂರು ವಲಯ ಸಿಬ್ಬಂದಿಗಳು  ಇದರು.

 

Share and Enjoy !

Shares