ವಿಜಯನಗರವಾಣಿ ಸುದ್ದಿ: ರಾಯಚೂರು ಜಿಲ್ಲೆ
ಲಿಂಗಸುಗೂರು ; ತಾಲೂಕಿನ ಯರಡೋಣ-ನವಲಕಲ್ ಮುಖ್ಯರಸ್ತೆಯ ವಂದಲಿ ಕ್ರಾಸದಿಂದ ಚಿಂಚರಕಿ ಗ್ರಾಮದವರೆಗೆ ಅಂದಾಜು 8 ಕೋಟಿ 30 ಲಕ್ಷ ಮೊತ್ತದ (ಹಟ್ಟಿ- ಚಿಂಚರಕಿ ರಸ್ತೆ) ರಸ್ತೆ ಡಾಂಬರೀಕರಣ ಕಾಮಗಾರಿಗೆ ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕಾಮಗಾರಿ ಉದ್ಘಾಟನೆಗೆ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ರವರನ್ನು ಆಹ್ವಾನ ಮಾಡಿಲ್ಲ ಎಂದು ಬಿಜೆಪಿ ಪಕ್ಷದ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮಾತಿನ ಚಕಮಕಿ ನಡೆಯಿತು.