ತುಂಗಾಭದ್ರಾ ಜಲಾಶಯ,ಹಂಪಿ ಸ್ಮಾರಕಗಳ ವೀಕ್ಷಣೆಗೆ ಕುಟುಂಬ ಸಮೇತ ಆಗಮನ ವಿಜಯನಗರಕ್ಕೆ ಬಂದಿಳಿದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ದಂಪತಿ

Share and Enjoy !

Shares
Listen to this article

ಹೊಸಪೇಟೆ(ವಿಜಯನಗರ): ತುಂಗಾಭದ್ರಾ ಜಲಾಶಯ,ಹಂಪಿಯ ವಿಶ್ವ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ.ಉಷಾ ಅವರು ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಮುನ್ಸಿಪಲ್ ಮೈದಾನಕ್ಕೆ ವಾಯುಪಡೆಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಶುಕ್ರವಾರ ಸಂಜೆ ಬಂದಿಳಿದರು.
ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರಿಗೆ ಪರಿಸರ,ಜೀವಿಶಾಸ್ತ್ರ,ಪ್ರವಾಸೋದ್ಯಮ ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಸ್ವಾಗತಿಸಿದರು.
ಕಲಬುರಗಿ ವಿಭಾಗೀಯ ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ್, ಐಜಿಪಿ ಮನಿಷ್ ಖರ್ಬಿಕರ್,ಬಳ್ಳಾರಿ ಜಿಲ್ಲಾಧಿಕಾರಿಗಳಾದ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ,ಅಪರ ಪೆÇಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಮತ್ತಿತರರು ಇದ್ದರು.
ನಂತರ ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ.ಉಷಾ ಅವರು ತುಂಗಾಭದ್ರಾ ಜಲಾಶಯದ ಸೌಂದರ್ಯ ಮತ್ತು ಜಲಧಾರೆ ಕಣ್ತುಂಬಿಕೊಳ್ಳಲು ತೆರಳಿದರು.
ಉಪರಾಷ್ಟ್ರಪತಿಗಳು ಭೇಟಿ ಹಿನ್ನೆಲೆ ನಗರದಾದ್ಯಂತ ಬೀಗಿಬಂದೋಬಸ್ತ್ ಕೈಗೊಳ್ಳಲಾಗಿದೆ.
ಉಪರಾಷ್ಟ್ರಪತಿಗಳು ಬರುವ ಅರ್ಧಗಂಟೆ ಮುಂಚೆ ಹನಿ ಹನಿಯ ಮಳೆ ಸಿಂಪಡಿಸುವ ಮೂಲಕ ವರುಣ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಉಪರಾಷ್ಟ್ರಪತಿಗಳು ರಸ್ತೆ ಮಾರ್ಗವಾಗಿ ತುಂಗಭದ್ರಾ ಜಲಾಶಯಕ್ಕೆ ತೆರಳುತ್ತಿರುವುದನ್ನು ರಸ್ತೆಯುದ್ದಕ್ಕೂ
ಸಾರ್ವಜನಿಕರು ನಿಂತು ವೀಕ್ಷಿಸಿದರು ಮತ್ತು ಅನೇಕರು ವಿಡಿಯೋ ಮಾಡಿಕೊಂಡರು ಹಾಗೂ ಫೆÇೀಟೊ ಕ್ಲಿಕ್ಕಿಸಿಕೊಂಡಿರುವುದು ವಿಶೇಷವಾಗಿತ್ತು.
—-

Share and Enjoy !

Shares