ರಾಜಸ್ಥಾನದ ಜಾಲೋರ್​​ನಲ್ಲಿ ಮಣ್ಣಿನ ದಿಬ್ಬ ಕುಸಿದು 5 ಮಂದಿ ಸಾವು.!

Share and Enjoy !

Shares
Listen to this article

ವಿಜಯನಗರ ವಾಣಿ

ನೀರಿನ ಟ್ಯಾಂಕ್​​ ನಿರ್ಮಾಣವಾಗುತ್ತಿದ್ದ ಸ್ಥಳದಲ್ಲಿ ಮಣ್ಣಿನ ದಿಬ್ಬ ಕುಸಿದು ಮಗು ಸೇರಿ ಒಟ್ಟು ಐವರು ಮೃತಪಟ್ಟ ಘಟನೆ ರಾಜಸ್ಥಾನದ ಜಾಲೋರ್​​ನಲ್ಲಿ ನಡೆದಿದೆ. ಪ್ರಸ್ತುತ ನಿರ್ಮಾಣ ತಾಣದಲ್ಲಿ ಕೆಲಸಗಾರರು ನೀರಿನ ಟ್ಯಾಂಕ್​​ನ್ನು ಅಗೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಅಲ್ಲಿಗೆ ವಿಪತ್ತು ಪ್ರತಿಕ್ರಿಯಾ ತಂಡವೊಂದು ತೆರಳಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ. ಹಾಗೇ, ಈ ಮಣ್ಣಿನ ದಿಬ್ಬ ಕುಸಿತದ ವಿಷಯವನ್ನು ಸುಮ್ಮನೆ ಬಿಡಲಾಗುವುದಿಲ್ಲ. ತನಿಖೆ ನಡೆಸಲಾಗುವುದು ಎಂದು ಜಾಲೋರ್​​ನ ಡಿಎಸ್​ಪಿ ಹಿಮ್ಮತ್​ ಚರಣ್​ ತಿಳಿಸಿದ್ದಾರೆ.

ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ಮಣ್ಣಿನ ದಿಬ್ಬ ಕುಸಿದು, ಜನರ ಮೈಮೇಲೆ ಬಿದ್ದಿದೆ. ಮಣ್ಣಿನಡಿ ಸಿಲುಕಿದ್ದ ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಹೋಗುವುದರೊಳಗೆ ಜೀವ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜಾಲೋರ್​​ ಅವಘಡದಲ್ಲಿ ಮೃತಪಟ್ಟವರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮಾಡಿರುವ ಗೆಹ್ಲೋಟ್​, ನೀರಿನ ಟ್ಯಾಂಕ್​ ನಿರ್ಮಾಣವಾಗುತ್ತಿದ್ದ ಜಾಲೋರ್​​ನಲ್ಲಿ ಮಣ್ಣಿನ ದಿಬ್ಬ ಕುಸಿದು ಹೆಣ್ಣು ಮಗು ಸೇರಿ ಐವರು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

 

Share and Enjoy !

Shares