ಮಕ್ಕಳೊಂದಿಗೆ ಮಗುವಾದ ಸಿ.ಎಂ.ಬೊಮ್ಮಾಯಿ : ತಮ್ಮ ನೆಚ್ಚಿನ ನಟಿಯರ ಬಗ್ಗೆ ಮನದಾಳದ ಮಾತು

Share and Enjoy !

Shares
Listen to this article

ವಿಜಯನಗರ ವಾಣಿ

ಎಲ್ಲ ವೇದಿಕೆಗಳಲ್ಲೂ ರಾಜಕಾರಣಿಗಳು ಗಂಭೀರ ವಿಚಾರಗಳನ್ನೇ ಮಾತನಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೀ ಕನ್ನಡ ವಾಹಿನಿಯ ವೇದಿಕೆಯಲ್ಲಿ ತುಂಬ ಲವಲವಿಕೆಯಿಂದ ಮಕ್ಕಳ ಜೊತೆ ಮಾತನಾಡಿದರು. ಜೀ ಕನ್ನಡದ 15ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಅವರು ಅತಿಥಿಯಾಗಿ ಆಗಮಿಸಿದ್ದರು. ಆಗ ಅವರಿಗೆ ಮಕ್ಕಳು ಕೆಲವು ಪ್ರಶ್ನೆಗಳನ್ನು ಕೇಳಿದರು. ಅವುಗಳಿಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ ಅವರು ಎಲ್ಲರ ಮುಖದಲ್ಲೂ ನಗು ಮೂಡಿಸಿದರು. ಮಕ್ಕಳು ಕೇಳಿದ ಪ್ರಶ್ನೆಗಳೇನು? ಅದಕ್ಕೆ ಸಿಎಂ ಕಡೆಯಿಂದ ಬಂದ ಉತ್ತರಗಳೇನು ಎಂಬುದರ ಪೂರ್ತಿ ವಿವರ ಇಲ್ಲಿದೆ.

ಮಕ್ಕಳ ಪ್ರಶ್ನೆ 1: ಅಂಕಲ್​ ನಿಮ್ಮ ಅಮ್ಮ ಮಾಡುವ ಯಾವ ಅಡುಗೆ ನಿಮಗೆ ಹೆಚ್ಚು ಇಷ್ಟ?

ಸಿಎಂ ಉತ್ತರ: ನಮ್ಮ ತಾಯಿ ಬಿಸಿಬಿಸಿ ಜೋಳದ ರೊಟ್ಟಿ ಮಾಡುತ್ತಿದ್ದರು. ಅದು ನನಗೆ ಬಹಳ ಇಷ್ಟ. ಅದರ ಮೇಲೆ ಸ್ವಲ್ಪ ತುಪ್ಪ ಹಾಕಿಕೊಂಡು ತಿನ್ನಲು ಶುರುಮಾಡಿದರೆ ಲೆಕ್ಕವೇ ಇರುವುದಿಲ್ಲ. ಆದರೆ ಈಗ ನಮ್ಮ ತಾಯಿ ಇಲ್ಲ. ಈಗ ಯಾರೇ ಬಿಸಿ ರೊಟ್ಟಿ ಮಾಡಿದರೂ ನಮ್ಮ ತಾಯಿಯೇ ಮಾಡಿದ್ದಾರೆ ಎಂದುಕೊಂಡು ತಿನ್ನುತ್ತೇನೆ.

ಮಕ್ಕಳ ಪ್ರಶ್ನೆ 2: ಅಂಕಲ್​ ನೀವು ಯಾವಾಗಲೂ ಬ್ಯುಸಿ ಇರ್ತೀರಿ ಅಲ್ವಾ? ಮಕ್ಕಳಿಗೆ ಆನ್​ಲೈನ್​ ಕ್ಲಾಸ್​ ಹೇಳಿಕೊಡುತ್ತೀರಾ?

ಸಿಎಂ ಉತ್ತರ: ನೋಡು ಮರಿ, ನನಗೆ ಮೊಮ್ಮಗಳು ಇಲ್ಲ. ಆದರೆ ನೀವೆಲ್ಲರೂ ನನ್ನ ಮೊಮ್ಮಕ್ಕಳಿದ್ದಂತೆ. ಹಾಗಾಗಿ ನೀವು ಆನ್​ಲೈನ್​ಗೆ ಬಂದಾಗ ನಾನು ನಿಮಗೆ ಸಿಗುತ್ತೇನೆ. ನಿಮ್ಮನ್ನೆಲ್ಲ ನೋಡಿದ ಮೇಲೆ ನನಗೂ ಮೊಮ್ಮಕ್ಕಳು ಬೇಕು ಅನಿಸ್ತಾ ಇದೆ. ಇದನ್ನು ನನ್ನ ಮಗನಿಗೆ ಮನವರಿಕೆ ಮಾಡಿಸುತ್ತೇನೆ.

ಮಕ್ಕಳ ಪ್ರಶ್ನೆ 3: ನಾವು ತುಂಬ ಸಿನಿಮಾಗಳಲ್ಲಿ ನೋಡಿರುವ ಸಿಎಂ ಬೇರೆ ಬೇರೆ ಥರ ಇದ್ದರು. ನೀವೇನು ಸರ್​ ಇಷ್ಟು ಸಿಂಪಲ್​ ಆಗಿದ್ದೀರಲ್ಲಾ?

ಸಿಎಂ ಉತ್ತರ: ಅದು ಸಿನಿಮಾ ಕಣೋ. ಸಿನಿಮಾದಲ್ಲಿ ಆರ್ಭಟ ಇರಲೇಬೇಕು. ಹಾಗಿದ್ದಾಗಲೇ ಸಿನಿಮಾ ನೋಡೋಕೆ ಜನ ಬರೋದು. ಆದರೆ ನಿಜಜೀವನದಲ್ಲಿ ನಾವು ಆರ್ಭಟ ಮಾಡಿದರೆ ಜನರು ಕೇಳಲ್ಲ. ಹಾಗಾಗಿ ನಾವು ಇಲ್ಲಿ ಸಿಂಪಲ್​ ಆಗಿ ಇರಲೇಬೇಕು.

ಮಕ್ಕಳ ಪ್ರಶ್ನೆ 4: ನಿಮ್ಮ ಫೇವರಿಟ್​ ಹೀರೋಯಿನ್​ ಯಾರು?

ಸಿಎಂ ಉತ್ತರ: ಇದು ಬಹಳ ಕಷ್ಟದ ಪ್ರಶ್ನೆ. ಯಾಕೆಂದರೆ ಬಹಳ ಜನ ಇದ್ದಾರೆ. ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರಿಗೆ ಬೇಜಾರಾಗುತ್ತದೆ. ನನ್ನ ಆಲ್​ಟೈಮ್​ ಫೇವರಿಟ್​ ಹೀರೋಯಿನ್​ ಮಧುಬಾಲ. ಕನ್ನಡದಲ್ಲಿ ಹೇಳುವುದಾದರೆ, ನಮ್ಮ ಕಾಲದ ಟಾಪ್​ 3 ಹೀರೋಯಿನ್​ಗಳಾದ ಕಲ್ಪನಾ, ಜಯಂತಿ ಮತ್ತು ಭಾರತಿ ನನ್ನ ಫೇವರಿಟ್​. ಡಾ. ರಾಜ್​ಕುಮಾರ್​ ಅವರು ನನ್ನ ಆಲ್​ಟೈಮ್ ಫೇವರಿಟ್​ ಹೀರೋ.

 

ಮಕ್ಕಳ ಪ್ರಶ್ನೆ 5: ನೀವು ಯಾವಾಗಲೂ ಮೆಲುಕು ಹಾಕುವ ನಿಮ್ಮ ಫೇವರಿಟ್​ ಹಾಡು ಯಾವುದು?

ಸಿಎಂ ಉತ್ತರ: ‘ಹುಟ್ಟಿದರೇ ಕನ್ನಡ ನಾಡಲ್​ ಹುಟ್ಟಬೇಕು..’ ಇದು ನನ್ನ ಫೇವರಿಟ್​. ಇನ್ನೊಂದು ಹೇಳಬೇಕೆಂದರೆ, ‘ಬಾನಿಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆ ಇದೆ..’ ಈ ಸಾಂಗ್​ ಕೂಡ ನನ್ನ ಫೇವರಿಟ್​.

Share and Enjoy !

Shares