ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಖರೀದಿಗೆ ಮುಗಿಬಿದ್ದ ಜನ

Share and Enjoy !

Shares
Listen to this article

ವಿಜಯನಗರ ವಾಣಿ

ವರಮಹಾಲಕ್ಷ್ಮೀ  ಹಬ್ಬದ ಆಚರಣೆ ಹಿನ್ನೆಲೆ ನಾಡಿದಾದ್ಯಂತ ಖರೀದಿ ಬರದಿಂದ ಸಾಗುತ್ತಿದೆ. ಇನ್ನು ಬೆಂಗಳೂರಿನ ಕೆ.ಆರ್.ಪುರಂ ರೈತರ ಮಾರುಕಟ್ಟೆಗೆ  ಜನರು ಮುಗುಬಿದ್ದಿದ್ದು, ಸುಮಾರು ಎರಡು ಕಿಲೋಮೀಟರ್ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಆಗಿದೆ. ಬೇಕಾಬಿಟ್ಟಿಯಾಗಿ ರಸ್ತೆ ಮಧ್ಯೆ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಮುಖ್ಯರಸ್ತೆ ಬದಿಯಲ್ಲೇ ವ್ಯಾಪಾರ ವಹಿವಾಟು ನಡೆಯುತ್ತಿರುವ ಹಿನ್ನೆಲೆ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ದೈಹಿಕ ಅಂತರ ಇಲ್ಲದೇ, ಮಾಸ್ಕ್ ಕೂಡ ಧರಿಸದೇ ಜನರು ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ.

ಗಾಂಧಿಬಜಾರ್​ನಲ್ಲೂ ಹೂವು, ಹಣ್ಣು ಖರೀದಿಗೆ ಜನ ಜನಜಂಗುಳಿ ಸೇರಿದೆ. ಕೊರೊನಾ ಇದೆ, ಹೊರಗೆ ಬರಬೇಡಿ ಅಂತ ಹೇಳುತ್ತಾರೆ. ಜನರು ಬರದಿದ್ದರೆ ವ್ಯಾಪಾರಸ್ಥರು ನಾವೇನ್ ಮಾಡೋದು. ಸರ್ಕಾರ ಗ್ಯಾಸ್ ಬೆಲೆ ಸೇರಿದಂತೆ ಎಲ್ಲಾ ರೇಟ್ ಜಾಸ್ತಿ ಮಾಡ್ತಾ ಇದೆ. ಹೀಗಾದರೆ ವ್ಯಾಪಾರನೂ ಇಲ್ಲದೆ ನಾವು ಹೇಗೆ ಬದುಕುವುದು ಅಂತ ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.  ಗ್ರಾಹಕರು, ಎಲ್ಲಾ ಬೆಲೆ ಜಾಸ್ತಿ ಆಗಿದೆ. 50 ರೂಪಾಯಿ ಇದ್ದ ಹೂವಿಗೆ 150 ರೂಪಾಯಿ ಅಂತಾರೆ. ಗ್ಯಾಸ್, ಅಡುಗೆ ಎಣ್ಣೆ ಬೆಲೆ ಎಲ್ಲವೂ ಜಾಸ್ತಿ ಆಗಿದೆ. ಆದ್ರೂ ಖರೀದಿಸಲೇಬೇಕು, ಜೀವನ ಮಾಡಲೇಬೇಕು ಅಂತ ಅಳಲು ತೋಡಿಕೊಂಡರು.

Share and Enjoy !

Shares