ಭಾರತದ ವಿರುದ್ಧ ದೊಡ್ಡ ಹೆಜ್ಜೆ ಇಟ್ಟ ತಾಲಿಬಾನ್..!

Share and Enjoy !

Shares
Listen to this article

ವಿಜಯನಗರ ವಾಣಿ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ವಶಪಡಿಸಿಕೊಂಡ ಕೆಲವು ದಿನಗಳ ನಂತರ ತಾಲಿಬಾನ್ ಭಾರತದೊಂದಿಗಿನ ಎಲ್ಲಾ ಆಮದು ಮತ್ತು ರಫ್ತುಗಳನ್ನು ನಿಲ್ಲಿಸಿದೆ. ಪಾಕಿಸ್ತಾನದ ಸಾಗಾಣಿಕಾ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ತಾಲಿಬಾನ್ ನಿಲ್ಲಿಸಿದೆ. ಇದೇ ಕಾರಣದಿಂದಲೇ ಅಫ್ಘಾನಿಸ್ತಾನದಿಂದ ರಫ್ತು ಮತ್ತು ಆಮದು ನಿಲ್ಲಿಸಲಾಗಿದೆ ಅಂತಾ ಭಾರತೀಯ ರಫ್ತು ಸಂಸ್ಥೆಯ ಒಕ್ಕೂಟದ ಮಹಾನಿರ್ದೇಶಕ(ಎಫ್ಐಇಒ) ಡಾ.ಅಜಯ್ ಸಹಾಯ್ ​ಹೇಳಿದ್ದಾರೆ.

‘ನಾವು ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿಂದ ಆಮದುಗಳು ಪಾಕಿಸ್ತಾನದ ಸಾಗಣೆ ಮಾರ್ಗದ ಮೂಲಕ ಬರುತ್ತವೆ. ಇಲ್ಲಿಯವರೆಗೆ ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆಯನ್ನು ನಿಲ್ಲಿಸಿದೆ. ಆದ್ದರಿಂದ ವಾಸ್ತವಿಕವಾಗಿ ಆಮದು ನಿಂತಿದೆ’ ಎಂದು ಸಹಾಯ್ ತಿಳಿಸಿದ್ದಾರೆ.

ಸಹಾಯ್ ಹೇಳುವ ಪ್ರಕಾರ, ‘ಭಾರತವು ಅಫ್ಘಾನಿಸ್ತಾನದ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. ಯುದ್ಧಪೀಡಿತ ರಾಷ್ಟ್ರದಲ್ಲಿ ಭಾರತವು ಗಮನಾರ್ಹ ಪ್ರಮಾಣದ ಹೂಡಿಕೆಯನ್ನು ಮಾಡಿದೆ. ವಾಸ್ತವವಾಗಿ ನಾವು ಅಫ್ಘಾನಿಸ್ತಾನದ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಬ್ಬರಾಗಿದ್ದೇವೆ. 2021ರಲ್ಲಿ ಅಫ್ಘಾನಿಸ್ತಾನಕ್ಕೆ ನಮ್ಮ ರಫ್ತುಗಳು ಸುಮಾರು 835 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟಿದೆ. ನಾವು ಸುಮಾರು 510 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

‘ವ್ಯಾಪಾರದ ಹೊರತಾಗಿಯೂ ನಾವು ಅಫ್ಘಾನಿಸ್ತಾನದಲ್ಲಿ ಗಣನೀಯ ಪ್ರಮಾಣ ಹೂಡಿಕೆ ಮಾಡಿದ್ದೇವೆ. ಅಫ್ಘಾನಿಸ್ತಾನದಲ್ಲಿ ಸುಮಾರು 400 ಪ್ರಾಜೆಕ್ಟ್ ಗಳಲ್ಲಿ ಅಂದಾಜು 3 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಭಾರತ ಹೂಡಿಕೆ ಮಾಡಿದೆ. ಇವುಗಳಲ್ಲಿ ಕೆಲವ ಯೋಜನೆಗಳು ಪ್ರಸ್ತುತ ನಡೆಯುತ್ತಿವೆ’ ಅಂತಾ ಸಹಾಯ್ ಮಾಹಿತಿ ನೀಡಿದ್ದಾರೆ.

ಭಾರತವು ಸಕ್ಕರೆ, ಔಷಧಿಗಳು, ಉಡುಪು, ಚಹಾ, ಕಾಫಿ, ಮಸಾಲೆಗಳು ಮತ್ತು ಟ್ರಾನ್ಸ್ಮಿಷನ್ ಟವರ್ ಗಳನ್ನು ಅಫ್ಘಾನಿಸ್ತಾನಕ್ಕೆ ರಫ್ತು ಮಾಡುತ್ತದೆ. ಮುಖ್ಯವಾಗಿ ಡ್ರೈ ಫ್ರೂಟ್ಸ್ ಸೇರಿದಂತೆ ಕೆಲವು ವಸ್ತುಗಳನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ. ಇದಲ್ಲದೆ ಅಫ್ಘಾನಿಸ್ತಾನದಿಂದ ಸಣ್ಣ ಪ್ರಮಾಣದ ಗಮ್ ಮತ್ತು ಈರುಳ್ಳಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಸಹಾಯ್ ಹೇಳಿದ್ದಾರೆ.

Share and Enjoy !

Shares