ನಾಡಿನ ಎಲ್ಲೆಡೆ ವರ ಮಹಾಲಕ್ಷ್ಮಿ ಹಬ್ಬದ ಸಂಭ್ರಮ: ಶುಭ ಕೋರಿದ ಸಿ.ಎಂ. ಬೊಮ್ಮಾಯಿ

Share and Enjoy !

Shares
Listen to this article

ವಿಜಯನಗರ ವಾಣಿ 

ನಾಡಿನಾದ್ಯಂತ ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬ ಸಂಭ್ರಮ. ಹೆಣ್ಣು ಮಕ್ಕಳು ಲಗುಬಗೆಯಿಂದ ಬೆಳಗ್ಗೆಯೇ ಎದ್ದು ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ, ಮನೆ ಮುಂದೆ ರಂಗೋಲಿ, ತೋರಣ ಹಾಕಿ ಹೊಸ ಬಟ್ಟೆ, ಆಭರಣ ತೊಟ್ಟು ದೇವಿಯ ಪೂಜೆಗೆ ಸಿದ್ಧರಾಗಿದ್ದಾರೆ.

ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೂ-ಹಣ್ಣುಗಳ ಮಾರಾಟ, ಖರೀದಿ ಭರಾಟೆ ಹೆಚ್ಚಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಪ್ರಸಿದ್ಧ ದೇವರಾಜ ಮಾರುಕಟ್ಟೆಯನ್ನು ಜಿ.ಕೆ.ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ದೇವಸ್ಥಾನಗಳು ತೆರೆದಿಲ್ಲ. ಜನರು ಸಾಧ್ಯವಾದಷ್ಟು ಮನೆಗಳಲ್ಲಿಯೇ ತಮ್ಮ ತಮ್ಮ ಇಷ್ಟಾನುಸಾರ ದೇವಿಯ ಪೂಜೆ, ವ್ರತ, ಭಜನೆ ಮಾಡುವುದು ಒಳಿತು.

ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರ ಮಹಾಲಕ್ಷ್ಮಿ ಹಿಂದೂ ಜನರ ಪಾಲಿಗೆ ಅತ್ಯಂತ ಪವಿತ್ರ ಮತ್ತು ಮುಖ್ಯವಾದ ಹಬ್ಬವಾಗಿದೆ. ಕ್ಷೀರ ಸಮುದ್ರ ಸಂಭವೆ ಮಹಾಲಕ್ಷ್ಮಿ ನಿತ್ಯ ಶುದ್ಧಳು, ನಿತ್ಯ ಸಿದ್ದಳು. ಸೃಷ್ಟಿಯ ಎಲ್ಲಾ ಸುವಸ್ತುಗಳಲ್ಲಿ ನೆಲೆಸಿರುವಳು. ಜಗನ್ಮಾತೆಯು ಸರ್ವರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.

ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ: ನಾಡಿನ ಸಮಸ್ತ ಜನತೆಗೆ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ಸೇರಿದಂತೆ ಗಣ್ಯರು, ಸೆಲೆಬ್ರಿಟಿಗಳು ಶುಭಾಶಯ ತಿಳಿಸಿದ್ದಾರೆ.

Share and Enjoy !

Shares