ಮಲಿಯಾಳಂ ಖ್ಯಾತ ನಟಿ ಚಿತ್ರ ನಿಧನ

Share and Enjoy !

Shares
Listen to this article

ವಿಜಯನಗರ ವಾಣಿ

ಮಲಯಾಳಂ ನಟಿ ಚಿತ್ರಾ ಅವರು ಹೃದಯಾಘಾತದಿಂದಾಗಿ ಇಂದು (ಆಗಸ್ಟ್ 21) ನಿಧನರಾಗಿದ್ದಾರೆ. ಚೆನ್ನೈನ ಅವರ ನಿವಾಸದಲ್ಲಿ 56 ವರ್ಷದ ಚಿತ್ರಾ ಕೊನೆಯುಸಿರೆಳೆದಿದ್ದಾರೆ. ಚಿತ್ರಾ ಸಾವಿನ ಸುದ್ದಿ ಕುಟುಂಬಸ್ಥರು, ಚಿತ್ರರಂಗದವರಿಗೆ ಶಾಕ್ ನೀಡಿದೆ. ಸಾಕಷ್ಟು ಜನರು ಚಿತ್ರಾ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಚಿತ್ರಾ ಅವರು ಪತಿ ವಿಜಯರಾಘವನ್, ಮಗಳು ಮಹಾಲಕ್ಷ್ಮೀಯನ್ನು ಅಗಲಿದ್ದಾರೆ. ಕೆಎಸ್ ರವಿಕುಮಾರ್ ಅವರ ‘ಚೆರನ್ ಪಾಂಡಿಯನ್’, ಪಂಡಿರಾಜನ್ ಅವರ ‘ಗೋಪಾಲ ಗೋಪಾಲ’ ಸಿನಿಮಾದ ಪಾತ್ರಗಳ ಮೂಲಕ ಖ್ಯಾತಿ ಪಡೆದಿದ್ದರು. ನಲ್ಲೆನೈ ಕಮರ್ಷಿಯಲ್‌ನಲ್ಲಿ ನಟಿಸಿದ ನಂತರದಲ್ಲಿ ಚಿತ್ರಾ ಅವರನ್ನು ನಲ್ಲೆನೈ ಚಿತ್ರಾ ಅಂತ ಕರೆಯಲಾಗುತ್ತಿತ್ತು.

ಸಾಲಿಗ್ರಾಮಂನಲ್ಲಿ ಚಿತ್ರಾ ಕುಟುಂಬದೊಂದಿಗೆ ವಾಸವಾಗಿದ್ದರು. ಕೆಲ ಧಾರಾವಾಹಿಗಳಲ್ಲಿಯೂ ಚಿತ್ರಾ ಬಣ್ಣ ಹಚ್ಚಿದ್ದರು. 1975ರಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ಚಿತ್ರಾ ಸಾಕಷ್ಟು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮಲಯಾಳಂ, ತಮಿಳು ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ಚಿತ್ರಾ ನಟಿಸಿದ್ದಾರೆ.

ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಯಲ್ಲಿಯೂ ಚಿತ್ರಾ ನಟಿಸಿದ್ದಾರೆ. ಸುಮಾರು 100 ಸಿನಿಮಾಗಳಲ್ಲಿ ಚಿತ್ರ ಬಣ್ಣ ಹಚ್ಚಿದ್ದು, ಮೋಹನ್‌ಲಾಲ್, ಪ್ರೇಮ್ ನಾಜೀರ್ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. ಕನ್ನಡಲದಲ್ಲಿ ‘ಸುಂದರ ಸ್ವಪ್ನಗಳು’, ‘ಕೃಷ್ಣ ಮೆಚ್ಚಿದ ರಾಧೆ’, ‘ಅಜಯ್ ವಿಜಯ್’ ಸಿನಿಮಾದಲ್ಲಿ ಚಿತ್ರಾ ಕಾಣಿಸಿಕೊಂಡಿದ್ದರು.

 

Share and Enjoy !

Shares