ಬಿಜೆಪಿ ಸರ್ಕಾರದ ವಿರುದ್ಧ ಸೆಪ್ಟೆಂಬರ್ 20ರಿಂದ 30ರವರೆಗೆ ದೇಶಾದ್ಯಂತ ಪ್ರತಿಪಕ್ಷಗಳು ಪ್ರತಿಭಟನೆ

Share and Enjoy !

Shares
Listen to this article

ವಿಜಯನಗರ ವಾಣಿ

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸೆಪ್ಟೆಂಬರ್ 20ರಿಂದ 30ರವರೆಗೆ ದೇಶಾದ್ಯಂತ ಪ್ರತಿಪಕ್ಷಗಳು ಜಂಟಿಯಾಗಿ ಪ್ರತಿಭಟನೆ ನಡೆಸಲಿವೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ನಡೆಸಿದ ವರ್ಚುಯಲ್ ಸಭೆಯ ನಂತರ 19 ರಾಜಕೀಯ ಪಕ್ಷಗಳು ಜಂಟಿ ಹೇಳಿಕೆಯಲ್ಲಿ ಈ ವಿಷಯವನ್ನು ತಿಳಿಸಿವೆ.

ದೇಶದ ಜಾತ್ಯಾತೀತ, ಪ್ರಜಾಸತಾತ್ಮಕ ಮತ್ತು ಗಣರಾಜ್ಯದ ರಕ್ಷಣೆಗಾಗಿ ಏದ್ದೇಳುವಂತೆ ಜನರಿಗೆ 19 ಪ್ರತಿಪಕ್ಷಗಳ ಮುಖಂಡರು ಕರೆ ನೀಡಿದ್ದಾರೆ. ಮೋದಿ ಸರ್ಕಾರದ ಮುಂದೆ 11 ಅಂಶಗಳ ಬೇಡಿಕೆ ಪಟ್ಟಿ ಸಲ್ಲಿಸಿರುವ ಪ್ರತಿಪಕ್ಷಗಳು, ಮುಂಗಾರು ಅಧಿವೇಶನ ವಾಶ್ ಔಟ್ ನ್ನು ಖಂಡಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣ ಜನರ ಸಂಕಟಗಳತ್ತ ಗಮನ ಹರಿಸಲಿಲ್ಲ, ಇದು ಜೀವನ ಹಾಳಾಗುವುದನ್ನು ಮುಂದುವರಿಸುವ ಅಶುಭದ ಎಚ್ಚರಿಕೆ ಎಂದು ಪ್ರತಿಪಕ್ಷಗಳು ಹೇಳಿವೆ.

Share and Enjoy !

Shares